🔥 TRENDING India Today releases detailed silt rou... Youth arrested for climbing onto movin... ऑपरेशन मुस्कान के तहत 55लोगो को के चेह... Atomic Clocks in Satellites Enable Pre... Rahul Gandhi slams BJP as Congress mak... Armed Shooting at Masters Salon in Moh...
21 Nov 2026•
ગુજરાતી मराठी ਪੰਜਾਬੀ বাংলা

ಮಸ್ಕಿಯಲ್ಲಿ ಸಂಘಟನಾ ಸೃಜನ ಅಭಿಯಾನ - ಜಿ.ಪಂ, ತಾ.ಪಂ ಚುನಾವಣೆಗೆ ಸಂಘಟನೆ ಸದೃಢಗೊಳಿಸಿ - ಗ್ಯಾರಂಟಿ ಯೋಜನೆ ಮನೆಮನೆಗೆ ತಲುಪಿಸಿ - ರಾಜಶೇಖರ ಪಾಟೀಲ್ ಹುಮನಾಬಾದ್ ಕರೆ

✍️ Reporter: Ningappa 🗓 21 Nov 2026, 10:14 PM 👁 15
Share: 💬 WhatsApp 📘 Facebook 𝕏 Post

ಮಸ್ಕಿಯಲ್ಲಿ ಸಂಘಟನಾ ಸೃಜನ ಅಭಿಯಾನ - ಜಿ.ಪಂ, ತಾ.ಪಂ ಚುನಾವಣೆಗೆ ಸಂಘಟನೆ ಸದೃಢಗೊಳಿಸಿ - ಗ್ಯಾರಂಟಿ ಯೋಜನೆ ಮನೆಮನೆಗೆ ತಲುಪಿಸಿ - ರಾಜಶೇಖರ ಪಾಟೀಲ್ ಹುಮನಾಬಾದ್ ಕರೆ - ಶಾಸಕ ಬಸನಗೌಡ ತುರ್ವಿಹಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಶಾಂತಪ್ಪ ಭಾಗಿ

ಮಸ್ಕಿಯಲ್ಲಿ ಸಂಘಟನಾ ಸೃಜನ ಅಭಿಯಾನ - ಜಿ.ಪಂ, ತಾ.ಪಂ ಚುನಾವಣೆಗೆ ಸಂಘಟನೆ ಸದೃಢಗೊಳಿಸಿ - ಗ್ಯಾರಂಟಿ ಯೋಜನೆ ಮನೆಮನೆಗೆ ತಲುಪಿಸಿ - ರಾಜಶೇಖರ ಪಾಟೀಲ್ ಕರೆ

ಮಸ್ಕಿ:
ಇಂದು ಮಸ್ಕಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವತಿಯಿಂದ ಆಯೋಜಿಸಲಾಗಿದ್ದ ಸಂಘಟನಾ ಸೃಜನ ಅಭಿಯಾನ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ರಾಯಚೂರು ಜಿಲ್ಲಾ ಕಾಂಗ್ರೆಸ್ ವೀಕ್ಷಕ ಶ್ರೀ ರಾಜಶೇಖರ ಪಾಟೀಲ್ ಹುಮನಾಬಾದ್ ಅವರು ಭಾಗವಹಿಸಿ ಮಾತನಾಡಿದರು.

ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳು ನಡೆಯಲಿದ್ದು, ಪಕ್ಷದ ಕಾರ್ಯಕರ್ತರು ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸಬೇಕು. ಬೂತ್ ಮಟ್ಟದ ಕಾರ್ಯಕರ್ತರು ನಿರಂತರವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿಯೊಬ್ಬರೂ ಮನೆಮನೆಗೆ ತೆರಳಿ ಜನರಿಗೆ ಮಾಹಿತಿ ತಲುಪಿಸುವ ಕಾರ್ಯ ಮಾಡಬೇಕೆಂದು ಹೇಳಿದರು.

ಮಸ್ಕಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಆರ್. ಬಸನಗೌಡ ತುರ್ವಿಹಾಳ, ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಕೆ. ಶಾಂತಪ್ಪ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಖನಿಜ ಅಭಿವೃದ್ಧಿ ನಿಗಮ ನಿರ್ದೇಶಕ ಹನುಮಂತಪ್ಪ ಮುದ್ದಾಪೂರ, ಎಪಿಎಂಸಿ ಅಧ್ಯಕ್ಷ ಸಿದ್ದನಗೌಡ ಮಾಟೂರು, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಮೈಬುಸಾಬ ಮುದ್ದಾಪೂರ, ಕೈಮಗ್ಗ ಅಭಿವೃದ್ಧಿ ನಿಗಮದ ನಿರ್ದೇಶಕ ಆದನಗೌಡ ಸಂತೆಕಲ್ಲೂರು, ತೊಗರಿ ನಿಗಮದ ನಿರ್ದೇಶಕ ನಿರುಪಾದಪ್ಪ ವಕೀಲರು, ಕೆಪಿಸಿಸಿ ಪರಿಶಿಷ್ಟ ಪಂಗಡ ಕಾರ್ಯದರ್ಶಿ ಬಸನಗೌಡ ಮಾರಲದಿನ್ನಿ, ರೇಣುಕಾ ಸಿಂದ್ಯ, ಜಾನ್ ವೆಸ್ಲಿ, ಎಚ್.ಬಿ. ಮುರಾರಿ, ಬಸನಗೌಡ ಪೂಪಾ, ಕೃಷ್ಣಾ ಡಿ. ಚಿಗರಿ, ಹನುಮೇಶ ಬಾಗೋಡಿ, ವಿಜಯ ಕರೇಕಲ್, ನಾಗರತ್ನ ಕಟ್ಟೀಮನಿ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
📲Get App