🔥 TRENDING লেক কালীবাড়িতে জগদ্ধাত্রী পুজোতে উপস্থ... ਫਿਰ ਸਜੇਗੀ ਟੋਪੀ ਤੇ ਡੋਰੀ ਦੀ ਸ਼ਾਨ: ਫ਼ੌਜ ਨ... Producer Bandla Ganesh Sentenced to On... Andhra Pradesh Unveils Semiconductor P... Cyclone Akwan Intensifies, Red Alerts... तेज रफ्तार से आ रही बाकी ने मारी टक्क...
18 Nov 2026•
ગુજરાતી मराठी ਪੰਜਾਬੀ বাংলা

ರಾಮದುರ್ಗ ಗ್ರಾ.ಪಂ. ವ್ಯಾಪ್ತಿಯ ನಾಲ್ಕು ಗ್ರಾಮಗಳನ್ನು ದೇವದುರ್ಗ ತಾಲ್ಲೂಕಿನಲ್ಲೇ ಮುಂದುವರಿಸಲು ಪರಿಶೀಲನೆಗೆ ಜಿಲ್ಲಾಧಿಕಾರಿಸೂಚನೆ

✍️ Reporter: Khaja Hussain 🗓 18 Nov 2026, 08:28 PM 👁 16
Share: 💬 WhatsApp 📘 Facebook 𝕏 Post
**ದೇವದುರ್ಗ ಬ್ರೇಕಿಂಗ್ ನ್ಯೂಸ್**

# ರಾಮದುರ್ಗ ಗ್ರಾ.ಪಂ. ವ್ಯಾಪ್ತಿಯ ನಾಲ್ಕು ಗ್ರಾಮಗಳನ್ನು ದೇವದುರ್ಗ ತಾಲ್ಲೂಕಿನಲ್ಲೇ ಮುಂದುವರಿಸಲು ಪರಿಶೀಲನೆಗೆ ಜಿಲ್ಲಾಧಿಕಾರಿ ಸೂಚನೆ

### ಸಾರ್ವಜನಿಕರ ಅಭಿಪ್ರಾಯ ಪಡೆದು ಸ್ಥಳ ಪರಿಶೀಲನೆ ನಡೆಸಿ ನಿಯಮಾನುಸಾರ ವರದಿ ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶನ

**ದೇವದುರ್ಗ:** ಹೊಸದಾಗಿ ರಚನೆಯಾದ ಅರಕೇರಾ ತಾಲ್ಲೂಕಿಗೆ ಸೇರ್ಪಡೆಗೊಂಡಿರುವ ರಾಮದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕು ಗ್ರಾಮಗಳನ್ನು ಮೊದಲಿನಂತೆ ದೇವದುರ್ಗ ತಾಲ್ಲೂಕಿನಲ್ಲಿಯೇ ಮುಂದುವರಿಸುವ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ರಾಯಚೂರು ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ರಾಮದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಂಕೇಶ್ವರಹಾಳ, ರಾಮದುರ್ಗ, ಕಾಕರಗಲ್ ಹಾಗೂ ಚಿನ್ನಾಪುರ ಗ್ರಾಮಗಳನ್ನು ಅರಕೇರಾ ತಾಲ್ಲೂಕಿಗೆ ಸೇರ್ಪಡೆಗೊಳಿಸುವ ಸಂದರ್ಭದಲ್ಲಿ ಸ್ಥಳೀಯ ಜನರ ಅಭಿಪ್ರಾಯ ಪಡೆಯಲಾಗಿಲ್ಲ ಎಂಬುದು ಸಾರ್ವಜನಿಕರ ಪ್ರಮುಖ ಆಕ್ಷೇಪವಾಗಿದೆ.

ಅರಕೇರಾ ತಾಲ್ಲೂಕು ಕೇಂದ್ರಕ್ಕೆ ಈ ಗ್ರಾಮಗಳಿಂದ ಸುಮಾರು 60 ಕಿ.ಮೀ. ದೂರವಿದ್ದು, ಸಮರ್ಪಕ ಸಾರಿಗೆ ವ್ಯವಸ್ಥೆಯೂ ಇಲ್ಲದ ಕಾರಣ ರೈತರು ಹಾಗೂ ಸಾರ್ವಜನಿಕರು ಸರ್ಕಾರಿ ಕಚೇರಿಗಳ ಕೆಲಸಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದೈನಂದಿನ ಆಡಳಿತಾತ್ಮಕ ಕಾರ್ಯಗಳಿಗೂ ಅನಾನುಕೂಲವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ 2025ರ ಮಾರ್ಚ್ 12ರಂದು ನಡೆದ ರಾಮದುರ್ಗ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ, ನಾಲ್ಕು ಗ್ರಾಮಗಳನ್ನು ಅರಕೇರಾ ತಾಲ್ಲೂಕಿನಿಂದ ಬೇರ್ಪಡಿಸಿ ಮೊದಲಿನಂತೆ ದೇವದುರ್ಗ ತಾಲ್ಲೂಕಿನಲ್ಲಿಯೇ ಮುಂದುವರಿಸುವಂತೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ 2026ರ ನವೆಂಬರ್ 12ರಂದು ಹೊರಡಿಸಿರುವ ಅಧಿಕೃತ ಪತ್ರದಲ್ಲಿ, ರಸ್ತೆ ಅಂತರ, ಸಾರಿಗೆ ಸೌಲಭ್ಯ, ಆಡಳಿತಾತ್ಮಕ ಅನುಕೂಲತೆ, ಸಾರ್ವಜನಿಕರಿಗೆ ದೊರೆಯುವ ಮೂಲಭೂತ ಸೌಕರ್ಯಗಳು ಹಾಗೂ ಗ್ರಾಮ ಪಂಚಾಯತ್ ನಿರ್ಣಯಗಳನ್ನು ಪರಿಗಣಿಸಿ ಜಂಟಿ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ.

ಅರಕೇರಾ ತಹಸೀಲ್ದಾರರು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ನಿಯಮಾನುಸಾರ ಅಗತ್ಯ ಪ್ರಸ್ತಾವನೆ ಮತ್ತು ವರದಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.

ನಾಲ್ಕು ಗ್ರಾಮಗಳ ತಾಲ್ಲೂಕು ಬದಲಾವಣೆ ವಿಚಾರದಲ್ಲಿ ಜಿಲ್ಲಾಡಳಿತ ಪರಿಶೀಲನೆಗೆ ಮುಂದಾಗಿರುವುದು ಗ್ರಾಮಸ್ಥರಲ್ಲಿ ನಿರೀಕ್ಷೆ ಮೂಡಿಸಿದೆ.

ವರದಿ ಖಾಜಾ ಹುಸೇನ್ ಬಾಬಾ ಜಾಲಹಳ್ಳಿ
📲Get App