🔥 TRENDING తణుకు మున్సిపల్ ఎన్నికల్లో 42 వార్డులప... CITU PV Pratap పిలుపు: చలో ఢిల్లీ ఉద్య... भूपट्टी में 1300बोरी दी ए पी खाद कि हु... छह महीने से ज्यादा पुरानी सीवरेज समस्य... सरदारशहर ब्लॉक नंबर 11 में कांग्रेस की... Ananya Panday Says Gen Z Has More Love...
20 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದ ಹೋಟೆಲ್‌ಗಳಲ್ಲಿ ದರ ಏರಿಕೆ, ಸ್ವಚ್ಛತೆ ಕೊರತೆ: ಗ್ರಾಹಕರ ಹಕ್ಕುಗಳ ವೇದಿಕೆ ಆಗ್ರಹ - ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಲಿ, ಇಲ್ಲವಾದರೆ ಪ್ರತಿಭಟನೆ ಎಚ್ಚರಿಕೆ

✍️ Reporter: Ningappa 🗓 20 Nov 2026, 03:44 PM 👁 17
Share: 💬 WhatsApp 📘 Facebook 𝕏 Post

ದೇವದುರ್ಗದ ಹೋಟೆಲ್‌ಗಳಲ್ಲಿ ದರ ಏರಿಕೆ, ಸ್ವಚ್ಛತೆ ಕೊರತೆ: ಗ್ರಾಹಕರ ಹಕ್ಕುಗಳ ವೇದಿಕೆ ಆಗ್ರಹ - ದೀಪಾವಳಿ ನಂತರ ತಿಂಡಿ-ತಿನಿಸು, ಚಹಾ ದರ ಏಕಾಏಕಿ ಏರಿಕೆ, ಗ್ರಾಹಕರಿಗೆ ಆರ್ಥಿಕ ಹೊರೆ - ದರಪಟ್ಟಿ ಪ್ರದರ್ಶನ ಇಲ್ಲ, ಸ್ವಚ್ಛತೆ ಕೊರತೆ - ಕಾರ್ಮಿಕರಿಗೆ ಸೌಲಭ್ಯ ಇಲ್ಲ - ರಾಯಚೂರು, ಶಹಾಪುರ, ಜಾಲಹಳ್ಳಿ ರಸ್ತೆ ಹೋಟೆಲ್ ಪರಿಶೀಲನೆಗೆ ಆಗ್ರಹ

ದೇವದುರ್ಗದ ಹೋಟೆಲ್‌ಗಳಲ್ಲಿ ದರ ಏರಿಕೆ, ಸ್ವಚ್ಛತೆ ಕೊರತೆ: ಗ್ರಾಹಕರ ಹಕ್ಕುಗಳ ವೇದಿಕೆ ಆಗ್ರಹ

ದೇವದುರ್ಗ: ಪಟ್ಟಣದ ಕೆಲವು ಹೋಟೆಲ್‌ಗಳಲ್ಲಿ ತಿಂಡಿ-ತಿನಿಸು ಹಾಗೂ ಚಹಾದ ಬೆಲೆಗಳನ್ನು ಏಕಾಏಕಿ ಹೆಚ್ಚಿಸಲಾಗಿದ್ದು, ಇದರಿಂದ ಗ್ರಾಹಕರಿಗೆ ಆರ್ಥಿಕ ಹೊರೆಯಾಗುತ್ತಿದೆ. ಅಲ್ಲದೆ, ಹೋಟೆಲ್‌ಗಳಲ್ಲಿ ಸ್ವಚ್ಛತೆಯ ಕೊರತೆ, ದರಪಟ್ಟಿ ಪ್ರದರ್ಶಿಸದಿರುವುದು ಹಾಗೂ ಕಾರ್ಮಿಕರಿಗೆ ಸರ್ಕಾರದ ಆದೇಶದಂತೆ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸದಿರುವ ಕುರಿತು ದೇವದುರ್ಗ ಗ್ರಾಹಕರ ಹಕ್ಕುಗಳ ವೇದಿಕೆ ಕಳವಳ ವ್ಯಕ್ತಪಡಿಸಿದೆ.

ಈ ಕುರಿತು ದೇವದುರ್ಗ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವೇದಿಕೆಯ ಮುಖಂಡರು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಹೋಟೆಲ್‌ಗಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೀಪಾವಳಿ ಹಬ್ಬದ ನಂತರ ಪಟ್ಟಣದ ಕೆಲವು ಉಡುಪಿ ಹೋಟೆಲ್‌ಗಳಲ್ಲಿ ತಿಂಡಿ-ತಿನಿಸು ಹಾಗೂ ಚಹಾದ ಬೆಲೆಯನ್ನು ಏಕಾಏಕಿ ಹೆಚ್ಚಿಸಲಾಗಿದೆ. ಉದಾಹರಣೆಗೆ, ಗಣೇಶ್ ದರ್ಶಿನಿ ಹೋಟೆಲ್‌ನಲ್ಲಿ ಈ ಹಿಂದೆ 20 ಇದ್ದ ಕೆ.ಟಿ. ಬೆಲೆಯನ್ನು 25ಕ್ಕೆ ಹಾಗೂ 10 ಇದ್ದ ಚಹಾದ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಆಗ್ರಹಿಸಿದರು.

ರಾಯಚೂರು ರಸ್ತೆ, ಶಹಾಪುರ ರಸ್ತೆ ಹಾಗೂ ಜಾಲಹಳ್ಳಿ ರಸ್ತೆಯಲ್ಲಿರುವ ಹೋಟೆಲ್‌ಗಳಲ್ಲಿ ಆಹಾರ ಮತ್ತು ಚಹಾದ ದರ ಏರಿಕೆ ಕುರಿತು ಆಹಾರ ಇಲಾಖೆ ಪರಿಶೀಲಿಸಬೇಕು. ಪುರಸಭೆ ಅಧಿಕಾರಿಗಳು ಸ್ವಚ್ಛತೆ ಹಾಗೂ ದರಪಟ್ಟಿ ಪ್ರದರ್ಶನ ಖಚಿತಪಡಿಸಬೇಕು.

ಕಾರ್ಮಿಕರಿಗೆ ವೇತನ, ಗ್ರಾಚ್ಯುಟಿ, ಆರೋಗ್ಯ ಭತ್ಯೆ ಸೇರಿದಂತೆ ಇತರ ಕಾನೂನುಬದ್ಧ ಸೌಲಭ್ಯಗಳನ್ನು ನೀಡಲಾಗುತ್ತಿದೆಯೇ ಎಂಬುದನ್ನು ಕಾರ್ಮಿಕ ಇಲಾಖೆ ಪರಿಶೀಲಿಸಬೇಕು. ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಲೇಬರ್ ಇನ್‌ಸ್ಪೆಕ್ಟರ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿ, ಇಲ್ಲವಾದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
📲Get App