🔥 TRENDING Arunachal Police Taekwondo Trio Qualif... Buddha Relics Arrive at Namsai Golden... J&K CM Omar Abdullah Calls for Healthy... CRPF constable dismissed for threateni... Dry spell expected across Jammu & Kash... Delhi Police Nab Snatching Gang After...
14 Nov 2026•
ગુજરાતી मराठी ਪੰਜਾਬੀ বাংলা
Local

ಬೀದರ ಪೊಲೀಸ್, ವೈದ್ಯರು, ತನಿಖಾಧಿಕಾರಿಗಳು ಕಾನೂನು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದರು

✍️ Reporter: Basavaraj pujari 🗓 14 Nov 2026, 09:07 PM 👁 20
Share: 💬 WhatsApp 📘 Facebook 𝕏 Post

ಬೀದರ ಜಿಲ್ಲೆಯ ಪೊಲೀಸ್, ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬ್ರೀಮ್ಸ್ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ವೈದ್ಯರು, ತನಿಖಾಧಿಕಾರಿಗಳು ಮತ್ತು ತನಿಖಾ ಸಹಾಯಕರಿಗೆ ಕಾನೂನು ತರಬೇತಿ ಕಾರ್ಯಾಗಾರ ನಡೆಸಲಾಯಿತು.

ಬೀದರ ಜಿಲ್ಲೆಯ ಪೊಲೀಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬ್ರೀಮ್ಸ್ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ವೈದ್ಯರು, ತನಿಖಾಧಿಕಾರಿಗಳು ಮತ್ತು ತನಿಖಾ ಸಹಾಯಕರಿಗೆ ಕಾನೂನು ತರಬೇತಿ ಕಾರ್ಯಾಗಾರ ನಡೆಸಲಾಯಿತು.

ಈ ಕಾರ್ಯಾಗಾರದ ಉದ್ದೇಶ ಅಪರಾಧ ಪ್ರಕರಣಗಳ ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ಮತ್ತು ಕಾನೂನುಬದ್ಧ ನಿಖರತೆಯನ್ನು ಹೆಚ್ಚಿಸುವುದು, ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣವನ್ನು ವೃದ್ಧಿಸುವುದು ಮತ್ತು ಅಮಾಯಕರಿಗೆ ನ್ಯಾಯ ದೊರಕಿಸುವುದು.

ಕಾರ್ಯಾಗಾರವನ್ನು ಶ್ರೀ ಸೈಯ್ಯದ್ ಬಲೀಗೂರ್ ರೆಹಮಾನ್, ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೀದರ ನಡೆಸಿದರು. ವಿಶೇಷ ಉಪನ್ಯಾಸಕರಾಗಿ ಶ್ರೀ ಮಹೇಶ ವೈದ್ಯ, ಸಲಹೆಗಾರರು, ಸಿಐಡಿ, ಬೆಂಗಳೂರು ಭಾಗವಹಿಸಿದರು.

ಬೀದರ ಜಿಲ್ಲೆಯ ವೈದ್ಯರು, ಪೊಲೀಸ್ ತನಿಖಾಧಿಕಾರಿಗಳು ಹಾಗೂ ತನಿಖಾ ಸಹಾಯಕರು ಕಾರ್ಯಾಗಾರದಲ್ಲಿ ಭಾಗವಹಿಸಿದರು. ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ, IPS, ಬೀದರ ಜಿಲ್ಲೆ, ಬೀದರ, ಈ ಕಾರ್ಯಕ್ರಮವನ್ನು ಬೆಂಬಲಿಸಿದರು.
📲Get App