🔥 ट्रेंडिंग ਜਾਪਾਨ ਤੱਕ ਪਹੁੰਚੀ ਜੁੜਵਾ ਭੈਣਾਂ ਦੀ ਕਲਾ, ਅ... सीकर के बाबा श्याम जन्मोत्सव मेले में... ହକି ଇଣ୍ଡିଆକୁ ହାଇକୋର୍ଟଙ୍କ ଝଟକା, ଅନ୍ତରୀଣ... ਖ਼ਰੀਦਾਰੀ ਦਾ ਵੱਡਾ ਮੌਕਾ : ਲਗਾਤਾਰ 5ਵੇਂ ਦਿ... সুৰক্ষিত অসম সুৰক্ষিত উত্তৰ পূব कुंडा में रामकथा के दौरान पंडित धीरेंद...
20 नव. 2026•
ગુજરાતી मराठी ਪੰਜਾਬੀ বাংলা

ಬಡತನದ ಸಂಕಷ್ಟ ಮೆಟ್ಟಿ ಪೊಲೀಸ್ ಇಲಾಖೆಗೆ ಆಯ್ಕೆಯಾದ ಹುಲಿಗೆಮ್ಮಗೆ ಗ್ರಾಮಸ್ಥರಿಂದ ಅದ್ಧೂರಿ ಸನ್ಮಾನ - ಚಿಕ್ಕಬೂದೂರಿನಲ್ಲಿ ಆತ್ಮೀಯ ಅಭಿನಂದನೆ - ತಾಯಿ ಯಲ್ಲಮ್ಮ ಅವರ ಕನಸು ಸಾರ್ಥಕ

✍️ रिपोर्टर: Ningappa 🗓 20 नव. 2026, 11:00 AM 👁 27
शेयर करें: 💬 WhatsApp 📘 Facebook 𝕏 Post
ಬಡತನದ ಸಂಕಷ್ಟ ಮೆಟ್ಟಿ ಪೊಲೀಸ್ ಇಲಾಖೆಗೆ ಆಯ್ಕೆಯಾದ ಹುಲಿಗೆಮ್ಮಗೆ ಗ್ರಾಮಸ್ಥರಿಂದ ಅದ್ಧೂರಿ ಸನ್ಮಾನ

ರಾಯಚೂರು/ಚಿಕ್ಕಬೂದೂರು: ಪೊಲೀಸ್ ಇಲಾಖೆಗೆ ಆಯ್ಕೆಯಾಗಿ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಹುಲಿಗೆಮ್ಮ ಅವರಿಗೆ ಗ್ರಾಮದ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ಬಡತನದ ಹಾದಿಯಲ್ಲಿ ಎದುರಾದ ಅನೇಕ ಸಂಕಷ್ಟಗಳು, ಸೋಲು, ನೋವು ಹಾಗೂ ಸವಾಲುಗಳನ್ನು ಮೆಟ್ಟಿ ನಿಂತು ಇಂದು ಪೊಲೀಸ್ ಇಲಾಖೆಗೆ ಆಯ್ಕೆಯಾಗಿರುವುದು ಇಡೀ ಗ್ರಾಮಕ್ಕೆ ಹೆಮ್ಮೆಯ ಹಾಗೂ ಸಂತಸದ ವಿಷಯವಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.

ತನ್ನ ಮಗಳನ್ನು ಓದಿಸಿ ಉನ್ನತ ಸ್ಥಾನಕ್ಕೆ ತಲುಪಿಸಬೇಕೆಂಬ ತಾಯಿ ಯಲ್ಲಮ್ಮ ಅವರ ಕನಸು, ಪರಿಶ್ರಮ, ತ್ಯಾಗ ಹಾಗೂ ಹೋರಾಟ ಇಂದು ಸಾರ್ಥಕವಾಗಿದೆ. ಕಷ್ಟದ ದಿನಗಳಲ್ಲಿ ಮಗಳ ಭವಿಷ್ಯಕ್ಕಾಗಿ ಪಟ್ಟ ಶ್ರಮಕ್ಕೆ ಇಂದು ಫಲ ದೊರೆತಿದ್ದು, ತಾಯಿಯ ಕನಸು ನನಸಾಗಿದೆ ಎಂದು ಗ್ರಾಮಸ್ಥರು ಭಾವುಕರಾಗಿ ಸಂತಸ ವ್ಯಕ್ತಪಡಿಸಿದರು.

ಹುಲಿಗೆಮ್ಮ ಅವರ ಸಾಧನೆ ಗ್ರಾಮದ ಯುವಕ-ಯುವತಿಯರಿಗೆ ಮಾದರಿಯಾಗಿದ್ದು, ಶಿಕ್ಷಣದ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಈ ಯಶಸ್ಸು ಪ್ರೇರಣೆ ನೀಡಲಿದೆ ಎಂದು ಗಣ್ಯರು ತಿಳಿಸಿದರು.

ಈ ಸಂದರ್ಭದಲ್ಲಿ ಶೇಖರಪ್ಪ ಗೌಡ ಬಜ್ಜಿ (ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು), ಹೊನ್ನಪ್ಪ ಗೌಡ ಬಜ್ಜಿ, ವೀರಪ್ಪನ್ ಗೌಡ (ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು), ಅಂಜನ್ ಪಾಟೀಲ್, ಪ್ರಶಾಂತ್ ಪಾಟೀಲ್, ಹನುಮಂತರಾಯ ಪೂಜಾರಿ, ವೆಂಕಟೇಶ್, ದೇವರಾಜ್ ಮಡಿವಾಳ, ರಿಯಾಜ್ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಹುಲಿಗೆಮ್ಮ ಅವರಿಗೆ ಶುಭಾಶಯಗಳನ್ನು ಸಲ್ಲಿಸಿದರು.
📲Get App