🔥 ट्रेंडिंग मुजफ्फरनगर के साकेत में युवक ने युवती... अशोकनगर के किसान श्री सीताराम कुशवाह न... मनोहर सिंह भाटी ने बताया Hansi में आर्य समाज की सभा आयोजित अगर मालवा के थाना कोतवाली में परित्यक्... शहादा येथे पेन्शन अदालत चे आयोजन
03 नव. 2026•
ગુજરાતી मराठी ਪੰਜਾਬੀ বাংলা

ರಾಜ್ಯಾದ್ಯಂತ ವಕೀಲರ ಮೇಲೆ ಹತ್ಯೆ, ಹಲ್ಲೆ ಖಂಡಿಸಿ ದೇವದುರ್ಗದಲ್ಲಿ ವಕೀಲರ ಪ್ರತಿಭಟನೆ - ನ್ಯಾಯಾಲಯ ಕಲಾಪ ಬಹಿಷ್ಕರಿಸಿ ತಹಶೀಲ್ದಾರ್ ಮೂಲಕ ಸಿಎಂಗೆ ಮನವಿ

✍️ रिपोर्टर: Ningappa 🗓 03 नव. 2026, 12:31 PM 👁 19
शेयर करें: 💬 WhatsApp 📘 Facebook 𝕏 Post

ರಾಜ್ಯಾದ್ಯಂತ ವಕೀಲರ ಮೇಲೆ ನಡೆಯುತ್ತಿರುವ ಹತ್ಯೆ, ಹಲ್ಲೆ, ದೌರ್ಜನ್ಯ ಖಂಡಿಸಿ ರಾಜ್ಯವ್ಯಾಪಿ ಹೋರಾಟದ ಭಾಗವಾಗಿ ದೇವದುರ್ಗ ವಕೀಲರ ಸಂಘದಿಂದ ಕೋರ್ಟ್ ಆವರಣದ ಮುಂದೆ ಪ್ರತಿಭಟನೆ - ನ್ಯಾಯಾಲಯದ ಕಲಾಪ ಬಹಿಷ್ಕಾರ

ದೇವದುರ್ಗ,03: ರಾಜ್ಯಾದ್ಯಂತ ವಕೀಲರ ಮೇಲೆ ನಿರಂತರವಾಗಿ ಹತ್ಯೆ, ಹಲ್ಲೆ, ದೌರ್ಜನ್ಯಗಳು ನಡೆಯುತ್ತಿರುವುದನ್ನು ಖಂಡಿಸಿ, ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ, ದೇವದುರ್ಗ ವಕೀಲರ ಸಂಘ ಮಂಗಳವಾರದಂದು ಕೋರ್ಟ ಆವರಣದ ಮುಂಭಾಗ ಪ್ರತಿಭಟನೆ ನಡೆಸಿತು.

ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ತಹಶೀಲ್ದಾರ ಮುಖಾಂತರ ಸಲ್ಲಿಸಲಾಯಿತು.

ಹಲವು ವರ್ಷಗಳಿಂದ ಜನ ಸಾಮಾನ್ಯರಿಗೆ ನೆರವಾಗುವ ವಕೀಲರ ಮೇಲೆ ನಿರಂತರವಾಗಿ ಹತ್ಯೆ, ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ.

ಇದರಿಂದಾಗಿ ಭಯ ರಹಿತವಾಗಿ ವೃತ್ತಿ ನಡೆಸಲು ಸಾಧ್ಯವಾಗುತ್ತಿಲ್ಲ.

ವಿವಿಧ ಕಚೇರಿ ಗಳಿಗೆ ಸಾರ್ವಜನಿಕ ಕೆಲಸ-ಕಾರ್ಯಗಳಿಗಾಗಿ ವಕೀಲರು ಭೇಟಿ ನೀಡಿದಾಗಲೂ ಸರಿಯಾದ ಗೌರವ ಮತ್ತು ಸ್ಪಂದನೆ ಸಿಗುತ್ತಿಲ್ಲವೆಂದು ವಕೀಲರ ಸಂಘದ ಅಧ್ಯಕ್ಷರಾದ ಎಂ.ಮೌನೇಶ್ವರ, ಹಿರಿಯ ನ್ಯಾಯವಾದಿ ವೇಣುಗೋಪಾಲಗೌಡ ಪಾಟೀಲ ಜಾಲಹಳ್ಳಿ ಅವರು ಆರೋಪಿಸಿದರು.

ಸಂಘದ ಪದಾಧಿಕಾರಿಗಳು, ಹಿರಿಯ-ಕಿರಿಯ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
📲Get App