🔥 TRENDING बिहार के सभी कंपनियों को बड़ी सौगात मि... માવજીભાઈ દેસાઈ દ્વારા ધાનેરા સરકિત હાઉ... तावडू में दशहरा: रावण की लकड़ी ले जाते... दिवाळीमुळे ओतूर मार्केटमध्ये भाजीपाल्य... Assam CM Announces Defence Park to Boo... Criminal gang posing as Army suppliers...
09 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಅಮೃತ ಸರೋವರ ಯಶಸ್ಸು - ಪರಾಪೂರ ಕೆರೆ ಹೆಚ್ಚುವರಿ ನೀರು ತಡೆದು ಸಣ್ಣ ಕೆರೆಯಾಗಿ ನಿರ್ಮಾಣ - ದನ ಕರು, ಮೀನು ಸಾಕಣೆ, ರೈತರ ಕೃಷಿಗೆ ವರದಾನ - ಪ್ರೇಕ್ಷಣೀಯ ಸ್ಥಳವಾಗಿ ಮನ ಸೆಳೆಯುತ್ತಿರುವ ಸರೋವರ

✍️ Reporter: Ningappa 🗓 09 Nov 2026, 10:15 PM 👁 4
Share: 💬 WhatsApp 📘 Facebook 𝕏 Post

ಜಾಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪರಾಪೂರ ಕೆರೆ ಬಳಿ 2023-24 ರಲ್ಲಿ ನಿರ್ಮಿಸಿದ ಅಮೃತ ಸರೋವರ ಇಂದು ಸಣ್ಣ ಕೆರೆಯಾಗಿ ಯಶಸ್ವಿ - ಹೆಚ್ಚುವರಿ ನೀರು ತಡೆದು ದನ ಕರುಗಳಿಗೆ, ಮೀನು ಸಾಕಣೆಗೆ, ಪ್ರಾಣಿ ಪಕ್ಷಿಗಳಿಗೆ, ಕೆಳ ಭಾಗದ ರೈತರ ಕೃಷಿಗೆ ಅನುಕೂಲ - ಬೇಸಿಗೆಯಲ್ಲೂ ರೈತರಿಗೆ, ದನ ಕರುಗಳಿಗೆ ಸಹಾಯ - ಅಡೆ ತಡೆ, ಅಪಪ್ರಚಾರ, ದೂರುಗಳ ನಡುವೆಯೂ ಪಂಚಾಯತಿ ಸಾಧನೆ - ಪರಾಪೂರ ಕೆರೆ, ಕೇರಿಲಿಂಗೇಶ್ವರ, ತಿಮ್ಮಪ್ಪನ ದೇವಸ್ಥಾನ, ಕೃಷ್ಣಾ ಬಲದಂಡೆ ಕಾಲುವೆಯ ಸುಂದರ ಪರಿಸರ ಪ್ರವಾಸಿಗರಿಗೆ ಆಕರ್ಷಣೆ

ರಾಯಚೂರು: ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪರಾಪೂರ ಕೆರೆ ತುಂಬಿ ಹೆಚ್ಚುವರಿ ನೀರು ತಡೆಯಲು ಜಾಲಹಳ್ಳಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿ 2023-24 ರಲ್ಲಿ ಅಮೃತ ಸರೋವರ ಕೆರೆ ನಿರ್ಮಾಣದ ಭಾಗವಾಗಿ ನಿರ್ಮಿಸಿದ ಅಮೃತ ಸರೋವರ ಇಂದು ಸಣ್ಣ ಪ್ರಮಾಣದ ಕೆರೆಯಾಗಿ ನಿರ್ಮಾಣವಾಗಿದೆ.

ಹೆಚ್ಚುವರಿ ನೀರು ತಡೆದು ದನ ಕರುಗಳಿಗೆ, ಮೀನು ಸಾಕಣೆಗೆ, ಪ್ರಾಣಿ ಪಕ್ಷಿಗಳಿಗೆ ಮತ್ತು ಕೆರೆ ಭಾಗದ ಕೆಳ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಬೇಸಿಗೆ ಸಮಯದಲ್ಲಿ ಕೂಡ ದನ ಕರುಗಳಿಗೆ, ರೈತರಿಗೆ ಬೇಸಾಯ ಮಾಡಲು ಈ ಅಮೃತ ಸರೋವರ ಸಹಾಯವಾಗಿದೆ.

ಪ್ರಾರಂಭದಲ್ಲಿ ಈ ಸರೋವರ ಪ್ರಾರಂಭಿಸಿದಾಗ ಕೆಲವರು ಉದ್ದೇಶಪೂರ್ವಕವಾಗಿ ಅಡೆ ತಡೆಗಳು ತಂದರು, ಅದರ ಬಗ್ಗೆ ಅಪ ಪ್ರಚಾರ ಮಾಡಿದರು, ಕಾಮಗಾರಿ ಮಾಡುವವರ ವಿರುದ್ಧ ದೂರುಗಳು ಸಲ್ಲಿಸಿದರು. ಅದು ಯಾವುದನ್ನು ಪರಿಗಣಿಸದೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಇಂತಹ ಒಂದು ಮಹತ್ವಪೂರ್ಣ ಕೆಲಸಕ್ಕೆ ಕೈ ಹಾಕಿ ಇಂದು ಯಶಸ್ವಿಯಾಗಿ ಒಂದು ಅಮೃತ ಸರೋವರ ನಿರ್ಮಾಣವಾಗಿದೆ.

ನೋಡುಗರಿಗೆ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ಬಂದು ನೋಡುಗರಿಗೆ ಒಂದು ದಿನದ ಪ್ರವಾಸಕ್ಕೆ ಏನು ಬೋರ್ ಇಲ್ಲದಂತೆ ಈ ಭಾಗದ ಪರಿಸರವನ್ನು ರಸದೌತಣ ಕೊಡುತ್ತದೆ. ಇಲ್ಲಿ ಇರುವ ಪರಾಪೂರ ಕೆರೆ, ಕೇರಿಲಿಂಗೇಶ್ವರ ದೇವಸ್ಥಾನ, ಮಧ್ಯದಲ್ಲಿ ತಿಮ್ಮಪ್ಪನ ದೇವಸ್ಥಾನ, ಎರಡು ಭಾಗದಲ್ಲಿ ಹರಿದು ಹೋಗುತ್ತಿರುವ ಕೃಷ್ಣಾ ಬಲದಂಡೆ ಕಾಲುವೆಯ ಸುಂದರ ವಾತಾವರಣ ನೋಡುಗರಿಗೆ ಮನ ಸೆಳೆಯುತ್ತದೆ.
📲Get App