🔥 TRENDING Cabinet Approves ₹2,014-Crore Greenfie... AAP to Unveil Five-Year Performance Re... Two Punjab Hospitals Revamp Narrative... સુરેન્દ્રનગર LCBએ ધાંગધ્રા ના જેગડવા ગ... PM Narendra Modi to Launch NDA Punjab... Himanta Biswa Sarma Endorses New Defen...
25 Nov 2026•
ગુજરાતી मराठी ਪੰਜਾਬੀ বাংলা

ಯಲಗಟ್ಟಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಟ: ಟ್ಯಾಂಕರ್ ಮೂಲಕ ನೀರು ಸರಬರಾಜು

✍️ Reporter: Ningappa 🗓 25 Nov 2026, 09:34 PM 👁 13
Share: 💬 WhatsApp 📘 Facebook 𝕏 Post
ಲಿಂಗಸಗೂರು, ನ. 25: ತಾಲೂಕಿನ ಯಲಗಟ್ಟಾ ಗ್ರಾಮದಲ್ಲಿ ನೀರಿಗಾಗಿ ಗ್ರಾಮಸ್ಥರು ಹಲುಬುತ್ತಿದ್ದಾರೆ. ಗ್ರಾಮದಲ್ಲಿ ಮೂಲಭೂತ ಸೌಕರ್ಯ ಹಾಗೂ ಕುಡಿಯುವ ನೀರು ಇಲ್ಲದೆ ಬೋರ್‌ವೆಲ್‌ಗಳು ಮತ್ತು ಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದು, ಬಳಕೆ ನೀರು ಹಾಗೂ ಕುಡಿಯುವ ನೀರಿಗಾಗಿ ಜನರು ಪರಿತಪಿಸುವಂತಾಗಿದೆ.

ಈ ಹಿನ್ನೆಲೆಯಲ್ಲಿ ಜಲಧಾರೆ (ಜಲದಾನ) ಯೋಜನೆಯ ನೀರಿನ ಪೈಪ್‌ಲೈನ್ ಕಾಮಗಾರಿ ಮಾಡುತ್ತಿರುವ ಸಿಬ್ಬಂದಿಗಳ ಮೂಲಕ ಟ್ಯಾಂಕರ್‌ಗಳ ಮೂಲಕ ನೀರಿನ ಅನುಕೂಲತೆ ಕಲ್ಪಿಸಲಾಯಿತು. ಇದರಿಂದ ಗ್ರಾಮದ ಮಹಿಳೆಯರು ಮತ್ತು ಯುವಕರು ನೀರಿನ ಬಂಡಿಗಳ ಮೂಲಕ ನೀರು ಹಿಡಿದುಕೊಂಡರು.

ಬೇಸಿಗೆ ಕೊನೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ಸರಿಪಡಿಸಲು ಇಲಾಖೆ ಮತ್ತು ಆಡಳಿತ ಅಧಿಕಾರಿಗಳು ಜನರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ಕಂಬಗಳ ವ್ಯವಸ್ಥೆ ಹಾಗೂ ರಸ್ತೆಗಳ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
📲Get App