🔥 ट्रेंडिंग क्या पंजाब और हरियाणा में खेतों की आग... हरियाणा के मुख्यमंत्री ने भाजपा‑सद गठब... छत्तीसगढ़ के मुख्यमंत्री ने भिलाई के ल... ಕನೇರಿ ಸ್ವಾಮೀಜಿ ವಿರುದ್ಧ ಡಿ.3ರಂದು ಬೃಹತ್... तेलंगाना के कालेश्वरम् में गोदावरी में... ବାପା ଓ ପୁଅକୁ ଛୁରୀ ଦ୍ବାରା ମରଣାନ୍ତକ ଆକ୍ର...
25 नव. 2026•
ગુજરાતી मराठी ਪੰਜਾਬੀ বাংলা
देश

ಸಂವಿಧಾನ ಸಂರಕ್ಷಣೆಗಾಗಿ ದೇಶವ್ಯಾಪಿ ಪ್ರಜಾಪ್ರಭುತ್ವ ಮರುಸ್ಥಾಪನೆ ಅಭಿಯಾನ

✍️ रिपोर्टर: Basavaraj pujari 🗓 25 नव. 2026, 06:05 PM 👁 20
शेयर करें: 💬 WhatsApp 📘 Facebook 𝕏 Post

ಬೀದರ್: ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಆಶಯಗಳನ್ನು ದುರ್ಬಲಗೊಳಿಸಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನೀತಿಗಳನ್ನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ, ದೇಶವ್ಯಾಪಿ ಪ್ರಜಾಪ್ರಭುತ್ವ ಮರುಸ್ಥಾಪನೆ ಅಭಿಯಾನಕ್ಕೆ ನವೆ

ಸಂವಿಧಾನ ಸಂರಕ್ಷಣೆಗಾಗಿ ದೇಶವ್ಯಾಪಿ ಪ್ರಜಾಪ್ರಭುತ್ವ ಮರುಸ್ಥಾಪನೆ ಅಭಿಯಾನ

ಬೀದರ್: ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಆಶಯಗಳನ್ನು ದುರ್ಬಲಗೊಳಿಸಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನೀತಿಗಳನ್ನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ, ದೇಶವ್ಯಾಪಿ ಪ್ರಜಾಪ್ರಭುತ್ವ ಮರುಸ್ಥಾಪನೆ ಅಭಿಯಾನಕ್ಕೆ ನವೆಂಬರ್ 26ರಂದು ಬೀದರ್‌ನಲ್ಲಿ ಚಾಲನೆ ನೀಡಲಾಗುತ್ತಿದೆ.

2014ರಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಹತ್ತಿಕ್ಕುವ ಹಾಗೂ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ದೇಶದಲ್ಲಿ ಮತ್ತೆ ಮನುಸ್ಮೃತಿ ಆಧಾರಿತ ವ್ಯವಸ್ಥೆ ಜಾರಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಂಘಟನೆಗಳು ಆರೋಪಿಸಿವೆ.

ಸಂಯುಕ್ತ ಕಿಸಾನ್ ಮೋರ್ಚಾ (Sಏಒ), SIಖ ವಿರೋಧಿ ಒಕ್ಕೂಟ, ಪ್ರಗತಿಪರ ಜಾತ್ಯತೀತ ಪಕ್ಷಗಳು ಹಾಗೂ ಎದ್ದೇಳು ಕರ್ನಾಟಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 26ರಂದು ಸಂವಿಧಾನ ದಿನಾಚರಣೆ ಅಂಗವಾಗಿ ಬೀದರ್ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸಮೀಪ ರಸ್ತೆ ಬದಿಯಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ.

ನವೆಂಬರ್ 26, 2026ರಿಂದ ಜನವರಿ 26, 2027ರವರೆಗೆ ದೇಶವ್ಯಾಪಿ ಪ್ರಜಾಪ್ರಭುತ್ವ ಮರುಸ್ಥಾಪನೆ ಅಭಿಯಾನ ನಡೆಯಲಿದ್ದು, ಬೀದರ್ ಜಿಲ್ಲೆಯಲ್ಲಿ ಸಂವಿಧಾನ ಸಂರಕ್ಷಣಾ ಪಡೆ ರಚನೆ ಹಾಗೂ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುವುದು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIಖ) ಪ್ರಕ್ರಿಯೆಯಿಂದ ಆದಿವಾಸಿಗಳು, ಅಲೆಮಾರಿಗಳು, ಮಹಿಳೆಯರು ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುವ ಜನರ ಮತದಾನದ ಹಕ್ಕಿಗೆ ತೊಂದರೆಯಾಗುವ ಆತಂಕವಿದೆ. SIಖ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಹಕ್ಕುಗಳಿಗೆ ಧಕ್ಕೆ ತರುವಂತಿದೆ ಎಂದು ಸಂಘಟನೆಗಳು ಆಕ್ಷೇಪಿಸಿವೆ.

ಪ್ರತಿಭಟನಾ ಸಭೆಯ ಬಳಿಕ ಪ್ರಮುಖ ಬೇಡಿಕೆಗಳ ಕುರಿತು ಮನವಿ ಪತ್ರವನ್ನು ನಗರದ ಜನವಾಡ ರಸ್ತೆಯಲ್ಲಿರುವ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು.

ಅಭಿಯಾನಕ್ಕೆ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಹಾಗೂ ಬಂಡಾಯ ಸಾಹಿತ್ಯ ಸಮ್ಮೇಳನದ ಮಾಜಿ ಅಧ್ಯಕ್ಷ ಮಾರುತಿ ಬೌದ್ಧ ಅವರು ಚಾಲನೆ ನೀಡಲಿದ್ದಾರೆ. ಹಿರಿಯ ಹೋರಾಟಗಾರ ಹಾಗೂ ನ್ಯಾಯವಾದಿ ಬಾಬುರಾವ್ ಹೊನ್ನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

SIಖ ವಿರೋಧಿ ಒಕ್ಕೂಟದ ಸಂಚಾಲಕ, ನಿವೃತ್ತ ಪ್ರಾಂಶುಪಾಲ ವಿಠಲದಾಸ್ ಪ್ಯಾಗೆ ಅವರು SIಖ ಪ್ರಕ್ರಿಯೆಯ ನ್ಯೂನತೆಗಳ ಕುರಿತು ಮಾತನಾಡಲಿದ್ದು, ನಾಗರಿಕ ಮತ ಕಾವಲು ಸಮಿತಿಯ ಗೌರವ ಅಧ್ಯಕ್ಷ ಡಾ. ಮಕ್ಸೂದ್ ಚಂದಾ ಅವರು ಫಾರಂ 6, 7 ಮತ್ತು 8ರ ಪ್ರಕ್ರಿಯೆಗಳ ಕುರಿತು ಮಾತನಾಡಲಿದ್ದಾರೆ.

ನವೆಂಬರ್ 26ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಸಭೆಯಲ್ಲಿ ಸಂವಿಧಾನದ ಆಶಯಗಳು ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎದ್ದೇಳು ಕರ್ನಾಟಕದ ಜಿಲ್ಲಾ ಸಂಚಾಲಕ ಓಂಪ್ರಕಾಶ ರೊಟ್ಟೆ, ಸಲಹೆಗಾರ ನಿಜಾಮುದ್ದೀನ್ ಹಾಗೂ ಜಂಟಿ ಕ್ರೀಯಾ ಸಮಿತಿಯ(ಎಅಖಿU) ಶಫಿಯತ್ ಅಲಿ ಮನವಿ ಮಾಡಿದ್ದಾರೆ.
📲Get App