🔥 TRENDING আকাশে নয়, মাঠের মাঝে বসে চিল! মুর্শিদ... Lakshman Sunil Lahri Criticizes Music... India Clinches 5‑Wicket Victory Over N... Tanvi becomes first Indian woman to re... Rohit Sharma's Lightning-Fast Throw Di... Jailer 2’s Day‑22 Box‑Office Figures R...
05 Nov 2026•
ગુજરાતી मराठी ਪੰਜਾਬੀ বাংলা

ಸೋಮನಮರಡಿ ಮರು ಸೇರ್ಪಡೆಗೆ ಜನಾಭಿಪ್ರಾಯ ಸಭೆ - ಅರಕೇರಾಗೆ ಹೋಗಲು ವಿರೋಧ, ದೇವದುರ್ಗದಲ್ಲೇ ಇರಲು ಗ್ರಾಮಸ್ಥರ ಒತ್ತಾಯ

✍️ Reporter: Ningappa 🗓 05 Nov 2026, 08:47 AM 👁 25
Share: 💬 WhatsApp 📘 Facebook 𝕏 Post

ಸೋಮನಮರಡಿ ಗ್ರಾಮವನ್ನು ಅರಕೇರಾ ತಾಲೂಕಿಗೆ ಮರು ಸೇರ್ಪಡೆ ಮಾಡುವ ಪ್ರಸ್ತಾವನೆಗೆ ಗ್ರಾಮಸ್ಥರ ವಿರೋಧ - ದೇವದುರ್ಗ ಕೇವಲ 6 ಕಿ.ಮೀ, ಅರಕೇರಾ ಸುಮಾರು 40 ಕಿ.ಮೀ ದೂರ - ದೇವದುರ್ಗ ಹತ್ತಿರ ಇರುವುದರಿಂದ ರೈತರು, ವಿದ್ಯಾರ್ಥಿಗಳು, ವೃದ್ಧರಿಗೆ ಅನುಕೂಲ - ಅರಕೇರಾ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಜನಾಭಿಪ್ರಾಯ ಸಭೆ - ದೇವದುರ್ಗ ತಾಲೂಕಿನಲ್ಲೇ ಮುಂದುವರಿಸಬೇಕು ಎಂದು ಗ್ರಾಮಸ್ಥರ ಸ್ಪಷ್ಟ ಅಭಿಪ್ರಾಯ

ಸೋಮನಮರಡಿ ಮರು ಸೇರ್ಪಡೆಗೆ ಜನಾಭಿಪ್ರಾಯ ಸಭೆ - ದೇವದುರ್ಗದಲ್ಲೇ ಇರಲು ಒತ್ತಾಯ

ಜಾಲಹಳ್ಳಿ: ಸೋಮನಮರಡಿ ಗ್ರಾಮವನ್ನು ಅರಕೇರಾ ತಾಲೂಕಿಗೆ ಮರು ಸೇರ್ಪಡೆಗೊಳಿಸುವ ಕುರಿತು ಗ್ರಾಮದಲ್ಲಿ ಮಂಗಳವಾರ ಜನಾಭಿಪ್ರಾಯ ಸಭೆ ನಡೆಯಿತು. ಅರಕೇರಾ ತಾಲೂಕಿನ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಕಳೆದ ಕೆಲವು ವರ್ಷಗಳ ಹಿಂದೆ ಸೋಮನಮರಡಿ ಸೇರಿದಂತೆ ಗಾಣದಾಳ ಗ್ರಾಮ ಪಂಚಾಯಿತಿಯ 10ಕ್ಕೂ ಹೆಚ್ಚು ಗ್ರಾಮಗಳು ಜಾಲಹಳ್ಳಿ ಹೋಬಳಿಯಿಂದ ದೇವದುರ್ಗ ತಾಲೂಕಿಗೆ ಸೇರ್ಪಡೆಗೊಂಡಿದ್ದವು. ಈಗ ಮತ್ತೆ ಸೋಮನಮರಡಿ ಗ್ರಾಮವನ್ನು ಅರಕೇರಾ ತಾಲೂಕಿಗೆ ಮರು ಸೇರ್ಪಡೆ ಮಾಡುವ ಪ್ರಸ್ತಾವನೆ ಬಂದಿದ್ದು, ಅದರ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಗ್ರಾಮಸ್ಥರು ಅರಕೇರಾ ತಾಲೂಕಿಗೆ ಮರು ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದರು. ದೇವದುರ್ಗ ತಾಲೂಕಿನಲ್ಲೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಸೋಮನಮರಡಿ ಗ್ರಾಮದಿಂದ ದೇವದುರ್ಗ ಕೇವಲ 6 ಕಿ.ಮೀ ಅಂತರದಲ್ಲಿದೆ. ಅರಕೇರಾ ಸುಮಾರು 40 ಕಿ.ಮೀ ದೂರದಲ್ಲಿದೆ. ದೇವದುರ್ಗ ಹತ್ತಿರ ಇರುವುದರಿಂದ ರೈತರು, ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಸಾರ್ವಜನಿಕರಿಗೆ ಆಡಳಿತಾತ್ಮಕ ಕೆಲಸ ಕಾರ್ಯಗಳಿಗೆ, ಶಾಲಾ-ಕಾಲೇಜು, ಆಸ್ಪತ್ರೆ, ಕಂದಾಯ ಇಲಾಖೆ ಕೆಲಸಗಳಿಗೆ ತುಂಬಾ ಅನುಕೂಲವಾಗಿದೆ ಎಂದು ಗ್ರಾಮಸ್ಥರು ಸಭೆಯಲ್ಲಿ ತಿಳಿಸಿದರು.

ಅರಕೇರಾಗೆ ಸೇರ್ಪಡೆಯಾದರೆ ಪ್ರತಿ ಸಣ್ಣ ಕೆಲಸಕ್ಕೂ 40 ಕಿ.ಮೀ ದೂರ ಕ್ರಮಿಸಬೇಕಾಗಿ ತೊಂದರೆ ಪಡಬೇಕಾಗುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮವನ್ನು ಅರಕೇರಾ ತಾಲೂಕಿಗೆ ಸೇರ್ಪಡೆ ಮಾಡುವ ಬಗ್ಗೆ ಪ್ರಸ್ತಾವನೆ ಬಂದಿತ್ತು ಎಂದು ಸಭೆಯಲ್ಲಿ ಚರ್ಚೆಯಾಯಿತು.

ಗ್ರಾಮಸ್ಥರ ಅಭಿಪ್ರಾಯವನ್ನು ದಾಖಲಿಸಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪೊಲೀಸ್ ಬಂದೋಬಸ್ತ್ ನಡುವೆ ಸಭೆ ನಡೆಯಿತು.
📲Get App