🔥 TRENDING Fact Check: Nitin Gadkari Did Not Clai... Japanese Tourist’s First Overnight Tra... Ranbir Kapoor’s ‘Ramayana’ Surpasses ‘... Ayushmann Khurrana's 'Yeh Prem Mol Liy... Gunmaaster G9 Box Office: Emraan Hashm... Ilaiyaraaja Pen Lyrics for Song in Sup...
26 Nov 2026•
ગુજરાતી मराठी ਪੰਜਾਬੀ বাংলা

ಜಾತ್ರೆ ಹಣ ಶಾಲಾಭಿವೃದ್ಧಿಗೆ ವಿನಿಯೋಗ ಮಸಬಿನಾಳ ಗೆಳೆಯರ ಬಳಗದ ಮಾದರಿ ಕಾರ್ಯ

✍️ Reporter: Mallikarjun Gabbur 🗓 26 Nov 2026, 08:37 AM 👁 16
Share: 💬 WhatsApp 📘 Facebook 𝕏 Post

'ಸ್ವಾತಂತ್ರ್ಯ, ಹೋರಾಟಗಾರರ ಗ್ರಾಮ'ವೆಂದೇ ಪ್ರಸಿ. ದ್ಧವಾಗಿರುವ ತಾಲ್ಲೂಕಿನ ಮಸಬಿನಾಳ ಗ್ರಾಮದ ಆರಾಧ್ಯ ದೈವ ಗೌರಿಶಂಕರ ಜಾತ್ರೆಯ ಅಂಗವಾಗಿ ಗೆಳೆಯರ ಬಳಗದಿಂದ ಪ್ರತಿವರ್ಷ ರಸಮಂಜರಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗ ಳು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ಬರ ಸ್ಥಿತಿಯಿಂದಾಗಿ ಮನರಂಜನೆ, ಅನಗತ್ಯ ಅದ್ದೂರಿ ತನಕ್ಕೆ ಕಡಿವಾಣ ಹಾಕಿ, ಗ್ರಾಮದ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವ ಸಂಕಲ್ಪವನ್ನು ಬಳಗದ ಸದಸ್ಯರು ಮಾಡಿದ್ದಾರೆ.

'ಸ್ವಾತಂತ್ರ್ಯ, ಹೋರಾಟಗಾರರ ಗ್ರಾಮ'ವೆಂದೇ ಪ್ರಸಿ. ದ್ಧವಾಗಿರುವ ತಾಲ್ಲೂಕಿನ ಮಸಬಿನಾಳ ಗ್ರಾಮದ ಆರಾಧ್ಯ ದೈವ ಗೌರಿಶಂಕರ ಜಾತ್ರೆಯ ಅಂಗವಾಗಿ ಗೆಳೆಯರ ಬಳಗದಿಂದ ಪ್ರತಿವರ್ಷ ರಸಮಂಜರಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗ ಳು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ಬರ ಸ್ಥಿತಿಯಿಂದಾಗಿ ಮನರಂಜನೆ, ಅನಗತ್ಯ ಅದ್ದೂರಿ ತನಕ್ಕೆ ಕಡಿವಾಣ ಹಾಕಿ, ಗ್ರಾಮದ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವ ಸಂಕಲ್ಪವನ್ನು ಬಳಗದ ಸದಸ್ಯರು ಮಾಡಿದ್ದಾರೆ.
ಮಸಬಿನಾಳದ ಗೌರಿಶಂಕರ ಜಾತ್ರೆ ನಿಮಿತ್ತ ಗ್ರಾಮದ ಗೆಳೆಯರ ಬಳಗದ ಸದಸ್ಯರು ಒಗ್ಗೂಡಿ ಗ್ರಾಮದ ಕೆಜಿಎಸ್ ಸರ್ಕಾರಿ ಶಾಲೆಗೆ ಅಂದಾಜು 1.50 ಲಕ್ಷ ವೆಚ್ಚದಲ್ಲಿ ಸುಣ್ಣ ಬಣ್ಣಹಚ್ಚಿಸಿ ಶಾಲೆಯ ಕಟ್ಟಡಕ್ಕೆ ಹೊಸಕಳೆ ನೀಡಿದ್ದಾರೆ. ಅಲ್ಲದೆ, ಎಇಎಪಿಎಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಹಕಾರದೊಂದಿಗೆ ಬಳಗದ ಸದಸ್ಯ ಮಾಂತೇಶ ಸಿ. ಕೂಡಗಿಮಠ ಅವರು ಗ್ರಾಮದ ವಿವಿಧ ಶಾಲೆಗಳಿಗೆ ಸುಮಾರು 3 ಲಕ್ಷ ಮೌಲ್ಯದ ಆರು ವಾಟರ್ ಫಿಲ್ಟರ್‌ಗಳನ್ನು ಕೊಡಿಸಿದ್ದಾರೆ. ಶಾಲಾ ಆವರಣದಲ್ಲಿ ಅಪೂರ್ಣವಾಗಿದ್ದ ಸಭಾಭವನದ ಕಟ್ಟಡ ಪೂರ್ಣಗೊಳಿಸುವ ಕಾರ್ಯಕ್ಕೂ ಬಳಗದ ಸದಸ್ಯರು ಕೈಜೋಡಿಸಿದ್ದಾರೆ.
ಗೆಳೆಯರ ಬಳಗದಲ್ಲಿ ನೂರಾರು ಸದಸ್ಯರಿದ್ದು, ಬಹುತೇಕರು ಉದ್ಯೋಗ, ವೃತ್ತಿ ನಿಮಿತ್ತ ಬೇರೆ ಬೇರೆ ಊರು ಪಟ್ಟಣಗಳಲ್ಲಿ ನೆಲೆಸಿದ್ದಾರೆ. ಅದರೂ ಜಾತ್ರೆಯ ಸಂದರ್ಭದಲ್ಲಿ ಎಲ್ಲರೂ ಗ್ರಾಮದಲ್ಲಿ ಮರಳಿ ಒಗ್ಗೂಡುವುದು ವಿಶೇಷ. ಊರಿನ ಅಭಿವೃದ್ಧಿಗೆ ಗೆಳೆಯರ ಬಳಗದಿಂದ ಸೇವಾಕಾರ್ಯ ವಿಚಾರ ಬಂದಾಗ ಕೆಲವರು ಆರ್ಥಿಕ ನೆರವು ನೀಡಿದರೆ, ಇನ್ನು ಕೆಲವರು ಅಗತ್ಯ ಸಾಮಗ್ರಿ ಹಾಗೂ ವಸ್ತುಗಳನ್ನು ಒದಗಿಸುವ ಮೂಲಕ ಸೇವಾ ಕಾರ್ಯಗಳಲ್ಲಿ ಪಾಲ್ಗೊ-ಳ್ಳುತ್ತಾರೆ.
2018ರಲ್ಲಿ ಗ್ರಾಮದ ಸಮಾನ ಮನಸ್ಕ ಯುವಕರು ಈ ಬಳಗ ಸ್ಥಾಪಿಸಿದ್ದಾರೆ. ಅಂದಿನಿಂದ ಗ್ರಾಮದಲ್ಲಿ ಜನಪದ ಸಂಸ್ಕೃತಿ ಉಳಿವಿಗಾಗಿ ವಿವಿಧ ಜಿಲ್ಲೆಗಳ ಕಲಾತಂಡಗಳಿಂದ ಕಾರ್ಯಕ್ರಮ ಆಯೋಜಿಸುವುದರ ಜತೆಗೆ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ.
ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳದಲ್ಲಿ ಗೆಳೆಯರ ಬಳಗದಿಂದ ಸರ್ಕಾರಿ ಕೆಜೆಎಸ್ ಶಾಲೆಗೆ ಬಣ್ಣ ಮಾಡಿಸಲಾಗಿದೆ
ಸಿದ್ದರಾಮ ಸ್ವಾಮಿಗಳ ನೇತೃತ್ವದಲ್ಲಿ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳಿ ಸಂತ್ರಸ್ತರಿಗೆ ನೆರವು ನೀಡಿದ್ದರು. ಕೋವಿಡ್ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲಿದವರಿಗೆ ನೆರವಿನ ಹಸ್ತಚಾಚಿದೆ.
ಮಸಬಿನಾಳದ ಗೆಳೆಯರ ಬಳಗವು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಈ ವರ್ಷ ಜಾತ್ರೆ ವೇಳೆ ಮನರಂಜನೆಗಿಂತ ಶಿಕ್ಷಣ, ಗ್ರಾಮಹಿತಕ್ಕೆ ಆದ್ಯತೆ ನೀಡಿರುವ ಕಾರ್ಯ ಮಾದರಿಯಾಗಿದೆ.
ಸಸಿ ವಿತರಣೆ, ಪರಿಸರ ಜಾಗೃತಿ ಜಾಥಾ, ರಕ್ತದಾನ ಶಿಬಿರ ಹಮ್ಮಿಕೊಂಡು ಬಂದಿದ್ದಾರೆ. ಗ್ರಾಮದಲ್ಲಿ ಓದುವ ಸಂಸ್ಕೃತಿ ಬೆಳೆಸಲು ಗ್ರಂಥಾಲಯ ನಿರ್ಮಿಸಿದ್ದು, ಯೋಧರು. ರೈತರು, ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿ, ಅಂಗನವಾಡಿ ಕಾರ್ಯಕ-ರ್ತೆಯರು ಹಾಗೂ ಶಿಕ್ಷಕರನ್ನು ಗೌರವಿಸುತ್ತಿದ್ದಾರೆ.
ಗೆಳೆಯರ ಬಳಗದಿಂದ ನಮ್ಮೂರಿನ ಶಾಲಾ ಮಕ್ಕಳಿಗೆ ಅತ್ಯುತ್ತಮ ಕಲಿಕಾ ವಾತಾವರಣ ಕಲ್ಪಿಸಬೇಕೆಂಬ ಸಂಕಲ್ಪದೊಂದಿಗೆ ಸರ್ಕಾರಿ ಶಾಲೆಗೆ ಬಣ್ಣ, ಶುದ್ಧ ಕುಡಿಯುವನೀರು ಹಾಗೂ ಶಾಲೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲು
ಮುಂದಾಗಿದ್ದೇವೆ ಬಸಲಿಂಗಯ್ಯ ಕೂಡಗಿಮಠ, ಎಸ್‌ಡಿಎಂಸಿ ಅಧ್ಯಕ್ಷ,ಕಜಿಎನ್‌ಶಾಲೆ, ಮಸಬಿನಾಳ
ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದಾರೆ.
ನ.28ರಂದು ಗೌರಿಶಂಕರ ಭವ್ಯ ರಥೋತ್ಸವ ಹಾಗೂ ನ.29ರಂದು ಮೂರ್ತಿ ವಿಸರ್ಜನೆ ನಡೆಯಲಿದೆ. ಎರಡೂ ದಿನ ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ಹಾಗೂ ರಾತ್ರಿ ಸಾಮಾಜಿಕ ನಾಟಕ ಪ್ರದರ್ಶನ ಇರಲಿದೆ
📲Get App