🔥 ट्रेंडिंग बच्चे की मौत पर योगी ने कड़ी सजा की मा... ‘रु सोआम’ पहल ने सिखर में 15 युवाओं को... सिक्किम के साहित्यिक दिग्गज सानु लामा... एनएफआर ने सिक्किम सरकार से सिवोक‑रंगपो... 🎵 हनुमानगढ़ के सुरों ने जयपुर में जमा... अमृतसर पुलिस कमिश्नर ने रात में थानों...
19 नव. 2026•
ગુજરાતી मराठी ਪੰਜਾਬੀ বাংলা
स्थानीय

ಬೀದರ ಜಿಲ್ಲಾ ಪೊಲೀಸರಿಂದ ಮನ್ನಳ್ಳಿ ಗ್ರಾಮದ ಸಕ್ಕರೆ ಕಾರ್ಖಾನೆಯ ಮುಂದೆ ರೈತರ ಪ್ರತಿಭಟನೆಯಲ್ಲಿ ಶಾಂತಿ ಕಾಪಾಡಲಾಗಿದೆ

✍️ रिपोर्टर: Basavaraj pujari 🗓 19 नव. 2026, 02:55 PM 👁 26
शेयर करें: 💬 WhatsApp 📘 Facebook 𝕏 Post

ಬೀದರ ಜಿಲ್ಲಾ ಪೊಲೀಸ್, ಮನ್ನಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ರೈತರ ಪ್ರತಿಭಟನೆಯನ್ನು ಶಾಂತವಾಗಿ ನಿರ್ವಹಿಸಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿ ಕಾಪಾಡಿದರು

ಬೀದರ ಜಿಲ್ಲಾ ಪೊಲೀಸ್, ಮನ್ನಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ರೈತರ ಬಾಂಧವರಿಂದ ಹಮ್ಮಿಕೊಂಡ ಪ್ರತಿಭಟನೆಯನ್ನು ಶಾಂತವಾಗಿ ನಿರ್ವಹಿಸಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿ ಕಾಪಾಡಿದರು.

ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಮನ್ನಳ್ಳಿ ಗ್ರಾಮದ ಸಕ್ಕರೆ ಕಾರ್ಖಾನೆಯ ಮುಂದೆ ರೈತ ಬಾಂಧವರಿಂದ ಹಮ್ಮಿಕೊಂಡ ಪ್ರತಿಭಟನಾ ಬ/ಬ ಸಮಯಕ್ಕೆ ಬೀದರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ದೂದ್ ಪೀರ್ ಹೆಚ್. ಮುಲ್ಲಾ ರವರ ನೇತೃತ್ವದಲ್ಲಿ ಬೀದರ ಗ್ರಾಮೀಣ ವೃತ್ತ ಸಿ.ಪಿ.ಐ ಜಿ.ಎಸ್ ಬಿರಾದಾರ, ಮನ್ನಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಪಿ.ಎಸ್.ಐ ಶ್ರೀ ಮಹೇಂದ್ರ ಕುಮಾರ, ರವರು ತಮ್ಮ ಠಾಣೆಯ ಅಧಿಕಾರಿ, ಸಿಬ್ಬಂದಿ ರವರೊಂದಿಗೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡಿದ್ದು, ಬ/ಬ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ.

ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕಾನೂನು ಸೂ ವ್ಯವಸ್ಥೆ ಕಾಡುವಲ್ಲಿ ಅಚ್ಚು ಕಟ್ಟಾಗಿ ಬ/ಬ ಕರ್ತವ್ಯ ನಿರ್ವಹಿಸಿ ಯಾವುದೇ ರೀತಿ ಅಹಿತಕರ ಘಟನೆ ಜರುಗದಂತೆ ನೋಡಿಕೊಂಡ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

ಬೀದರ ಜಿಲ್ಲಾ ಪೊಲೀಸ್ ಜಿಲ್ಲೆಯಲ್ಲಿ ಶಾಂತಿ ಸೂ ವ್ಯವಸ್ಥೆ ಕಾಪಾಡುವಲ್ಲಿ ಸದಾ ಕಾರ್ಯಪ್ರವರ್ತಗಾಗಿದ್ದು, ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.
📲Get App