🔥 TRENDING திருச்சுழி வைத்தியலிங்க நாதார் மேல்நில... देवास में अवैध शराब नियंत्रण में लापरव... IPS Officer Anurag Sujania Resigns Fou... Accused in Satyam Shukla Murder Flaunt... Two dead as speeding SUV hits motorcyc... Two youths killed in road accident in...
04 Nov 2026•
ગુજરાતી मराठी ਪੰਜਾਬੀ বাংলা

ಕವಿತಾಳದ ಬುಧವಾರದ ಸಂತೆ: ವಿಶೇಷ ಸಂಭ್ರಮದ ಮಾರುಕಟ್ಟೆ - ರೈತರ ಬದುಕು, ವ್ಯಾಪಾರಿಗಳ ದುಡಿಮೆಯ ಒಡನಾಟದ ಕೇಂದ್ರ

✍️ Reporter: Ningappa 🗓 04 Nov 2026, 09:58 PM 👁 12
Share: 💬 WhatsApp 📘 Facebook 𝕏 Post

ರಾಯಚೂರು ಜಿಲ್ಲೆ ಸಿರವಾರ ತಾಲೂಕು ಕವಿತಾಳ ಪಟ್ಟಣದಲ್ಲಿ ಪ್ರತಿ ಬುಧವಾರ ನಡೆಯುವ ವಾರದ ಸಂತೆ ವಿಶೇಷ ಸಂಭ್ರಮ - ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಖರೀದಿ-ಮಾರಾಟಕ್ಕೆ ಆಗಮನ - ತರಕಾರಿ, ಹಣ್ಣು, ದಿನಸಿ, ಬಟ್ಟೆ ಸೇರಿದಂತೆ ನಾನಾ ವಸ್ತುಗಳು ಲಭ್ಯ - ರೈತರು ನೇರವಾಗಿ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡುವ ವೇದಿಕೆ - ಕೇವಲ ವ್ಯಾಪಾರವಲ್ಲ, ಗ್ರಾಮಗಳ ಜನರ ಒಡನಾಟದ ಕೇಂದ್ರ

ಕವಿತಾಳದ ಬುಧವಾರದ ಸಂತೆ: ರೈತರ ಬದುಕಿನ, ಜನರ ಒಡನಾಟದ ಕೇಂದ್ರ

ಕವಿತಾಳ, ನ. 4: ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಬುಧವಾರದ ಸಂತೆ ಎಂದರೆ ಅದೇ ಒಂದು ವಿಶೇಷ ಸಂಭ್ರಮ.

ಪ್ರತಿ ಬುಧವಾರ ನಮ್ಮ ಕವಿತಾಳ ಪಟ್ಟಣದಲ್ಲಿ ವಾರದ ಸಂತೆ ನಡೆಯುತ್ತದೆ. ಸಂತೆ ದಿನ ಬಂತೆಂದರೆ ಸಾಕು, ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಖರೀದಿ ಮತ್ತು ಮಾರಾಟಕ್ಕಾಗಿ ಕವಿತಾಳಕ್ಕೆ ಆಗಮಿಸುತ್ತಾರೆ.

ತರಕಾರಿ, ಹಣ್ಣುಗಳು, ದಿನಸಿ ಸಾಮಾನುಗಳು, ಬಟ್ಟೆಗಳು ಸೇರಿದಂತೆ ನಾನಾ ಬಗೆಯ ವಸ್ತುಗಳು ಸಂತೆಯಲ್ಲಿ ಲಭ್ಯವಿರುತ್ತವೆ. ರೈತರು ತಾವು ಬೆಳೆದ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಾರೆ. ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಹಾಕುತ್ತಾರೆ. ಗ್ರಾಹಕರು ಚೌಕಾಸಿ ಮಾಡಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ.

ನಮ್ಮ ಕವಿತಾಳದ ಬುಧವಾರದ ಸಂತೆ ಕೇವಲ ವ್ಯಾಪಾರಕ್ಕೆ ಸೀಮಿತವಾಗಿಲ್ಲ. ಇದು ರೈತರ ಬದುಕು, ವ್ಯಾಪಾರಿಗಳ ದುಡಿಮೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಒಡನಾಟದ ಕೇಂದ್ರವಾಗಿದೆ.
📲Get App