🔥 TRENDING మహిళలకు ఇచ్చిన హామీలు ఎప్పుడెప్పుడు నె... 🛑*वोट बचाओ–देश बचाओ अभियान के तहत कोड... बस्तर फाइटर తణుకు మున్సిపల్ చైర్మన్ పదవికి టీడీపీ... नागपूरमध्ये दिवाळीच्या दिवशी शिक्षक दा... Tamil Nadu Traders Arrested in Sabarim...
13 Nov 2026•
ગુજરાતી मराठी ਪੰਜਾਬੀ বাংলা

ಸಂವಿಧಾನದ ಕುರಿತು ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಿ; ಕ್ರಮ ಕೈಗೊಂಡರೆ ರಸ್ತೆಗಿಳಿದು ಹೋರಾಟ: ಸಿದ್ದು ರಾಯಣ್ಣವರ ಎಚ್ಚರಿಕೆ ಸಪ್ಪಸಾಗರ ವಾರ್ತಾ, ವಿಜಯಪುರ,

✍️ Reporter: YALLAPPA RAGATE (PATIL) 🗓 13 Nov 2026, 11:07 AM 👁 11
Share: 💬 WhatsApp 📘 Facebook 𝕏 Post
ಸಂವಿಧಾನದ ಕುರಿತು ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಿ; ಕ್ರಮ ಕೈಗೊಂಡರೆ ರಸ್ತೆಗಿಳಿದು ಹೋರಾಟ: ಸಿದ್ದು ರಾಯಣ್ಣವರ ಎಚ್ಚರಿಕೆ
ಸಪ್ಪಸಾಗರ ವಾರ್ತಾ, ವಿಜಯಪುರ,
ನ. 12: ಭಾರತದ ಸಂವಿಧಾನದಲ್ಲಿ ಮನुस್ಮೃತಿಯ ಅಂಶಗಳಿವೆ ಎಂದು ಕನೇರಿ ಮಠದ ಕಾಡು ಸಿದ್ಧೇಶ್ವರ ಸ್ವಾಮೀಜಿ ಇತ್ತೀಚೆಗೆ ನೀಡಿರುವ ಹೇಳಿಕೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ. ಡಿ. ನಾಗರ ಬಣ) ತೀವ್ರವಾಗಿ ಖಂಡಿಸಿದೆ.
ಈ ಕುರಿತು ಸಮಿತಿಯ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಪತ್ರಿಕಾ ಪ್ರಕಟಣೆ ನೀಡಿ, ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು, ಸ್ವಾತಂತ್ರ್ಯ, ನ್ಯಾಯ ಹಾಗೂ ಸಮಾನತೆಯನ್ನು ಒದಗಿಸುವ ಮಹತ್ವದ ಪ್ರಜಾಪ್ರಭುತ್ವದ ದಾರಿದೀಪವಾಗಿದೆ ಎಂದು ತಿಳಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನದ ಆಶಯ, ಮೌಲ್ಯ ಮತ್ತು ಮಹತ್ವವನ್ನು ಅರಿತುಕೊಂಡು ಜವಾಬ್ದಾರಿಯುತವಾಗಿ ಮಾತನಾಡಬೇಕು. ಸಂವಿಧಾನದ ಕುರಿತು ಹೇಳಿಕೆ ನೀಡುವವರು ಅದರ ಮೂಲ ಆಶಯಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸ್ವಾಮೀಜಿಯವರ ಹೇಳಿಕೆಯು ಸಂವಿಧಾನ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಗೌರವಿಸುವ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಮನुस್ಮೃತಿ ಮತ್ತು ಭಾರತೀಯ ಸಂವಿಧಾನದ ಆಶಯಗಳನ್ನು ಒಂದೇ ರೀತಿಯಲ್ಲಿ ಬಿಂಬಿಸುವ ಹೇಳಿಕೆಗಳು ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ವೈ.ಸಿ. ಮಯೂರ ದಲಿತ ವಿದ್ಯಾವರ್ಧಕ ಒಕ್ಕೂಟದ ಜಿಲ್ಲಾ ಸಂಚಾಲಕ ಹಾಗೂ ರಮೇಶ ದರನಾಕರ ಜಿಲ್ಲಾ ಸಂಚಾಲಕರು ಉಪಸ್ಥಿತರಿದ್ದರು.
I
📲Get App