🔥 TRENDING Two Injured After Car Hits Wrong‑Way A... Man Killed in Shooting Over Land Dispu... Gujarat Tourist Dies, Four Injured in... भारत अंडर‑19 ने एशिया कप जीतकर इतिहास... गुरुकुल एकेडमी बड़ौद में बाल दिवस एवं... सिकंदराराऊ: तेज रफ्तार मैक्स पिकअप ने...
14 Nov 2026•
ગુજરાતી मराठी ਪੰਜਾਬੀ বাংলা
Local

ಬೀದರದ ಭಾಲ್ಕಿಯಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ

✍️ Reporter: Basavaraj pujari 🗓 14 Nov 2026, 09:08 PM 👁 21
Share: 💬 WhatsApp 📘 Facebook 𝕏 Post

ಬೀದರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳ ನಿರ್ದೇಶನದಂತೆ ಭಾಲ್ಕಿ ಗ್ರಾಮೀಣ ಪೊಲೀಸರು ಕಬ್ಬಿನ ಸಾಗಣೆ ಮಾಡುವ ವಾಹನ ಚಾಲಕರಿಗೆ ರೆಡಿಯಂ ಸ್ಟಿಕ್ಕರ್ ಅಳವಡಿಸುವುದು ಮತ್ತು ಹೆಲ್ಮೆಟ್ ಧರಿಸುವುದು ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.

ಬೀದರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳಾದ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ರವರ ನಿರ್ದೇಶನದಂತೆ, ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಪ್ರಭಾಕರ ಪಾಟೀಲ ರವರು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಲ್ಕಿಯ ಆರ್.ಟಿ.ಓ (ರಸ್ತೆ ಸಾರಿಗೆ ಅಧಿಕಾರಿ) ರವರೊಂದಿಗೆ ಸಹಯೋಗದಿಂದ ಕಬ್ಬಿನ ಕಾರ್ಖಾನೆಗಳಿಗೆ ಕಬ್ಬನ್ನು ಸಾಗಿಸುತ್ತಿರುವ ಟ್ರ್ಯಾಕ್ಟರ್ ಮತ್ತು ಲಾರಿ ಚಾಲಕರೊಂದಿಗೆ ಸಂವಾದ ನಡೆಸಲಾಯಿತು.

ರಾತ್ರಿ ಸಮಯದಲ್ಲಿ ಹಿಂದಿನಿಂದ ಸಂಚರಿಸುವ ವಾಹನಗಳ ಚಾಲಕರಿಗೆ ಕಾಣುವಂತೆ, ತಮ್ಮ ವಾಹನಗಳ ಹಿಂದೆ ರೆಡಿಯಂ ಸ್ಟಿಕ್ಕರ್ ಅಳವಡಿಸುವಂತೆ ಚಾಲಕರಿಗೆ ತಿಳಿಸಲಾಯಿತು. ಹಾಗೆಯೇ, ದ್ವಿಚಕ್ರ ವಾಹನ ಚಾಲಿಸುವಾಗ ಹೆಲ್ಮೆಟ್ ಮತ್ತು ಕಾರ್ ಚಾಲಿಸುವಾಗ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವೆಂದು ಸ್ಪಷ್ಟಪಡಿಸಲಾಯಿತು. ಇದರ ಮೂಲಕ ಸಂಚಾರಿ ನಿಯಮಗಳ ಮತ್ತು ಸಂಚಾರಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೀದರ ಜಿಲ್ಲಾ ಪೊಲೀಸರು ಸದಾ ಪ್ರಯತ್ನಿಸುತ್ತಿದ್ದು, ಈ ಪ್ರಯತ್ನವು ಪ್ರಶಂಸನೀಯವಾಗಿದೆ ಎಂದು ಹೇಳಲಾಗಿದೆ. ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಮತ್ತು ವಾಹನ ಚಾಲಕರು ಈ ಸುರಕ್ಷತಾ ನಿಯಮಗಳನ್ನು ಪಾಲಿಸಿ ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಕೋರಲಾಗಿದೆ.
📲Get App