🔥 TRENDING 15वीं पीढ़ी के कलाकार करण सिंह वियतनाम... माता रानी की कपा बानी रहे कांग्रेस महतो हत्याकांड: परिवार से मिल... वसुंधरा के गले लगकर भावुक हुई किरण जसव... ਡੇਰਾਬੱਸੀ: ਸਿਮਰਨ ਸਿਟੀ ਤੋਂ 38 ਸਾਲਾ ਔਰਤ ਭ... Auro Realty Goa Eagles GC Clinch X‑Gol...
14 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಪ್ರಜಾ ಸೇವಾ ಆಂದೋಲನದಲ್ಲಿ ಆರೋಗ್ಯ ಇಲಾಖೆಯ ಸ್ಟಾಲ್ ಗಮನ ಸೆಳೆದಿದೆ - ನಿಮ್ಮ ಆರೋಗ್ಯ ನಮ್ಮ ಆದ್ಯತೆ ಎಂದ ತಾಲ್ಲೂಕು ವೈದ್ಯಾಧಿಕಾರಿ ಡಾ. ಬನದೇಶ - ಸರ್ಕಾರದ ಆರೋಗ್ಯ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಕರೆ

✍️ Reporter: Ningappa 🗓 14 Nov 2026, 08:35 PM 👁 16
Share: 💬 WhatsApp 📘 Facebook 𝕏 Post

ಜಾಲಹಳ್ಳಿ ಪ್ರಜಾ ಸೇವಾ ಆಂದೋಲನದಲ್ಲಿ ಆರೋಗ್ಯ ಇಲಾಖೆಯ ಸ್ಟಾಲ್ - ಇಲಾಖೆಯ ಸೌಲಭ್ಯಗಳ ಮಾಹಿತಿ ನೀಡಿ ಜಾಗೃತಿ - ನಿಮ್ಮ ಆರೋಗ್ಯ ನಮ್ಮ ಆದ್ಯತೆ ಎಂದ ತಾಲ್ಲೂಕು ವೈದ್ಯಾಧಿಕಾರಿ ಡಾ. ಬನದೇಶ - ಡಾ. ನಾಗರಾಜ, ಸಿಬ್ಬಂದಿ, ಆಶಾ ಕಾರ್ಯಕರ್ತರು ಭಾಗಿ

ಜಾಲಹಳ್ಳಿ ಪ್ರಜಾ ಸೇವಾ ಆಂದೋಲನದಲ್ಲಿ ಆರೋಗ್ಯ ಇಲಾಖೆಯ ಸ್ಟಾಲ್ ಗಮನ ಸೆಳೆದಿದೆ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯಿಂದ ವಿಶೇಷ ಸ್ಟಾಲ್ ಹಾಕಿ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ವಿಸ್ತೃತ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ. ಬನದೇಶ ಅವರು, ನಿಮ್ಮ ಆರೋಗ್ಯ ನಮ್ಮ ಆದ್ಯತೆ ಎಂಬ ಘೋಷಣೆಯೊಂದಿಗೆ ಆರೋಗ್ಯ ಇಲಾಖೆ ಜನರ ಬಾಗಿಲಿಗೆ ಬಂದು ಸೇವೆ ನೀಡುತ್ತಿದೆ ಎಂದು ತಿಳಿಸಿದರು.

ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳು, ಉಚಿತ ತಪಾಸಣೆ, ಮಾತೃ-ಮಕ್ಕಳ ಆರೋಗ್ಯ, ಲಸಿಕೆ, ಕ್ಷಯ, ಮಧುಮೇಹ, ರಕ್ತದೊತ್ತಡ ನಿಯಂತ್ರಣ ಸೇರಿದಂತೆ ಇಲಾಖೆಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಸಣ್ಣ ಸಮಸ್ಯೆಯಿದ್ದರೂ ಕೂಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ಯಾವಾಗಲೂ ಜನರ ಸೇವೆಗೆ ಸಿದ್ಧವಿದೆ. ಆಶಾ ಕಾರ್ಯಕರ್ತೆಯರು ಹಳ್ಳಿ ಹಳ್ಳಿಗಳಲ್ಲಿ ಜನರಿಗೆ ಆರೋಗ್ಯ ಸೇವೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಡಾ. ಬನದೇಶ ಅವರು ತಿಳಿಸಿದರು.

ಪ್ರಜಾ ಸೇವಾ ಆಂದೋಲನದಂತಹ ಕಾರ್ಯಕ್ರಮಗಳು ಜನರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ನೇರ ಮಾಹಿತಿ ನೀಡಲು ಉತ್ತಮ ವೇದಿಕೆಯಾಗಿದೆ. ಇಂತಹ ಅವಕಾಶವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮುದಾಯ ವೈದ್ಯಾಧಿಕಾರಿ ಡಾ. ನಾಗರಾಜ, ಸಿಬ್ಬಂದಿಗಳಾದ ಚಂದ್ರಶೇಖರ, ಚೇತನ ಸೇರಿದಂತೆ ಜಾಲಹಳ್ಳಿ ಹೋಬಳಿಯ ವಿವಿಧ ಹಳ್ಳಿಯ ಆಶಾ ಕಾರ್ಯಕರ್ತರು ಇದ್ದು, ಸ್ಟಾಲ್‌ಗೆ ಬಂದ ಸಾರ್ವಜನಿಕರಿಗೆ ಆರೋಗ್ಯ ಯೋಜನೆಗಳು, ಸೌಲಭ್ಯಗಳು, ತಪಾಸಣೆ ಕುರಿತು ಮಾಹಿತಿ ನೀಡಿದರು.
📲Get App