🔥 ट्रेंडिंग कुत्ते को बचाने के प्रयास में बाइक सवा... હારીજ નગરપાલિકામાં રજૂઆત કરવા ગયેલા ના... बहराइच के वन कर्मियों को लखनऊ के प्रधा... नवाबगंज के रामपुर में नेशनल मेडिकोस ने... નર્મદા કિનારે ભાદરવા દેવનો ભવ્ય પૌરાણિ... मोदी और नेपाल के बालेन्द्र शाह ने भविष...
23 नव. 2026•
ગુજરાતી मराठी ਪੰਜਾਬੀ বাংলা
राजनीति

ನಮ್ಮ ಕರ್ನಾಟಕ ಸೇನೆಯ ಬೀದರ್ ಜಿಲ್ಲಾ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅವರಿಗೆ ಕಲಬುರಗಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಮಟ್ಟದ ಕರುನಾಡ ಕೌಸ್ತುಭ ಪ್ರಶಸ್ತಿ ಪ್ರದಾನ ಮಾ

✍️ रिपोर्टर: Basavaraj pujari 🗓 23 नव. 2026, 07:21 PM 👁 24
शेयर करें: 💬 WhatsApp 📘 Facebook 𝕏 Post

ಗಣೇಶ ಪಾಟೀಲಗೆ ರಾಜ್ಯಮಟ್ಟದ ಕರುನಾಡ ಕೌಸ್ತುಭ ಪ್ರಶಸ್ತಿ ಪ್ರದಾನ ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಸ್ಕøತಿ ಮತ್ತು ಸಾಹಿತ್ಯ ಪರಿಷತ್‍ನಿಂದ ಕೊಡಲಾಗುವ ರಾಜ್ಯಮಟ್ಟದ ಕರುನಾಡ ಕೌಸ್ತುಭ ಪ್ರಶಸ್ತಿಯನ್ನು ನಮ್ಮ ಕರ್ನಾಟಕ ಸ

ನಮ್ಮ ಕರ್ನಾಟಕ ಸೇನೆಯ ಬೀದರ್ ಜಿಲ್ಲಾ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅವರಿಗೆ ಕಲಬುರಗಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಮಟ್ಟದ ಕರುನಾಡ ಕೌಸ್ತುಭ ಪ್ರಶಸ್ತಿ ಪ್ರದಾನ ಮಾಡಲಾಯಿತು


ಗಣೇಶ ಪಾಟೀಲಗೆ ರಾಜ್ಯಮಟ್ಟದ ಕರುನಾಡ ಕೌಸ್ತುಭ ಪ್ರಶಸ್ತಿ ಪ್ರದಾನ

ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಸ್ಕøತಿ ಮತ್ತು ಸಾಹಿತ್ಯ ಪರಿಷತ್‍ನಿಂದ ಕೊಡಲಾಗುವ ರಾಜ್ಯಮಟ್ಟದ ಕರುನಾಡ ಕೌಸ್ತುಭ ಪ್ರಶಸ್ತಿಯನ್ನು ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅವರಿಗೆ ಕಲಬುರಗಿಯಲ್ಲಿ ಪ್ರದಾನ ಮಾಡಲಾಯಿತು.
ಪರಿಷತ್ ಸಂಸ್ಥಾಪಕ ಅಧ್ಯಕ್ಷೆ ರಮಾ ಆರ್. ಪ್ರಶಸ್ತಿ ಪ್ರದಾನ ಮಾಡಿದರು.
ಗಣೇಶ ಪಾಟೀಲ ಜಿಲ್ಲೆಯ ಮುಂಚೂಣಿ ಕನ್ನಡ ಪರ ಹೋರಾಟಗಾರರಲ್ಲಿ ಒಬ್ಬರು. ಎರಡು ದಶಕದಿಂದ ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆ, ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಜನರಲ್ಲಿ ಕನ್ನಡಾಭಿಮಾನ ಜಾಗೃತಗೊಳಿಸುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶರಣಬಸವೇಶ್ವರ ಸಂಸ್ಥಾನದ ಮಾತೆ ಡಾ. ದಾಕ್ಷಾಯಿಣಿ, ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪರ್ವೀನ್ ಬಾನು ಬುಳ್ಳಣ್ಣವರ್, ಬೀದರ್ ಜಿಲ್ಲಾ ಅಧ್ಯಕ್ಷೆ ಚೇತನಾ ಎಸ್. ಚನಶೆಟ್ಟಿ ಮತ್ತಿತರರು ಇದ್ದರು.
ಪಾಟೀಲ ಅವರಿಗೆ ಪ್ರಶಸ್ತಿ ದೊರೆತಿದ್ದಕ್ಕೆ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳಾದ ಸುದೀಪ್ ತೂಗಾವೆ, ಬಸವರಾಜ ಕಾರಬಾರಿ, ರಾಜು ಕುಂಬಾರ, ಕಾಶಿನಾಥ ಚಳಕಾಪುರ, ಸಂಗಮೇಶ ಬಿರಾದಾರ ಹಾಗೂ ಇತರರು ಸಂತಸ ವ್ಯಕ್ತಪಡಿಸಿದ್ದಾರೆ.
📲Get App