🔥 TRENDING कलेक्टर दिलीप कुमार यादव ने सागर के वा... Police Arrest Two Youths with Licensed... Jalandhar Government School Opens New... Delhi Police Seize Rs 14 Lakh of Unlic... Bihar: Family suspects friend in Kunda... Shivpuri Farmer Found Dead After Alleg...
11 Nov 2026•
ગુજરાતી मराठी ਪੰਜਾਬੀ বাংলা

ಹಾಲು, ಮೊಸರು ಮತ್ತು ಬಸ್ ದರ ಏರಿಕೆ ಖಂಡಿಸಿ ಸಿಪಿಐ(ಎಂ) ವತಿಯಿಂದ ಹಟ್ಟಿಯಲ್ಲಿ ಪ್ರತಿಭಟನೆ - ಮುಖ್ಯಮಂತ್ರಿಗಳಿಗೆ ಮನವಿ

✍️ Reporter: Ningappa 🗓 11 Nov 2026, 06:48 PM 👁 13
Share: 💬 WhatsApp 📘 Facebook 𝕏 Post

ಹಟ್ಟಿಯಲ್ಲಿ ಹಾಲು, ಮೊಸರು, ಬಸ್ ದರ ಏರಿಕೆ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ - ಹಾಲು ಲೀಟರ್‌ಗೆ 8 ರೂ., ಮೊಸರು ಲೀಟರ್‌ಗೆ 8 ರೂ., ತುಪ್ಪ ಕೆ.ಜಿ.ಗೆ 104 ರೂ. ಏರಿಕೆ ಖಂಡನೆ - ರಾಯಚೂರು-ಬೆಂಗಳೂರು ಬಸ್ ದರ ಪ್ರತಿ ಹಂತಕ್ಕೆ 9 ರೂ. ಏರಿಕೆ - ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡನೆ - ಬೆಲೆ ಏರಿಕೆ ವಾಪಸ್, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಬರಗಾಲ ಪರಿಹಾರಕ್ಕೆ ಆಗ್ರಹ

ರಾಯಚೂರು/ಹಟ್ಟಿ ಚಿನ್ನದ ಗಣಿ: ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಗಳು ಮತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐ(ಎಂ) ಲಿಂಗಸೂಗೂರು ತಾಲ್ಲೂಕು ಸಮಿತಿಯ ನೇತೃತ್ವದಲ್ಲಿ, ಹಳೆ ಬಸ್ ನಿಲ್ದಾಣದ ಹಟ್ಟಿ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಬಳಿಕ ಮಾನ್ಯ ಮುಖ್ಯಮಂತ್ರಿಗಳಿಗೆ ತಾಲೂಕು ಆಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರಮುಖ ಖಂಡನೆಗಳು ಮತ್ತು ಆಕ್ಷೇಪಣೆಗಳು:
ಹಾಲು ಮತ್ತು ಮೊಸರು ಬೆಲೆ ಏರಿಕೆ: ಕಳೆದ ಒಂದು ತಿಂಗಳ ಅವಧಿಯಲ್ಲಿ ಹಾಲಿನ ದರ ಲೀಟರ್‌ಗೆ 8 ರೂ. ಹಾಗೂ ಮೊಸರಿನ ದರ ಲೀಟರ್‌ಗೆ 8 ರೂ. ಮತ್ತು ತುಪ್ಪದ ದರ ಕೆ.ಜಿ.ಗೆ 104 ರೂ. ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.
ಸಾರಿಗೆ ದರ ಹೆಚ್ಚಳ: ರಾಯಚೂರಿನಿಂದ ಬೆಂಗಳೂರಿಗೆ ಪ್ರತಿ ಹಂತದಲ್ಲೂ 9 ರೂ. ರಂತೆ ಬಸ್ ದರವನ್ನು ಏರಿಕೆ ಮಾಡಲಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಸತತವಾಗಿ ಬಸ್ ಪ್ರಯಾಣ ದರ ಹೆಚ್ಚಳವಾಗಿರುವುದು ಬಡ ಜನರಿಗೆ ಹಾಗೂ ಕಾರ್ಮಿಕರಿಗೆ ದೊಡ್ಡ ಹೊರೆಯಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ: ಕಾಳು, ಸಂತೆ, ಕೋರರು, ಅಕ್ಕಿ, ಬೇಳೆ ಮುಂತಾದ ಧಾನ್ಯಗಳ ಬೆಲೆಯೂ ಗಗನಕ್ಕೇರಿದ್ದು, ಬರಗಾಲದಿಂದ ತತ್ತರಿಸಿರುವ ಬಡವರು, ದಲಿತರು, ಕೂಲಿಕಾರರು ಮತ್ತು ಮಹಿಳಾ ಕಾರ್ಮಿಕರ ಬದುಕು ದುಸ್ತರವಾಗಿದೆ ಎಂದು ಸಿಪಿಐಎಂ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ: ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಯ ಬೆನ್ನಲ್ಲೇ ಸಾರ್ವಜನಿಕ ಹಾಗೂ ಖಾಸಗಿ ಸಾರಿಗೆ ದರಗಳನ್ನು ಹೆಚ್ಚಿಸಿರುವುದು ಬಂಡವಾಳಶಾಹಿಗಳ ಒಡೆಯರಿಗೆ ನೆರವು ನೀಡುವ ದುರುದ್ದೇಶದಿಂದ ಕೂಡಿದೆ ಎಂದು ಟೀಕಿಸಲಾಗಿದೆ.

ಪ್ರಮುಖ ಬೇಡಿಕೆಗಳು:
1. ಕೂಡಲೇ ಜನವಿರೋಧಿ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು.
2. ಹಾಲು ಉತ್ಪಾದಕರಿಗೆ ನೇರವಾಗಿ ಲೀಟರ್‌ಗೆ 8 ರೂ. ರಂತೆ ಪ್ರೋತ್ಸಾಹಧನ ನೀಡಬೇಕು ಹಾಗೂ ಪಶು ಆಹಾರ ದರಗಳನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು.
3. ಬರಗಾಲ ಪರಿಹಾರಗಳನ್ನು ಕೂಡಲೇ ಬಿಡುಗಡೆ ಮಾಡಿ ಜನರಿಗೆ ಸೂಕ್ತ ನೆರವು ಕಲ್ಪಿಸಬೇಕು.

ಈ ಸಂದರ್ಭದಲ್ಲಿ ಸಿಪಿಐ(ಎಂ) ಮುಖಂಡರಾದ ಪಂಚಾಲಯ್ಯ ಹಟ್ಟಿ, ಮುಖಂಡರಾದ ಮಸೂದ್ ಹನಿಪ್, ಹಾಜಿಬಾಬು ಕಟ್ಟಿಮನೆ, ನಿಂಗಪ್ಪ ಎಂ. ವೀರಾಪುರ, ದಾವೂದ್, ರಜಿಯಾ ಬೇಗಂ, ಮಹಾಂತೇಶ ಹಟ್ಟಿ, ವೆಂಕಟೇಶ ಗೋರಕಲ್ಲು, ಅಲ್ಲಾಭಕ್ಷ ದೇವಪುರ, ದುರುಗಮ್ಮ, ಶ್ರೀಧರ, ನಾಗಪ್ಪ ಯಲ್ಲಗಟ್ಟ ಮತ್ತು ಇತರರು ಉಪಸ್ಥಿತರಿದ್ದರು.
📲Get App