🔥 ट्रेंडिंग वाराणसी में माँ कुष्मांडा का अन्नकूट उ... धान बिक्री के लिए टोकन अब घर से, जिले... दमोह‑पन्ना रोड पर कार पलटने से 1 की मौ... जामशेदपुर में '22 feat Kali Ji' कार्यक... जवाई बांध में शराबियों के बीच मारपीट,... உண்மைய எனில் வழக்கை சிபிசிஐடி மாற்ற வே...
10 नव. 2026•
ગુજરાતી मराठी ਪੰਜਾਬੀ বাংলা

ದೇವದುರ್ಗದ ಉದ್ಯಮಿ ಮೊಹಮ್ಮದ್ ಮಹಿಬೂಬ್ ನಾಗುಂಡಿಗೆ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

✍️ रिपोर्टर: Khaja Hussain 🗓 10 नव. 2026, 04:39 PM 👁 20
शेयर करें: 💬 WhatsApp 📘 Facebook 𝕏 Post
**ದೇವದುರ್ಗ ಬ್ರೇಕಿಂಗ್ ನ್ಯೂಸ್**

# ದೇವದುರ್ಗದ ಉದ್ಯಮಿ ಮೊಹಮ್ಮದ್ ಮಹಿಬೂಬ್ ನಾಗುಂಡಿಗೆ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

### ವ್ಯಾಪಾರ ಕ್ಷೇತ್ರದ ಸಾಧನೆಯೊಂದಿಗೆ ಸಮಾಜಸೇವೆ, ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ನಾಗುಂಡಿಗೆ ಗೌರವ

**ದೇವದುರ್ಗ:** ಪಟ್ಟಣದ ಯುವ ಉದ್ಯಮಿ ಹಾಗೂ ಲಿಮ್ರಾ ಜ್ಯೂಸ್ ಸೆಂಟರ್ ಮಾಲೀಕರಾದ ಮೊಹಮ್ಮದ್ ಮಹಿಬೂಬ್ ನಾಗುಂಡಿ ಅವರು ಸಮಾಜಸೇವೆ, ಉದ್ಯಮ ಹಾಗೂ ಕನ್ನಡಪರ ಚಟುವಟಿಕೆಗಳಲ್ಲಿ ಸಲ್ಲಿಸಿರುವ ಕೊಡುಗೆಯನ್ನು ಗುರುತಿಸಿ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಲಾ ಸಂಕೂಲ ಸಂಸ್ಥೆಯ ವತಿಯಿಂದ ನವೆಂಬರ್ 8ರಂದು ಬೆಂಗಳೂರಿನ ರಂಗಮಂದಿರದಲ್ಲಿ ಆಯೋಜಿಸಿದ್ದ ‘ದೇಸಿ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಮೊಹಮ್ಮದ್ ಮಹಿಬೂಬ್ ನಾಗುಂಡಿ ಅವರು ಎಸ್‌ಎಸ್‌ಎಲ್‌ಸಿ ವರೆಗೆ ಶಿಕ್ಷಣ ಪಡೆದಿದ್ದು, 1996ರಲ್ಲಿ ಅವರ ತಂದೆ ಮೊಹಮ್ಮದ್ ಖಾಸಿಂ ಸಾಬ್ ಅವರು ಆರಂಭಿಸಿದ್ದ ಕುಟುಂಬದ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಸುಮಾರು ಮೂರು ದಶಕಗಳ ಉದ್ಯಮದ ಅನುಭವ ಹೊಂದಿರುವ ಅವರು ಗ್ರಾಹಕರ ವಿಶ್ವಾಸ ಗಳಿಸುವುದರ ಜೊತೆಗೆ ಬಿರಿಯಾನಿ, ಜಿಲೇಬಿ, ಸಮೋಸಾ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ವ್ಯಾಪಾರವನ್ನು ವಿಸ್ತರಿಸಿದ್ದಾರೆ.

ಉದ್ಯೋಗಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಕಾಣುವುದು ನಾಗುಂಡಿ ಅವರ ವಿಶೇಷ ಗುಣವಾಗಿದೆ. ನಾಗಾಲ್ಯಾಂಡ್, ಒಡಿಶಾ, ಹೈದರಾಬಾದ್ ಹಾಗೂ ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಆರ್ಥಿಕ ಸಂಕಷ್ಟದ ಸಂದರ್ಭಗಳಲ್ಲಿಯೂ ಕಾರ್ಮಿಕರಿಗೆ ವೇತನ ಪಾವತಿಸುವ ಮೂಲಕ ಮಾನವೀಯ ಕಾಳಜಿ ತೋರಿದ್ದಾರೆ.

ಲಿಮ್ರಾ ಜ್ಯೂಸ್ ಸೆಂಟರ್‌ನಲ್ಲಿ ರಾಸಾಯನಿಕ ಪದಾರ್ಥಗಳನ್ನು ಬಳಸದೆ ತಯಾರಿಸುವ ನೈಸರ್ಗಿಕ ಹಣ್ಣಿನ ರಸಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ವಿಶೇಷವಾಗಿ ಗಡಿಗಿ ಲಸ್ಸಿ, ಗೋಡಂಬಿ ಜ್ಯೂಸ್ ಹಾಗೂ ಎಳನೀರು ದೂರದ ಊರುಗಳಿಂದಲೂ ಗ್ರಾಹಕರನ್ನು ಆಕರ್ಷಿಸುತ್ತಿವೆ. ಸಚಿವರು, ಶಾಸಕರು ಸೇರಿದಂತೆ ಹಲವು ಗಣ್ಯರು ಇವರ ಗ್ರಾಹಕರಾಗಿದ್ದಾರೆ.

ವ್ಯಾಪಾರದ ಜೊತೆಗೆ ಸಮಾಜಮುಖಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ನಾಗುಂಡಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಶಾಲಾ ಮಕ್ಕಳಿಗೆ ನೋಟ್‌ಬುಕ್ ಮತ್ತು ಪೆನ್ನುಗಳನ್ನು ವಿತರಿಸುವುದು, ಜನ್ಮದಿನಾಚರಣೆ ಕಾರ್ಯಕ್ರಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳಿಗೆ ಸಹಕಾರ ನೀಡುತ್ತಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚುಟುಕು ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಕನ್ನಡಪರ ಸಂಸ್ಥೆಗಳ ಚಟುವಟಿಕೆಗಳಿಗೆ ಬೆಂಬಲ ನೀಡುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕೈಜೋಡಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಖ್ಯಾತ ವಕೀಲರಾದ ಬಸವರಾಜ್ ಗೌರಮಪೇಟ ಅವರು ಮೊಹಮ್ಮದ್ ಮಹಿಬೂಬ್ ನಾಗುಂಡಿ ಅವರನ್ನು ಸನ್ಮಾನಿಸಿ, ಅವರ ಪ್ರಾಮಾಣಿಕತೆ, ಗುಣಮಟ್ಟದ ಉತ್ಪನ್ನಗಳು ಹಾಗೂ ತಂದೆಯಿಂದ ಬಳುವಳಿಯಾಗಿ ಬಂದ ಉದ್ಯಮದ ಮೌಲ್ಯಗಳನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವ ಬದ್ಧತೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ಪಾಟೀಲ್ ಉಪಸ್ಥಿತರಿದ್ದರು.

ಕಲಾ ಸಂಕೂಲ ಸಂಸ್ಥೆಯ ಮಾರುತಿ ಬಡಿಗೇರ ಮಾತನಾಡಿ, ಉದ್ಯೋಗಿಗಳ ಕಾಳಜಿ ವಹಿಸುವುದರ ಜೊತೆಗೆ ಕನ್ನಡ ಸಾಹಿತ್ಯ ಮತ್ತು ಸಮಾಜಸೇವೆಗೆ ಕೊಡುಗೆ ನೀಡುತ್ತಿರುವ ಉದ್ಯಮಿಗಳನ್ನು ಗುರುತಿಸಿ ಗೌರವಿಸುವುದು ಮಹತ್ವದ ಕಾರ್ಯವಾಗಿದೆ. ಮೊಹಮ್ಮದ್ ಮಹಿಬೂಬ್ ನಾಗುಂಡಿ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.

ದೇವದುರ್ಗದ ಉದ್ಯಮಿಯೊಬ್ಬರು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿರುವುದು ಪಟ್ಟಣದ ಜನತೆಗೆ ಹೆಮ್ಮೆಯ ಸಂಗತಿಯಾಗಿದ್ದು, ಅವರ ಸಾಧನೆಗೆ ಸಾರ್ವಜನಿಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App