🔥 TRENDING पति की गिरफ्तारी का विरोध करने पर पुलि... મહેસાણામાં પેરોલ-ફર્લો સ્કોડ દ્વારા વચ... भोर मधील प्रसिद्ध भोरेश्वर मंदिरामध्ये... Meghalaya Honors Hospitals Meeting Nat... 44 Health Facilities in Meghalaya Earn... Delhi Cyber Fraudsters Arrested for Sc...
24 Nov 2026•
ગુજરાતી मराठी ਪੰਜਾਬੀ বাংলা

ಮದುವೆ ವಿಚಾರಕ್ಕೆ ಪ್ರೇಮಿಗಳ ನಡುವೆ ಗಲಾಟೆ, ಲಾಡ್ಜ್ ನಿಂದ ತಳ್ಳಿ ಪ್ರಿಯತಮೆಯ ಹತ್ಯೆ

✍️ Reporter: Ningappa 🗓 24 Nov 2026, 10:51 PM 👁 12
Share: 💬 WhatsApp 📘 Facebook 𝕏 Post
ಬೆಂಗಳೂರು: ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರೇಮಿಗಳ ನಡುವೆ ಜಗಳವಾಗಿದ್ದು, ಲಾಡ್ಜ್ 3ನೇ ಮಹಡಿಯಿಂದ ತಳ್ಳಿ ಯುವತಿಯನ್ನ ಹತ್ಯೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಧಿಸಿದಂತೆ ಆಕೆಯ ಪ್ರಿಯಕರನನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 19ರಂದು ಅಬ್ಬಿಗೆರೆ ಸರ್ಕಲ್‌ ಬಳಿ ಘಟನೆ ನಡೆದಿದ್ದು, ಘಟನೆಯಲ್ಲಿ ಹಾಸನ ಮೂಲದ ಐಶ್ವರ್ಯಾ (23) ಮೃತರಾಗಿದ್ದರು, ಪ್ರಾರಂಭದಲ್ಲಿ ಅಸಹಜ ಸಾವು ಅಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ ಯುವತಿ ತಂದೆ ನೀಡಿದ ದೂರಿನ ಹಿನ್ನಲೆ ತನಿಖೆ ನಡೆಸಿದ ಪೊಲೀಸರಿಗೆ ಇದೊಂದು ಕೊಲೆ ಎಂದು ತಿಳಿದು ಬಂದಿದೆ. ಕೊಲೆ ಆರೋಪದಡಿ ಪೊಲೀಸರು ಸಂತೋಷ ನನ್ನ ಬಂಧಿಸಿ ತನಿಖೆ ಆರಂಭಿಸಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಐಶ್ವರ್ಯಾ ನವೆಂಬರ್ 19ರಂದು ಪ್ರಿಯಕರ ಸಂತೋಷ್‌ ಇದ್ದ ಲಾಡ್ಜ್ ಗೆ ಬಂದಿದ್ದಾಳೆ, ಇಬ್ಬರ ನಡುವೆ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಲಾಡ್ಜ್‌ನ ಮೂರನೇ ಮಹಡಿಯ ಕಿಟಕಿಯಿಂದ ಐಶ್ವರ್ಯಾ ಕೆಳಕ್ಕೆ ಬಿದ್ದಿದ್ದಳು. ವಿದ್ಯುತ್ ಕಂಬದ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಐಶ್ವರ್ಯಾ ಮೃತಪಟ್ಟಿದ್ದಳು.

ಐಶ್ವರ್ಯಾಳ ತಾಯಿ ನೀಡಿರುವ ದೂರಿನನ್ವಯ ಐಶ್ವರ್ಯ ಮತ್ತು ಸಂತೋಷ್ ಪರಸ್ಪರ ಪ್ರೀತಿಸುತ್ತಿದ್ದರು‌. ಆರಂಭದಲ್ಲಿ ತಾವು ವಿರೋಧ ವ್ಯಕ್ತಪಡಿಸಿದ್ದರೂ, ಸಂತೋಷ್‌ನನ್ನೇ ಮದುವೆಯಾಗುವುದಾಗಿ ಐಶ್ವರ್ಯಾ ಪಟ್ಟು ಹಿಡಿದಿದ್ದಳು. ಕೊನೆಗೆ ಮಗಳ ಪ್ರೀತಿಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು. ಆದರೆ, ಮದುವೆಯ ವಿಚಾರ ಬಂದಾಗ ಸಂತೋಷ್ ಮೂರು ವರ್ಷಗಳ ಕಾಲಾವಕಾಶ ಕೇಳಿದ್ದ. ಮೂರು ವರ್ಷ ಕಳೆದರೂ ಮದುವೆಯಾಗದೆ ಸತಾಯಿಸುತ್ತಿದ್ದ . ಈ ನಡುವೆ ಐಶ್ವರ್ಯಾಳ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ತನ್ನ ಬಳಿ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದ ಎಂದಿದ್ದಾರೆ.

ಮದುವೆಯಾಗುವುದಿಲ್ಲ ಎಂದು ಐಶ್ವರ್ಯಾ ಮನೆ ಮುಂದೆ ಬಂದು ಗಲಾಟೆ ಮಾಡಿದ್ದ, ಅ ನಂತರ ಸಂತೋಷ್ ನಿಂದ ಕಾಯ್ದುಕೊಳ್ಳಲು ಆರಂಭಿಸಿದ್ದಳು. ಆದರೂ ಆತ ಪದೇಪದೇ ತನ್ನನ್ನು ಭೇಟಿಯಾಗುವಂತೆ ಒತ್ತಡ ಹೇರುತ್ತಿದ್ದ ಎಂದು ಆರೋಪಿಸಲಾಗಿದೆ.

ಘಟನೆ ನಡೆದ ದಿನ ಇಂಟರ್‌ವ್ಯೂ ಇದೆ ಎಂದು ಮನೆಯಲ್ಲಿ ಹೇಳಿ ಹೊರಬಂದಿದ್ದಳು. ಮದುವೆ ವಿಚಾರಕ್ಕೆ ಮತ್ತೆ ಇಬ್ಬರ ನಡುವೆ ಗಲಾಟೆಯಾದ ಸಂದರ್ಭದಲ್ಲಿ ಯುವತಿಯನ್ನು ಸಂತೋಷ್ ಜೋರಾಗಿ ತಳ್ಳಿದಾಗ ಕಿಟಕಿಯಿಂದ ಹೊರಗಡೆ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಇಬ್ಬರಿಗೂ ಮದುವೆ ನಿಶ್ಚಯ ಆಗಿತ್ತು, ಆದರೆ ಆರೋಪಿಯ ಒಪ್ಪಿಗೆಯಿರಲಿಲ್ಲ ಎಂಬ ಮಾಹಿತಿಯಿದೆ. ನಿಖರವಾದ ಕಾರಣಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಯಶವಂತಪುರ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್ ಮಾಹಿತಿ ನೀಡಿದ್ದಾರೆ.
📲Get App