🔥 TRENDING Video: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರ... ਗਲੀ ਵਿੱਚ ਖੇਡਦਾ ਹੋਇਆ ਢਾਈ ਸਾਲਾ ਬੱਚਾ ਸ਼ੱਕ... દાણીલીમડા વિસ્તારમાં લૂંટમાં આરોપીઓ ઝડ... BJP Criticizes Himachal CM Sukhu Over... Jauljibi Mela 2026 Opens, CM Dhami Unv... Uttarakhand Rises as Growing Hub for M...
14 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯ ಪ್ರಜಾಸೇವಾ ಆಂದೋಲನದಲ್ಲಿ ಗಮನ ಸೆಳೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಳಿಗೆಅಂಗನವಾಡಿ ಮಕ್ಕಳ ವಿಶೇಷ ವೇಷಭೂಷಣ, ಇಲಾಖೆಯ ಸೌಲಭ್ಯಗಳ ಮಾಹಿತಿ ಪ್ರದರ್ಶನಕ್ಕೆ ಶಾಸಕಿ ಕರೆಮ್ಮ ಜಿ. ನಾಯಕ ಮೆಚ್ಚುಗೆ

✍️ Reporter: Khaja Hussain 🗓 14 Nov 2026, 07:57 PM 👁 21
Share: 💬 WhatsApp 📘 Facebook 𝕏 Post
**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿಯ ಪ್ರಜಾಸೇವಾ ಆಂದೋಲನದಲ್ಲಿ ಗಮನ ಸೆಳೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಳಿಗೆ

### ಅಂಗನವಾಡಿ ಮಕ್ಕಳ ವಿಶೇಷ ವೇಷಭೂಷಣ, ಇಲಾಖೆಯ ಸೌಲಭ್ಯಗಳ ಮಾಹಿತಿ ಪ್ರದರ್ಶನಕ್ಕೆ ಶಾಸಕಿ ಕರೆಮ್ಮ ಜಿ. ನಾಯಕ ಮೆಚ್ಚುಗೆ

**ಜಾಲಹಳ್ಳಿ, ನ.14:** ದೇವದುರ್ಗ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಕಾರ್ಯಾಲಯದ ವತಿಯಿಂದ ಜಾಲಹಳ್ಳಿಯ ಅಂಬಿಗರ ಚೌಡಯ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ, ದೇವದುರ್ಗ ವತಿಯಿಂದ ಎರಪಾಡು ಮಾಡಲಾಗಿದ್ದ ಮಾಹಿತಿ ಮತ್ತು ಪ್ರಚಾರ ಮಳಿಗೆ ವಿಶೇಷವಾಗಿ ಗಮನ ಸೆಳೆಯಿತು.

ಶಾಸಕಿ ಕರೆಮ್ಮ ಜಿ. ನಾಯಕ ಅವರು ಮಳಿಗೆಯನ್ನು ಉದ್ಘಾಟಿಸಿ, ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ದೊರೆಯುವ ವಿವಿಧ ಸೌಲಭ್ಯಗಳು ಮತ್ತು ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ಪಡೆದರು. ಮಳಿಗೆಯಲ್ಲಿ ಅಂಗನವಾಡಿ ಮಕ್ಕಳಿಗೆ ವಿಶೇಷ ವೇಷಭೂಷಣಗಳನ್ನು ತೊಡಿಸಿ ಪರಿಚಯಿಸಿದ್ದು, ಸಾರ್ವಜನಿಕರ ಗಮನ ಸೆಳೆಯಿತು.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ದೊರೆಯುವ ಪೌಷ್ಟಿಕ ಆಹಾರ, ಶಿಕ್ಷಣ, ಆರೋಗ್ಯ ಹಾಗೂ ಇತರ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಇಲಾಖೆಯಿಂದ ಜಾರಿಗೊಳಿಸಲಾಗಿರುವ ವಿವಿಧ ಯೋಜನೆಗಳ ಬಗ್ಗೆಯೂ ಅರಿವು ಮೂಡಿಸಲಾಯಿತು.

ಮಳಿಗೆಯಲ್ಲಿನ ಮಾಹಿತಿ ಪ್ರದರ್ಶನ ಹಾಗೂ ಅಂಗನವಾಡಿ ಮಕ್ಕಳ ವಿಶೇಷ ವೇಷಭೂಷಣವನ್ನು ಕಂಡು ಶಾಸಕಿ ಕರೆಮ್ಮ ಜಿ. ನಾಯಕ ಅವರು ಸಂತಸ ವ್ಯಕ್ತಪಡಿಸಿ, ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿಕೊಂಡರು.

ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ನಾಯಕ, ಜಾಲಹಳ್ಳಿ ವಲಯ ಮೇಲ್ವಿಚಾರಕಿ ಶಾಂತಾಬಾಯಿ ರಾಥೋಡ್, ದೇವದುರ್ಗ ಹಿರಿಯ ಮೇಲ್ವಿಚಾರಕಿ ಗಂಗಮ್ಮ, ಜಾಲಹಳ್ಳಿ ಬಿ ವಲಯದ ಮೇಲ್ವಿಚಾರಕಿ ನಿರ್ಮಲಾದೇವಿ, ಮಸರಕಲ್ ಮೇಲ್ವಿಚಾರಕಿ ಶರಣಮ್ಮ, ದೇವದುರ್ಗ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶರಣಮ್ಮ, ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಹೈದರಾಬಿ ಸೇರಿದಂತೆ ಜಾಲಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App