🔥 TRENDING Bihar Legislative Council to Shift Gro... ಬ್ರೀಮ್ಸ್ನಲ್ಲಿ ಐದು ವರ್ಷ ಮೇಲ್ಪಟ್ಟ ಗ್ರೂಪ್... UPSC Sends Three Names for Madhya Prad... ਵੈਲਿੰਗਟਨ ਟੈਸਟ ''ਚ Team India ਦੀ ਜ਼ਬਰਦਸ... સાબરકાંઠાના પોશીના-ખેડબ્રહ્મામાં 278 બ... 39 ਸਾਲ ਦੀ ਉਮਰ ''ਚ ਮਾਂ ਬਣੀ ਮਸ਼ਹੂਰ ਅਦਾਕਾਰ...
20 Nov 2026•
ગુજરાતી मराठी ਪੰਜਾਬੀ বাংলা
Sports

ಚಿತ್ರ

✍️ Reporter: Basavaraj pujari 🗓 20 Nov 2026, 09:26 PM 👁 14
Share: 💬 WhatsApp 📘 Facebook 𝕏 Post

ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ನಡೆದ ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಟ್ರೋಫಿ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು ತಾಲ್ಲೂಕುಮಟ್ಟದ ಕ್ರೀಡಾಕೂಟ: ಕ್ರೀಡಾಪಟುಗಳ ಉತ್ಸಾಹ ಬೀ

ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ನಡೆದ ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಟ್ರೋಫಿ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು

ತಾಲ್ಲೂಕುಮಟ್ಟದ ಕ್ರೀಡಾಕೂಟ: ಕ್ರೀಡಾಪಟುಗಳ ಉತ್ಸಾಹ

ಬೀದರ್: ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಈಚೆಗೆ ನಡೆದ ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡರು.
ಗುಂಪು ಹಾಗೂ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದರು.
ವಿವಿಧ ಸ್ಪರ್ಧೆಗಳ ವಿಜೇತರು ಹೆಸರು ಹೀಗಿವೆ.
ಬಾಲಕಿಯರ ವಿಭಾಗ:
ಕಬಡ್ಡಿ: ಕಮಠಾಣದ ಕಿತ್ತೂರು ರಾಣಿ ಚೆನ್ನಮ್ಮ ತಂಡ (ಪ್ರಥಮ), ಮಂದಕನಳ್ಳಿಯ ಮುಸ್ಕಾನ್ ತಂಡ (ದ್ವಿತೀಯ).
ಸ್ಲೋ ಸೈಕ್ಲಿಂಗ್: ಪವಿತ್ರಾ (ಪ್ರಥಮ), ಸಚಿತಾ (ದ್ವಿತೀಯ), ನೇಹಾ (ತೃತೀಯ).
100 ಮೀ. ಓಟದ ಸ್ಪರ್ಧೆ: ಸಚಿತಾ (ಪ್ರಥಮ), ಪ್ರಭಾವತಿ (ದ್ವಿತೀಯ), ಪವಿತ್ರಾ (ತೃತೀಯ).
ಬಾಲಕರ ವಿಭಾಗ:
ವಾಲಿಬಾಲ್: ಮಂದಕನಳ್ಳಿಯ ಡೇಂಜರ್ ಬಾಯ್ಸ್ ತಂಡ (ಪ್ರಥಮ), ರೋಷನ್ ಗ್ರೂಪ್ ಆಪ್ ಇನ್‍ಸ್ಟಿಟ್ಯೂಟ್ ತಂಡ (ದ್ವಿತೀಯ).
200 ಮೀ. ಓಟ: ರಿಜ್ವಾನ್ ಖಾನ್ (ಪ್ರಥಮ), ನಾಗೇಶ್ (ದ್ವಿತೀಯ), ಶಿವಕುಮಾರ (ತೃತೀಯ).
ವೇಟ್ ಲಿಫ್ಟಿಂಗ್: ಮುಜಾಹಿದ್ (ಪ್ರಥಮ), ಸೋಹೆಲ್ (ದ್ವಿತೀಯ), ರಿಹಾನ್ (ತೃತೀಯ).
ಕ್ರೀಡೆಗೆ ಉತ್ತೇಜನ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಮೇರಾ ಯುವ ಭಾರತ್‍ನ ಜಿಲ್ಲಾ ಯುವ ಅಧಿಕಾರಿ ನಿಖಿಲಕುಮಾರ ಹೇಳಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ ಅಪ್ಪೆ ಉದ್ಘಾಟಿಸಿದರು.
ಅನ್ಸುಲ್ ಆರ್. ವಾಲಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಪ್ಪ ಚಾಂಬೋಳೆ, ಗ್ರಾಮ ಲೆಕ್ಕಿಗ ಸುಧಾಕರ ಗೌರಶೆಟ್ಟಿ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಪಾಂಡುರಂಗ ಬೆಲ್ದಾರ್, ಎಸ್‍ಡಿಎಂಸಿ ಅಧ್ಯಕ್ಷ ಅಹಮ್ಮದ್ ಪಾಶಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಶಿನಾಥ ಗೌರಶೆಟ್ಟಿ, ರಿಯಾಜ್, ರೋಷನ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಅಧ್ಯಕ್ಷ ಎಂ.ಡಿ. ಶಫಿಯುದ್ದೀನ್, ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ಮುಬಾರಕರ್ ಮಂದಕನಳ್ಳಿ, ನರೇಂದ್ರ ಕೋಲಿ, ಶಶಿಕಾಂತ, ಸಚಿನ್ ಬಾವಿದೊಡ್ಡಿ, ಇರ್ಫಾನ್ ಸುಲೇಮಾನ್ ಮತ್ತಿತರರು ಇದ್ದರು.
ಮೇರಾ ಯುವ ಭಾರತ್ ಹಾಗೂ ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.
📲Get App