🔥 ट्रेंडिंग भिटौरा चौकी क्षेत्र में वन माफिया सक्र... कॉलम में 19 वर्षीय नर्सिंग छात्रा को व... एआई‑आधारित साइबर हमले भारतीय बैंकों को... बाबा बाबा ब्लैक शीप: 6 नवम्बर से सून N... मैक्सटन हॉल सीज़न 3: 9 दिसंबर 2026 से... ಸೋಮನಮರಡಿ ಮರು ಸೇರ್ಪಡೆಗೆ ಜನಾಭಿಪ್ರಾಯ ಸಭೆ...
05 नव. 2026•
ગુજરાતી मराठी ਪੰਜਾਬੀ বাংলা

ದೇವದುರ್ಗ: ಕೃಷಿ ಜಮೀನಿನಲ್ಲಿ ಮದ್ಯದ ಅಂಗಡಿ ತೆರೆಯುವುದಕ್ಕೆ ರೈತರ ತೀವ್ರ ವಿರೋಧ - ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘದ ಮನವಿ

✍️ रिपोर्टर: Ningappa 🗓 05 नव. 2026, 08:07 AM 👁 16
शेयर करें: 💬 WhatsApp 📘 Facebook 𝕏 Post

ದೇವದುರ್ಗ ತಾಲೂಕು ಸಾಸಿಗೇರಾ ಸೀಮಾದ ಸರ್ವೆ ನಂ 69 ರ ಕೃಷಿ ಜಮೀನಿನಲ್ಲಿ ವೈನ್ ಶಾಪ್ ತೆರೆಯಲು ಉದ್ದೇಶ - ರೈತ ಸಂಘದಿಂದ ತೀವ್ರ ವಿರೋಧ - ಪಕ್ಕದ ರೈತರಿಗೆ ಮಾಹಿತಿ ನೀಡದೆ ಲೀಜ್ ಪಡೆದು ಅಂಗಡಿ ತೆರೆಯಲು ಮುಂದಾಗಿದ್ದಾರೆ ಎಂದು ಆರೋಪ - ಕುಡುಕರ ಕಾಟ, ಮಹಿಳಾ ಕೂಲಿಕಾರರಿಗೆ ಕಿರುಕುಳ, ಜಮೀನಿನ ನೈರ್ಮಲ್ಯ ಹಾಳಾಗುವ ಭೀತಿ - ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಜಿಲ್ಲಾಧಿಕಾರಿ, ಅಬಕಾರಿ ಅಧೀಕ್ಷಕರಿಗೆ ತಕರಾರು ಅರ್ಜಿ

ಕೃಷಿ ಜಮೀನಿನಲ್ಲಿ ಮದ್ಯದ ಅಂಗಡಿ ತೆರೆಯುವುದಕ್ಕೆ ರೈತರ ತೀವ್ರ ವಿರೋಧ

ದೇವದುರ್ಗ: ತಾಲೂಕಿನ ಸಾಸಿಗೇರಾ ಸೀಮಾದ ಕೃಷಿ ಜಮೀನಿನಲ್ಲಿ ಮದ್ಯದ ಅಂಗಡಿ (ವೈನ್ ಶಾಪ್) ತೆರೆಯಲು ಉದ್ದೇಶಿಸಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಚುನ್ನಪ್ಪ ಪೂಜೇರಿ ಬಣ) ದೇವದುರ್ಗ ತಾಲೂಕು ಘಟಕ ತೀವ್ರವಾಗಿ ಖಂಡಿಸಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ಆಗ್ರಹಿಸಿ ರಾಯಚೂರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಅಬಕಾರಿ ಅಧೀಕ್ಷಕರಿಗೆ ತಕರಾರು ಅರ್ಜಿ ಸಲ್ಲಿಸಿದೆ.

ದೇವದುರ್ಗ ಸಾಸಿಗೇರಾ ಸೀಮಾದ ಸರ್ವೆ ನಂಬರ್ 69 (ವಿಸ್ತೀರ್ಣ 00-30 ಗುಂಟೆ) ಜಮೀನು ಶರಣಗೌಡ ತಂದೆ ಭೀಮರಾಯ ಹಂಚಿನಾಳ ಎಂಬುವವರ ಹೆಸರಲ್ಲಿದ್ದು, ಈ ಜಾಗವನ್ನು ಮಲ್ಲಪ್ಪ ವಿಶ್ವಕರ್ಮ ಎಂಬುವವರು ಲೀಜ್ ರೂಪದಲ್ಲಿ ಪಡೆದುಕೊಂಡು ಮದ್ಯದ ಅಂಗಡಿ ತೆರೆಯಲು ಮುಂದಾಗಿದ್ದಾರೆ. ಆದರೆ, ಈ ಕುರಿತು ಪಕ್ಕದ ಜಮೀನಿನ ರೈತರಿಗಾಗಲಿ ಅಥವಾ ಸ್ಥಳೀಯರಿಗಾಗಲಿ ಯಾವುದೇ ಮಾಹಿತಿ ನೀಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಅಂಗಡಿ ಪ್ರಾರಂಭವಾದರೆ ಸುತ್ತಮುತ್ತಲಿನ ಜಮೀನುಗಳಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಕುಡುಕರ ಕಾಟ ಹೆಚ್ಚಾಗಲಿದೆ. ಹೊಲಗಳಲ್ಲಿ ಕುಡಿದು ಖಾಲಿ ಬಾಟಲಿಗಳನ್ನು ಎಸೆಯುವುದರಿಂದ ಜಮೀನಿನ ನೈರ್ಮಲ್ಯ ಹಾಳಾಗುತ್ತದೆ. ಹೊಲಗಳಲ್ಲಿ ಕೆಲಸ ಮಾಡುವ ಮಹಿಳಾ ಕೂಲಿಕಾರರಿಗೆ ಕುಡುಕರ ವರ್ತನೆಯಿಂದ ಮುಜುಗರ ಮತ್ತು ಕಿರುಕುಳ ಉಂಟಾಗಲಿದ್ದು, ಮುಂದೆ ಜಮೀನುಗಳಲ್ಲಿ ಕೆಲಸ ಮಾಡಲು ಕೂಲಿಕಾರರು ಬರದ ಸ್ಥಿತಿ ನಿರ್ಮಾಣವಾಗುವ ಭೀತಿಯಿದೆ.

ಈಗಾಗಲೇ ಮದ್ಯವ್ಯಸನದಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕುಡುಕರ ಹಾವಳಿ ಮಿತಿಮೀರಿದೆ. ಕೃಷಿ ಪ್ರದೇಶಕ್ಕೂ ಇದು ಹಬ್ಬಿದರೆ ರೈತರ ಜೀವನ ಕಷ್ಟಕರವಾಗಲಿದೆ.

ಸಾರ್ವಜನಿಕರ ಹಾಗೂ ರೈತರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಮತ್ತು ಅಬಕಾರಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೃಷಿ ಜಮೀನಿನಲ್ಲಿ ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದರೆ ಮದ್ಯದ ದುಷ್ಪರಿಣಾಮಗಳನ್ನು ಅಧಿಕಾರಿಗಳೇ ಎದುರಿಸಬೇಕಾಗುತ್ತದೆ ಹಾಗೂ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಸಂಘಟನೆಯ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಹನುಮಂತರಾಯ ದೋರೆ ಸಿಪ್ಪತ್ತಗೇರಾ, ಗೌರವಾಧ್ಯಕ್ಷ ಮಹೇಂದ್ರ ಮೇತ್ರೆ, ಉಪಾಧ್ಯಕ್ಷ ತಿಮ್ಮನಗೌಡ ಗೌರಂಪೇಟೆ, ಕಾರ್ಯದರ್ಶಿ ಮಾರುತಿ ನಾಯಕ, ಸೋಗುರೆಡ್ಡಿಗೌಡ, ಇಬ್ರಾಹಿಂಸಾಬ್, ಶರಣುನಾಯಕ, ನಾಗರಾಜ ತಳವಾರದೊಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
📲Get App