🔥 TRENDING बुंडू में टायर चोरी कांड का खुलासा, चा... आदिवासी नेत्री निशा भगत की संदिग्ध आत्... उज्जैन के महाकाल कालेश्वर मंदिर को श्र... निशा भगत के निधन के बाद रिम्स में पुलि... वाराणसी के चिल्ड्रन एकेडमी में दीपावली... Amit Shah Unveils ₹594-Crore Memorial...
06 Nov 2026•
ગુજરાતી मराठी ਪੰਜਾਬੀ বাংলা

ಭೀಮ್ ಆರ್ಮಿ ರಾಯಚೂರು ಜಿಲ್ಲಾ ಉಪಾಧ್ಯಕ್ಷರಾಗಿ ಹೆಚ್. ಎಂ. ಬಾಬು ನೇಮಕ - ಜಿಲ್ಲಾಧ್ಯಕ್ಷ ವಿಶ್ವನಾಥ ಬಲ್ಲದವ್ ಅವರಿಂದ ಆದೇಶ ಪತ್ರ

✍️ Reporter: Ningappa 🗓 06 Nov 2026, 08:03 PM 👁 14
Share: 💬 WhatsApp 📘 Facebook 𝕏 Post

ಭೀಮ್ ಆರ್ಮಿ (ಭಾರತ ಏಕತಾ ಮಿಷನ್) ರಾಯಚೂರು ಜಿಲ್ಲಾ ಉಪಾಧ್ಯಕ್ಷರಾಗಿ ಹೆಚ್. ಎಂ. ಬಾಬು ಅವರನ್ನು ನೇಮಕ ಮಾಡಿ ಆದೇಶ ಪತ್ರ - ಬಹುಜನ ಹಿತಾಯ, ಬಹುಜನ ಸುಖಾಯ ಸಿದ್ಧಾಂತದಡಿ ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸಲು ಸೂಚನೆ - ಜಿಲ್ಲೆಯಲ್ಲಿ ಬಲಿಷ್ಠ ಸಂಘಟನೆ ಕಟ್ಟಲು ಕರೆ

ಭೀಮ್ ಆರ್ಮಿ ರಾಯಚೂರು ಜಿಲ್ಲಾ ಉಪಾಧ್ಯಕ್ಷರಾಗಿ ಹೆಚ್. ಎಂ. ಬಾಬು ನೇಮಕ

ರಾಯಚೂರು: ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ರವರ ಮತ್ತು ದಾದಾ ಸಾಹೇಬ್ ಮಾನ್ಯವಾರ್ ಕಾನ್ಷಿರಾಮ್ ಜೀ ರವರ ಬಹುಜನ ಹಿತಾಯ, ಬಹುಜನ ಸುಖಾಯ ಸಿದ್ಧಾಂತವನ್ನು ಮುಂದೆ ಕೊಂಡೊಯ್ಯಲು ಆಯುಷ್ಮಾನ್ ಹೆಚ್. ಎಂ. ಬಾಬು ರವರನ್ನು ಭೀಮ್ ಆರ್ಮಿ (ಭಾರತ ಏಕತಾ ಮಿಷನ್) ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಗೊಳಿಸಿ ಈ ಕೂಡಲೇ ಕಾರ್ಯೋನ್ಮುಖರಾಗಬೇಕೆಂದು ಆದೇಶಿಸಲಾಗಿದೆ.

ನೀವು ಈ ಜವಾಬ್ದಾರಿಯನ್ನು ಸಂಪೂರ್ಣ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸುತ್ತೀರಿ ಎಂದು ಪೂರ್ಣವಾಗಿ ನಿರೀಕ್ಷಿಸಲಾಗುತ್ತದೆ. ಮತ್ತು ನಂಬಲಾಗುತ್ತದೆ ನಿಮ್ಮ ಉಜ್ವಲ ಮತ್ತು ಯಶಸ್ವೀ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇವೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

ಸಂಘಟನೆಯ ತತ್ವ ಹಾಗೂ ಸಿದ್ಧಾಂತಗಳನ್ನು ಮುನ್ನಡೆಸಿಕೊಂಡು ಯಾರನ್ನೂ ಕಡೆಗಾಣಿಸದೇ, ಮೇಲು ಕೀಳೆನ್ನುವ ಭೇದ ಭಾವ ಮಾಡದೇ, ಎಲ್ಲಾ ಜಾತಿ ಜನಾಂಗದವರನ್ನು, ಶೋಷಣೆಗೆ ಒಳಗಾದವರನ್ನು ಒಳಗೊಂಡಂತೆ ಸಮ ಸಮಾಜವನ್ನು ನಿರ್ಮಿಸುವ ಪ್ರಕ್ರಿಯೆಗೆ ತಾವು ಸದಾ ಕಾರ್ಯಕರ್ತರಾಗಿ ಸಂವಿಧಾನಾತ್ಮಕವಾಗಿ ಕಾನೂನಿನ ಚೌಕಟ್ಟಿನಡಿ ಕಾರ್ಯ ನಿರ್ವಹಿಸಬೇಕು ಎಂದು ಆದೇಶಿಸಲಾಗಿದೆ.

ರಾಷ್ಟ್ರ ಸಮಿತಿ ಹಾಗೂ ರಾಜ್ಯ ಸಮಿತಿಯ ಆದೇಶಗಳನ್ನು ಅತ್ಯಂತ ಗೌರವಯುತವಾಗಿ ಚಾಚೂ ತಪ್ಪದೇ ಪಾಲನೆ ಮಾಡಿ, ನಿಮ್ಮ ಜಿಲ್ಲೆಯಲ್ಲಿ ಬಲಿಷ್ಠವಾದ ಸಂಘಟನೆಯನ್ನು ಕಟ್ಟಿರಿ ಎಂದು ಈ ಆದೇಶ ಪತ್ರವನ್ನು ಮುಂದಿನ ಆದೇಶದವರೆಗೆ ಕಾರ್ಯ ನಿರ್ವಹಿಸಲು ಸಂಪೂರ್ಣ ಜವಾಬ್ದಾರಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಲಾಗಿದೆ.

ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ವಿಶ್ವನಾಥ ಬಲ್ಲದವ್ ಅವರು ಆದೇಶ ಪತ್ರ ನೀಡಿದ್ದಾರೆ.
📲Get App