🔥 TRENDING ರಾಯಚೂರು ಐಬಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರ... मलारना डूंगर पंचायत चुनाव में कांग्रेस... जालौर के काकरिया वास में बाबा खाटू श्य... एकादशी के पावन अवसर पर खाटू श्याम मंदि... ಜಿಲ್ಲಾ ಸವಿತಾ ಸಮಾಜದ ನೂತನ ಅಧ್ಯಕ್ಷರಾಗಿ ನಾ... NBCC India Donates CSR-Funded Medical...
20 Nov 2026•
ગુજરાતી मराठी ਪੰਜਾਬੀ বাংলা
Sports

ರಾರಾಜಿಸುತ್ತಿರುವ ನಾಡ ಧ್ವಜ, ಕಟೌಟ್, ಬ್ಯಾನರ್

✍️ Reporter: Basavaraj pujari 🗓 20 Nov 2026, 09:26 PM 👁 21
Share: 💬 WhatsApp 📘 Facebook 𝕏 Post

ನುಡಿ ಜಾತ್ರೆಗೆ ಪರಂಪರೆ ನಗರಿ ಅಣಿ ಬೀದರ್: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ಡಾ. ಬಸವರಾಜ ಬಲ್ಲೂರ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ (ನ.21, 22) ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳ

ರಾರಾಜಿಸುತ್ತಿರುವ ನಾಡ ಧ್ವಜ, ಕಟೌಟ್, ಬ್ಯಾನರ್

ನುಡಿ ಜಾತ್ರೆಗೆ ಪರಂಪರೆ ನಗರಿ ಅಣಿ

ಬೀದರ್: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ಡಾ. ಬಸವರಾಜ ಬಲ್ಲೂರ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ (ನ.21, 22) ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರಂಪರೆ ನಗರಿ ಸಜ್ಜುಗೊಂಡಿದೆ.
ಪರಿಷತ್ ಸದಸ್ಯರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರನ್ನು ಸಮ್ಮೇಳನಕ್ಕೆ ಸ್ವಾಗತಿಸುವ ಕಟೌಟ್ ಹಾಗೂ ಬ್ಯಾನರ್‍ಗಳು ಎಲ್ಲೆಡೆ ರಾರಾಜಿಸುತ್ತಿವೆ.
ನಗರದ ಪ್ರಮುಖ ವೃತ್ತಗಳಿಗೆ ನಾಡ ಧ್ವಜಗಳನ್ನು ಕಟ್ಟಿ ಶೃಂಗಾರಗೊಳಿಸಲಾಗಿದೆ. ನಗರದಲ್ಲಿ ಸಡಗರ, ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.
ಎಲ್ಲರ ಸಹಕಾರದಿಂದ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಅಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.
ಸ್ವಾಗತ ಕಮಾನು ಸೇರಿ ಸಮ್ಮೇಳನ ಸ್ಥಳವಾದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರವನ್ನು ಮಧುವಣಗಿತ್ತೆಯಂತೆ ಸಿಂಗರಿಸಲಾಗಿದೆ. ವಿವಿಧ ಮಳಿಗೆ, ಪ್ರದರ್ಶನಗಳ ತಯಾರಿಗಳು ಕೂಡ ಆಗಿವೆ ಎಂದು ಹೇಳಿದ್ದಾರೆ.
ನೆರೆ ಜಿಲ್ಲೆ ಹಾಗೂ ಜಿಲ್ಲೆಯ ಎಲ್ಲೆಡೆಯಿಂದ ಕನ್ನಡಾಭಿಮಾನಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ ಭಾಗಹಿಸುವವರಿಗೆ ಊಟ, ಶುದ್ಧ ಕುಡಿಯುವ ನೀರು ಮೊದಲಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ಶನಿವಾರ (ನ.21) ಬೆಳಿಗ್ಗೆ ಬೆಳಿಗ್ಗೆ 8.30ಕ್ಕೆ ಮನ್ನಳ್ಳಿ ರಸ್ತೆಯಲ್ಲಿರುವ ಕರ್ನಾಟಕ ಪದವಿಪೂರ್ವ ಕಾಲೇಜಿನಿಂದ ರಂಗ ಮಂದಿರದವರೆಗೆ ಅಲಂಕೃತ ಸಾರೋಟಿನಲ್ಲಿ ಕಲಾ ತಂಡಗಳೊಂದಿಗೆ ಕನ್ನಡ ತಾಯಿ ಭುವನೇಶ್ವರಿ, ಸಮ್ಮೇಳನ ಸರ್ವಾಧ್ಯಕ್ಷ ಡಾ. ಬಸವರಾಜ ಬಲ್ಲೂರ ಅವರ ವೈಭವದ ಮೆರವಣಿಗೆ ಜರುಗಲಿದೆ. ಶಾಸಕ ರಹೀಂಖಾನ್ ಮೆರವಣಿಯನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬೆಳಿಗ್ಗೆ 11.30ಕ್ಕೆ ರಂಗ ಮಂದಿರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಪತ್ರಕರ್ತ ದಿನೇಶ ಅಮೀನ ಮಟ್ಟು ಸಮ್ಮೇಳನವನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು. ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿಗಳು ಹಾಗೂ ಗಣ್ಯರು ಪಾಲ್ಗೊಳ್ಳುವರು ಎಂದು ಹೇಳಿದ್ದಾರೆ.
ಮಧ್ಯಾಹ್ನ 3ಕ್ಕೆ ಭೂಮಿ ತತ್ವ ಪ್ರಥಮ ಗೋಷ್ಠಿ, ಸಂಜೆ 5ಕ್ಕೆ ಬೆಳೆವ ಸಿರಿ(ಮಕ್ಕಳ ಮಾತು) ದ್ವಿತೀಯ ಗೋಷ್ಠಿ, ಸಂಜೆ 6.30ಕ್ಕೆ ಕಾವ್ಯ, ಕುಂಚ, ಗೀತ ಗಾಯನ ಹಾಗೂ ನರ್ತನ ಜರುಗಲಿದೆ ಎಂದು ತಿಳಿಸಿದ್ದಾರೆ.

***

ಸಮ್ಮೇಳನ ಕನ್ನಡದ ಹಬ್ಬವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಅಭಿಮಾನದಿಂದ ಸಮ್ಮೇಳನದಲ್ಲಿ ಭಾಗವಹಿಸಬೇಕು. ಸಮ್ಮೇಳನದ ಯಶಸ್ವಿಗೆ ಕೈಜೋಡಿಸಬೇಕು.

ಸುರೇಶ ಚನಶೆಟ್ಟಿ
ಕ.ಸಾ.ಪ. ಜಿಲ್ಲಾ ಅಧ್ಯಕ್ಷ
📲Get App