🔥 TRENDING कोटा विधायक अटल श्रीवास्तव से आयुर्वेद... ಮೈಸೂರಿನಲ್ಲಿ ಸಂವಿಧಾನ ದಿನದ ಉದ್ಘಾಟನೆ ಕಾರ್... ২৬ নভেম্বর মুম্বই সন্ত্রাসী হামলায় নি... पश्चिम चंपारण कि ऐतिहासिक धरती बेतिया... हजारीबाग में अवैध शराब पर छापामारी, 34... Meghalaya Government Withdraws Coal Mi...
26 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಸಂವಿಧಾನ ದಿನಾಚರಣೆ: ### ಸಂವಿಧಾನದ ಆಶಯಗಳ ರಕ್ಷಣೆಗೆ ಗಣ್ಯರ ಕರೆ;

✍️ Reporter: Khaja Hussain 🗓 26 Nov 2026, 05:57 PM 👁 18
Share: 💬 WhatsApp 📘 Facebook 𝕏 Post
.

**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿಯಲ್ಲಿ ಸಂವಿಧಾನ ದಿನಾಚರಣೆ:

### ಸಂವಿಧಾನದ ಆಶಯಗಳ ರಕ್ಷಣೆಗೆ ಗಣ್ಯರ ಕರೆ;

**ಜಾಲಹಳ್ಳಿ, ನ.26:** ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.

ನವೆಂಬರ್ 26ರ ಸಂವಿಧಾನ ದಿನದ ಅಂಗವಾಗಿ ಸಂವಿಧಾನದ ಮಹತ್ವ, ಆಶಯಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿ, ಪರಿಶ್ರಮ ಹಾಗೂ ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಸ್ಮರಿಸಲಾಯಿತು.

1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಸಂವಿಧಾನ ಸಭೆ ಅಂಗೀಕರಿಸಿದ್ದು, 1950ರ ಜನವರಿ 26ರಂದು ಜಾರಿಗೆ ಬಂದಿದೆ. ಸಂವಿಧಾನವು ಪ್ರತಿಯೊಬ್ಬ ನಾಗರಿಕನ ಸ್ವಾತಂತ್ರ್ಯ, ಸಮಾನತೆ, ಘನತೆ ಹಾಗೂ ನ್ಯಾಯದ ಹಕ್ಕುಗಳನ್ನು ರಕ್ಷಿಸುವ ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭವಾಗಿದೆ. ಸಂವಿಧಾನದ ಪೀಠಿಕೆಯಲ್ಲಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳು ಸಮಾಜದ ಪ್ರತಿಯೊಬ್ಬರ ಬದುಕಿನಲ್ಲಿ ಸಾಕಾರಗೊಳ್ಳಬೇಕು ಎಂದು ಗಣ್ಯರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಾಬಣ್ಣ ಕಮ್ಮಾಲದಿನ್ನಿ ಹಾಗೂ ಪಿಎಸ್ಐ ವೈಶಾಲಿ ಜಳಕಿ ಅವರು ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಕೀಲ ವೆಂಕನಗೌಡ ಅವರು, ಸಂವಿಧಾನವನ್ನು ರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಇಂದಿನ ದಿನಗಳಲ್ಲಿ ಸಂವಿಧಾನವನ್ನು ಬದಲಾಯಿಸುವ ಹುನ್ನಾರಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಬಾಕ್ಸ್

ಪ್ರಗತಿಪರ ಹೋರಾಟಗಾರ ರಂಗಣ್ಣ ಕೊಲ್ಕರ್ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ವಿಶ್ವದ ಗಮನವನ್ನು ಭಾರತದತ್ತ ಸೆಳೆದಿದ್ದಾರೆ. ಅಸಮಾನತೆಯಿಂದ ಕೂಡಿದ್ದ ಸಮಾಜವನ್ನು ಸಮಾನತೆಯ ಹಾದಿಯಲ್ಲಿ ಮುನ್ನಡೆಸಲು ಸಂವಿಧಾನ ಮಹತ್ವದ ಪಾತ್ರ ವಹಿಸಿದೆ ಎಂದರು.
ಬಾಕ್ಸ್
ಸಾಬಣ್ಣ ಕಮ್ಮಾಲದಿನ್ನಿ ಮಾತನಾಡಿ, ಸಂವಿಧಾನವನ್ನು ಗೌರವಿಸುವುದು ಎಂದರೆ ಅದರ ಆಶಯಗಳನ್ನು ಗೌರವಿಸುವುದಾಗಿದೆ. ಪ್ರತಿಯೊಬ್ಬ ನಾಗರಿಕನ ಹಕ್ಕು, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಯನ್ನು ಕಾಪಾಡುವುದು ಸಂವಿಧಾನದ ರಕ್ಷಣೆಯಾಗಿದೆ. ಅನ್ಯಾಯ, ತಾರತಮ್ಯ ಹಾಗೂ ಶೋಷಣೆಯ ವಿರುದ್ಧ ಪ್ರತಿಯೊಬ್ಬರೂ ಸಂವಿಧಾನಬದ್ಧವಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಬಾಕ್ಸ್

ಮುಖಂಡ ಚಂದಪ್ಪ ಬುದ್ಧಿನ್ನಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮತದಾನದ ಹಕ್ಕಿಗೆ ಮಹತ್ವ ನೀಡಿ ಪ್ರಜಾಪ್ರಭುತ್ವದಲ್ಲಿ ಸಮಾನತೆಗೆ ಅವಕಾಶ ಕಲ್ಪಿಸಿದ್ದಾರೆ ಎಂದರು.

ಬಾಕ್ಸ್

ಪತ್ರಕರ್ತ ಗಿರಿಯಪ್ಪ ಪೂಜಾರಿ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಹಕ್ಕು ಮತ್ತು ಸಮಾನತೆಯ ಅವಕಾಶ ಕಲ್ಪಿಸಿದೆ. ಸಂವಿಧಾನ ನಮ್ಮ ಉಸಿರು ಎಂದು ಹೇಳಿದರು.
ಬಾಕ್ಸ್

ಮೌನೇಶ್ ಗಾಣದಾಳ್ ಮಾತನಾಡಿ, ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯನ್ನು ದೊರಕಿಸಿಕೊಡುವ ಮಹತ್ವದ ಸಾಧನವಾಗಿದೆ ಎಂದರು.

ಬಾಕ್ಸ್

### ಅಂಬೇಡ್ಕರ್ ವೃತ್ತಕ್ಕೆ ಗೇಟ್ ಅಳವಡಿಸಲು ಮನವಿ

ಜಾಲಹಳ್ಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ರಕ್ಷಣಾ ಗೇಟ್ ಅಳವಡಿಸುವಂತೆ ಭಾರತ ದಲಿತ ಸಂಘರ್ಷ ಸಮಿತಿ (ರಿ) ವತಿಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಅಂಬೇಡ್ಕರ್ ಅವರ ಭಾವಚಿತ್ರದ ಸುತ್ತ ಈಗಾಗಲೇ ಗ್ರಿಲ್ ಅಳವಡಿಸಲಾಗಿದ್ದು, ಅದಕ್ಕೆ ಗೇಟ್ ವ್ಯವಸ್ಥೆ ಮಾಡಿಲ್ಲ. ಭಾವಚಿತ್ರಕ್ಕೆ ಯಾವುದೇ ರೀತಿಯ ಹಾನಿ ಅಥವಾ ಅಪಮಾನವಾಗದಂತೆ ಮುಂಜಾಗ್ರತಾ ಕ್ರಮವಾಗಿ ತಕ್ಷಣ ಗೇಟ್ ಅಳವಡಿಸಬೇಕು ಎಂದು ಸಮಿತಿಯ ಪದಾಧಿಕಾರಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಈ ಕುರಿತು ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗೆ ಗೇಟ್ ಅಳವಡಿಸದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ಹಾಗೂ ಚಳವಳಿ ನಡೆಸಲಾಗುವುದು ಎಂದು ಸಮಿತಿಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಭಾರತ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ಬಾಳಪ್ಪ ಭಾವಿಮನಿ, ದಲಿತ ಮುಖಂಡ ಸಾಬಣ್ಣ ಕಮಲದಿನ್ನಿ, ಉಪಾಧ್ಯಕ್ಷ ಬಾಬು ಅಕ್ಕರಕಿ, ಕಾರ್ಯದರ್ಶಿ ಡಿ. ರಾಮಣ್ಣ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮನವಿಯ ಪ್ರತಿಯನ್ನು ದೇವದುರ್ಗ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಸಲ್ಲಿಸಲಾಗಿದೆ.

ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಸಾಬಣ್ಣ ಕಮ್ಮಾಲದಿನ್ನಿ ಪಿಎಸ್ಐ ವೈಶಾಲಿ ಜಳಕಿ, ರಂಗಣ್ಣ ಕೊಲ್ಕರ್, ಬಸವರಾಜ ಪಾಣಿ, ಭೀಮಣ್ಣ ಗುಮೇದಾರ, ಗಿರಿಯಪ್ಪ, ವಕೀಲ ವೆಂಕನಗೌಡ, ಖಾಜಾ ಹುಸೇನ್ ಬಾಬಾ, ಮೌನೇಶ್ ಗಾಣದಾಳ್, ರಮೇಶ್ ಬಾಗೂರು, ಬಾಳಪ್ಪ ಬಾವಿಮನಿ, ಚಂದಪ್ಪ ಬುದ್ಧಿನ್ನಿ, ಭೀಮಣ್ಣ ವಿರಗೋಟ್, ರಂಗಪ್ಪ, ತೊಗರಿ ರಂಗಪ್ಪ ಬಂಡಿ, ಚಂದಪ್ಪ ಬಾವಿಮನಿ, ಹೈದರ್ ಸಾಬ್ ಮುಲ್ಲಾ, ಎಂ.ಆರ್. ಬಸವ, ಹೈದರ್ ಸರ್ನೌಬತ್, ಯೇಸು ಡಿ.ಕೆ. ಕಮಲದಿನ್ನಿ, ಖುರಷಿದ್ ಪಟೇಲ್, ಚನ್ನಬಸವ ಭವಾನಿ, ರಾಜು, ದುರ್ಗೇಶ, ಯಲ್ಲಪ್ಪ ಗಾಜಲದಿನ್ನಿ, ಮೌನೇಶ್ ಚಪ್ಪಳ್ಳಕ್ಕಿ, ಚನ್ನಬಸವ ಸೌದ್ರಿ, ಈಶಣ್ಣ ಕಾಟ್ ಮಳ್ಳಿ, ಆಂಜನೇಯ ರಾಮ ಪಾಳಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರಾದ ಮಕತುಮ್ ಪರಾಶಿ, ಭೀಮಣ್ಣ ಅಂಜಳ್, ವೆಂಕಟೇಶ್ ಮುಸ್ಟಳ್ಳಿ, ಚನ್ನಪ್ಪ ಭವಾನಿ, ಭೀಮಣ್ಣ ಚಪ್ಪಳಕಿ, ರಂಗಣ್ಣ ಹೊಸೂರು, ದುರುಗಯ್ಯ ಯಲಗಟ್ಟಿ ಸೇರಿದಂತೆ ಹಲವು ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App