🔥 TRENDING Nagaland Dear Lottery Results Publishe... Patna readies anti‑pollution plan ahea... Joint Operation Seizes 45 Acres of Ill... कुम्हेर जिले के कुंमार कसबे में पुरानी... Police Raid on Illegal Gambling Hub in... फेस्टिव्हलच्या काळात भंगार दुकानात भयं...
07 Nov 2026•
ગુજરાતી मराठी ਪੰਜਾਬੀ বাংলা

ಮಕ್ಕಳ ಶಿಕ್ಷಣಕ್ಕೆ ಮಾದಿಗ ಸಮಾಜ ಹೆಚ್ಚಿನ ಆದ್ಯತೆ ನೀಡಲಿ: ಶಾಸಕ ಬಿ.ಪಿ. ಹರೀಶ್ ನಿಟ್ಟೂರು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮಾದಿಗ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

✍️ Reporter: Viswanatha D R 🗓 07 Nov 2026, 04:28 PM 👁 19
Watch on: 📘 Facebook
Share: 💬 WhatsApp 📘 Facebook 𝕏 Post
ನಿಟ್ಟೂರು, 07ನವೆಂಬರ್ 2026: ಮಾದಿಗ ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದ್ದು, ಸಮಾಜದ ಪ್ರತಿಯೊಂದು ಕುಟುಂಬವೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಬಿ.ಪಿ. ಹರೀಶ್ ಕರೆ ನೀಡಿದರು.

ನಿಟ್ಟೂರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಪಟೇಲ್ ನಾಗಪ್ಪ ವೇದಿಕೆಯಲ್ಲಿ ನವೆಂಬರ್ 7, 2026ರಂದು ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮಾದಿಗ ಕ್ಷೇಮಾಭಿವೃದ್ಧಿ ಸಂಘ (ರಿ.) ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕೋಡಿಹಳ್ಳಿ ಆದಿಜಾಂಬವ ಪೀಠ, ಹಿರಿಯೂರಿನ ಶ್ರೀ ಷಡಾಕ್ಷರಿ ಮುನಿದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು.

ಈ ಸಂದರ್ಭದಲ್ಲಿ ಹರಿಹರದ ಮಾಜಿ ಶಾಸಕ ಶಿವಶಂಕರ್ ಹೆಚ್.ಎಸ್., ಸತೀಶ್ ಪಾಟೀಲ್, ಗುಡ್ಡಪ್ಪ, ಕಣ್ಣಾಳ್ ಆಂಜನಪ್ಪ, ಲೋಕಿಕೆರೆ ಮಂಜುನಾಥ್ ಸೇರಿದಂತೆ ಸಮಾಜದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
📲Get App