🔥 ट्रेंडिंग ୧୪ରେ ବଣ୍ଟାଯିବ ୨.୯୧ଲକ୍ଷ ଆବାସ ଘର, ବଲାଙ୍ଗ... NEET PG 2026 सीट मैट्रिक्स जारी: शीर्ष... टिकट कटने पर अनमोल गगन मान का बड़ा बया... ଭୂମିହୀନ କୃଷି ଶ୍ରମିକଙ୍କ ବାର୍ଷିକ ଆୟ ସୀମା... पंजाब चुनाव: AAP ने जारी की उम्मीदवारो... मनास रोबिन ने ज़ुबीन गार्ग के स्मरण दि...
13 नव. 2026•
ગુજરાતી मराठी ਪੰਜਾਬੀ বাংলা

ಕರ್ನಾಟಕ ರಾಜ್ಯದ ಹಾಗೂ ವಿಜಯಪುರ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ, ಅಗತ್ಯವಿರುವ ಎಲ್ಲಾ ಔಷಧಿಗಳನ್ನು ಸಮರ್ಪಕವಾಗಿ ಪೂರೈಸುವಂತೆ ಕೋರಿ ಮನವಿ.

✍️ रिपोर्टर: YALLAPPA RAGATE (PATIL) 🗓 13 नव. 2026, 12:19 PM 👁 16
यहाँ देखें: 📘 Facebook
शेयर करें: 💬 WhatsApp 📘 Facebook 𝕏 Post
3) ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು (DHO),
ಜಿಲ್ಲಾ ಆರೋಗ್ಯ ಕಚೇರಿ, ವಿಜಯಪುರ.
ಇವರಿಂದ,
ನಾರಾಯಣ ಲಕ್ಷ್ಮಣ ನಾಯಕ,
ವಿಜಯಪುರ.
ಮೋ. 7996578999
ವಿಷಯ: ಕರ್ನಾಟಕ ರಾಜ್ಯದ ಹಾಗೂ ವಿಜಯಪುರ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ, ಅಗತ್ಯವಿರುವ ಎಲ್ಲಾ ಔಷಧಿಗಳನ್ನು ಸಮರ್ಪಕವಾಗಿ ಪೂರೈಸುವಂತೆ ಕೋರಿ ಮನವಿ.
ಮಾನ್ಯರೇ,
ಸವಿನಯ ಮನವಿ ಏನೆಂದರೆ, ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ, ಎಲ್ಲಾ ರೀತಿಯ ಔಷಧಿಗಳು ಸರಿಯಾಗಿ ಲಭ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಗಮನಕ್ಕೆ ಬಂದಿದೆ.
ಸರ್ಕಾರಿ ಆಸ್ಪತ್ರೆಗಳು ಇರುವುದೇ ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ. ಸರ್ಕಾರಿ ಆಸ್ಪತ್ರೆಗಳಲ್ಲಿ ನಿರಂತರ ವೈದ್ಯರು ಇದ್ದಾರೆ. ಆದರೆ ಸಹ ಆಸ್ಪತ್ರೆಯಲ್ಲಿ ಬೇಕಾದ ಔಷಧಿಗಳು ಇಲ್ಲದ ಕಾರಣ ಬಡ ರೋಗಿಗಳು ತೀವ್ರ ಕಷ್ಟ ಅನುಭವಿಸಬೇಕಾಗಿದೆ.
ಔಷಧಿಗಳು ಸಿಗದ ಕಾರಣ ಅನೇಕ ರೋಗಿಗಳು ಸರ್ಕಾರಿ ಆಸ್ಪತ್ರೆಗಳಿಗೆ ಬರುವುದನ್ನು ಕಡಿಮೆ ಮಾಡಿ, ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ಇದರಿಂದ ಬಡ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಅಲ್ಲದೆ, ಔಷಧಿ ಇಲ್ಲದ ಕಾರಣ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದ ಸಾಕಷ್ಟು ರೋಗಿಗಳು ತೊಂದರೆ ಅನುಭವಿಸುತ್ತಿರುವುದು ಹಾಗೂ ಕೆಲವರು ಜೀವ ಕಳೆದುಕೊಳ್ಳುತ್ತಿರುವುದು ಕಂಡುಬಂದಿದೆ. ಇದರಿಂದ ಸರ್ಕಾರಿ ಆಸ್ಪತ್ರೆಯಲ್ಲಿರುವ ನಿರಂತರ ವೈದ್ಯರ ಮೇಲೂ ಜನರಿಗೂ ದಕ್ಕೆ ಉಂಟಾಗುತ್ತಿದೆ.
ಅದರಿಂದ ಮಾನವರಲ್ಲಿ ವಿನಂತಿ ಏನೆಂದರೆ, ರಾಜ್ಯದಲ್ಲಿ ಔಷಧಿಗಳ ತಯಾರಿ ಮತ್ತು ಪೂರೈಕೆ ವ್ಯವಸ್ಥೆಯನ್ನು ಹೆಚ್ಚಿಸುವ ಮಟ್ಟದಲ್ಲಿ ಬಲಪಡಿಸಿ, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ, ಎಲ್ಲಾ ಅಗತ್ಯ ಔಷಧಿಗಳು ನಿರಂತರವಾಗಿ ಲಭ್ಯವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.
ವಿಶೇಷವಾಗಿ ವಿಜಯಪುರ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ನೀಗಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಹಾಗೂ ರಾಜ್ಯ ಮಟ್ಟದಲ್ಲಿ ನೀತಿ ನಿರ್ಧಾರ ಕೈಗೊಳ್ಳಲು ಮಾನ್ಯ ಆರೋಗ್ಯ ಸಚಿವರು ಸೂಕ್ತ ನಿರ್ದೇಶನ ನೀಡಬೇಕೆಂದು ಕೋರುತ್ತೇನೆ.
ತಾವು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರುತ್ತೇನೆ.
ಧನ್ಯವಾದಗಳೊಂದಿಗೆ
ಸ್ಥಳ : ವಿಜಯಪುರ
ದಿನಾಂಕ : 05/11/2026
ತಮ್ಮ ವಿಶ್ವಾಸಿ,
ನಾರಾಯಣ ಲಕ್ಷ್ಮಣ ನಾಯಕ
ಮೊ. 7996578999
K.R.S ಪಕ್ಷದ ಕಾರ್ಯಕರ್ತ
ವಿಜಯಪುರ.
📲Get App