🔥 ट्रेंडिंग नरवर में ट्रैक्टर चालकों और व्यापारियो... पचड़ा में जल रहा है करोड़ों का कोयला,... मनोहर सिंह भाटी ने बताया एमएस धनी ने आईपीएल से इस्तीफा दिया, सी... रेलवे कर्मचारी 8वीं वेतन आयोग वार्ताओं... ऐप्पल ने बताया पूरी सिस्टम रिकवरी, साइ...
18 नव. 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಯಲ್ಲಿ ಕಾಲುವೆಗೆ ನೀರು ಹರಿಸಲು ಪಾದಯಾತ್ರೆ ನಡೆಸಿದ ರೈತ ಹೋರಾಟಗಾರರಿಗೆ ಕರವೇ ವತಿಯಿಂದ ಸನ್ಮಾನ

✍️ रिपोर्टर: Khaja Hussain 🗓 18 नव. 2026, 07:33 AM 👁 29
शेयर करें: 💬 WhatsApp 📘 Facebook 𝕏 Post
**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿ ಯಲ್ಲಿ ಕಾಲುವೆಗೆ ನೀರು ಹರಿಸಲು ಪಾದಯಾತ್ರೆ ನಡೆಸಿದ ರೈತ ಹೋರಾಟಗಾರರಿಗೆ ಕರವೇ ವತಿಯಿಂದ ಸನ್ಮಾನ

### ಜಾಲಹಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಪಾದಯಾತ್ರೆ ತಂಡಕ್ಕೆ ಅದ್ದೂರಿ ಸ್ವಾಗತ

**ಜಾಲಹಳ್ಳಿ, ನ.17:** ನಾರಾಯಣಪುರ ಬಲದಂಡೆ ಕಾಲುವೆಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ ಗಬ್ಬೂರಿನಿಂದ ನಾರಾಯಣಪುರ ಜಲಾಶಯದವರೆಗೆ ಪಾದಯಾತ್ರೆ ನಡೆಸುತ್ತಿರುವ ರೈತ ಹೋರಾಟಗಾರರಿಗೆ ಜಾಲಹಳ್ಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಅದ್ದೂರಿ ಸ್ವಾಗತ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ರೈತ ಸಂಘ ಹಾಗೂ ರೈತ ಸೇನೆ ಅಭಿವೃದ್ಧಿ ಸೇನೆ ಬೆಂಗಳೂರು ರಾಜ್ಯ ಅಧ್ಯಕ್ಷ ಮಾಸ್ತಾನ್ ನಾಯಕ ಅವರ ನೇತೃತ್ವದಲ್ಲಿ ನ.15ರಂದು ಗಬ್ಬೂರು ಗ್ರಾಮದಿಂದ ಆರಂಭಗೊಂಡ ಪಾದಯಾತ್ರೆ ಮಂಗಳವಾರ ನ.17ರಂದು ಜಾಲಹಳ್ಳಿಯ ಅಂಬೇಡ್ಕರ್ ವೃತ್ತ ತಲುಪಿತು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ದೇವದುರ್ಗ ತಾಲೂಕು ಘಟಕ ಹಾಗೂ ಜಾಲಹಳ್ಳಿ ಹೋಬಳಿ ಘಟಕದ ವತಿಯಿಂದ ಪಾದಯಾತ್ರೆ ತಂಡಕ್ಕೆ ಸ್ವಾಗತಿಸಿ, ಹೋರಾಟಗಾರ ಮಾಸ್ತಾನ್ ನಾಯಕ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮಕ್ಕೆ ಕರವೇ ತಾಲೂಕು ಅಧ್ಯಕ್ಷ ನಂದಪ್ಪ ಪಿ. ಮಡ್ಡಿ ಹಾಗೂ ಜಾಲಹಳ್ಳಿ ಹೋಬಳಿ ಅಧ್ಯಕ್ಷ ತಮ್ಮಣ್ಣ ಹೆರುಂಡಿ ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಮಲ್ಲು ತೆಗ್ಗೆಳ್ಳಿ, ವೆಂಕಟೇಶ ಜೇಗರಕಲ್, ಬಸವ ಹೆರುಂಡಿ, ರಂಗಪ್ಪ ಬಂಡಿ, ರಾಘು, ಭೀಮಣ್ಣ, ಪರಮಣ್ಣ, ಗಂಗಣ್ಣ, ಹೈದರ್ ಸಾಬ್ ಮುಲ್ಲಾ, ರಾಜ್ ಮೊಹಮ್ಮದ್ ಕಲೆಗಾರ ಸೇರಿದಂತೆ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪಾದಯಾತ್ರೆಯಲ್ಲಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಆಲಂ ಗಬ್ಬೂರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಅಭಿವೃದ್ಧಿ ಸೇನೆಯ ರಾಯಚೂರು ಜಿಲ್ಲಾಧ್ಯಕ್ಷ ಸಂಗಮೇಶ ನಾಯಕ, ಜಿಲ್ಲಾ ಉಪಾಧ್ಯಕ್ಷ ಆಂಜನೇಯ ಶಾಸ್ತ್ರಿ, ಲಿಂಗಸುಗೂರು ತಾಲೂಕು ಅಧ್ಯಕ್ಷ ದೇಸಾಯಿ ನಾಯಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App