🔥 TRENDING सरपंच के कार्यकाल में सड़ते गांव का वि... सुल्तान पोखर में कार्तिक शुक्ल पक्ष की... નર્મદા સંકલન સમિતિની બેઠકમાં પ્રજાના પ... ਅੰਮ੍ਰਿਤਪਾਲ ਦੀ ਦਾਦੀ ਦੇ ਸਸਕਾਰ 'ਚ ਪੁੱਜੇ ਪ... माननीय विधायक मनोज विश्वास ने आईटीआई क... उत्तराखंड
21 Nov 2026•
ગુજરાતી मराठी ਪੰਜਾਬੀ বাংলা

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ - ಯರಗುಡ್ಡದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ - ಕರವೇ ತಾಲೂಕ ಅಧ್ಯಕ್ಷ ನಂದಪ್ಪ ಮಡ್ಡಿ ಕರೆ

✍️ Reporter: Ningappa 🗓 21 Nov 2026, 01:05 PM 👁 17
Share: 💬 WhatsApp 📘 Facebook 𝕏 Post

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ - ಯರಗುಡ್ಡದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ - ಕರವೇ ತಾಲೂಕ ಅಧ್ಯಕ್ಷ ನಂದಪ್ಪ ಮಡ್ಡಿ ಕರೆ - ಕನ್ನಡ ಬಳಕೆ, ಕನ್ನಡ ನಾಮಫಲಕ, ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ, ಕನ್ನಡ ಶಾಲೆಗಳ ಉಳಿವಿಗೆ ಆಗ್ರಹ - ಕನ್ನಡಿಗರ ಮೇಲೆ ದೌರ್ಜನ್ಯ ನಿಲ್ಲಬೇಕು

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ - ಯರಗುಡ್ಡದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ

ರಾಯಚೂರು: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಈ ನೆಲದ ನಾಡು ನುಡಿ ಉಳುವಿಗಾಗಿ ಸಂಘಟಿತರಾಗೋಣ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ತಾಲೂಕ ಅಧ್ಯಕ್ಷ ನಂದಪ್ಪ ಮಡ್ಡಿ ಹೇಳಿದರು.

ಶನಿವಾರ ಯರಗುಡ್ಡ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಗ್ರಾಮ ಘಟಕದಿಂದ ನಡೆದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಪ್ರತಿಯೊಬ್ಬರೂ ಕನ್ನಡ ಬಳಕೆ ಮಾಡಬೇಕು, ವ್ಯಾಪಾರ ವಹಿವಾಟು ನಾಮ ಫಲಕಗಳು ಕನ್ನಡದಲ್ಲಿಯೇ ಇರಬೇಕು, ಉದ್ಯೋಗದಲ್ಲೂ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಕನ್ನಡ ಶಾಲೆಗಳ ಉಳಿವಿಗಾಗಿ ನಮ್ಮ ಸಂಘಟನೆ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರ ನಿರಂತರವಾಗಿ ಹೋರಾಡುತ್ತಿದ್ದಾರೆ, ಕನ್ನಡಿಗರ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆ ನಿಲ್ಲಬೇಕು ಎಂದರು.

ಇದೇ ಸಂದರ್ಭದಲ್ಲಿ ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ, ಹೋಬಳಿ ಘಟಕ ಅಧ್ಯಕ್ಷ ತಮ್ಮಣ್ಣ ಹೇರುಂಡಿ, ಬಸವರಾಜ ಹೇರುಂಡಿ, ಬೀಮಣ್ಣ ಲಿಂಗದಹಳ್ಳಿ, ಅಮರೇಶ ಲಿಂಗದಳ್ಳಿ, ರಂಗಪ್ಪ ಬಂಡಿ, ಶಂಕರಗೌಡ ಮಾಲಿ ಪಾಟೀಲ್, ಮಲ್ಲಿಕಾರ್ಜುನ ಹಡಪದ್, ನಾರಾಯಣ ಪಾಟೀಲ್, ಚಂದ್ರಶೇಖರ, ವೆಂಕೋಬ ಎಸ್ಡಿಎಂಸಿ ಅಧ್ಯಕ್ಷರು, ಶಿವು ಕರಡಿ, ದೇವರಾಜ ಕರಡಿ, ಶಿವರಾಜ ಮಾ.ಪಾ, ಬಾಲಯ್ಯ ಪೂಜಾರಿ, ಹುಲಗಪ್ಪ ದಳಪತಿ, ಯಂಕಪ್ಪ ಕುದರೆ, ಗಂಗಣ್ಣ ಗಂಟಿ, ವೆಂಕಟೇಶ ಪೊಲೀಸ್ ಪಾಟೀಲ್, ದೇವೇಗೌಡ ಮಾಲಿ ಪಾಟೀಲ್, ಮಾನಪ್ಪ ಗಂಟಿ, ಚಿರಂಜೀವಿ, ಶಿವರಾಜ ಮಾಲಿ ಪಾಟೀಲ್ ಉಪಸ್ಥಿತರಿದ್ದರು.
📲Get App