🔥 TRENDING Radhika Apte Criticizes Bollywood Acto... उन्नाव: प्रेम प्रसंग के चलते युवक ने ख... IB Warns Hawara's Punjab Prison Transf... Former AAP MLAs Claim Constitution Und... Sirsa Accuses Punjab AAP of Concealing... હિંમતનગરમાં ગહું, ચોખા અને મકાઈના ભાવમ...
03 Nov 2026•
ગુજરાતી मराठी ਪੰਜਾਬੀ বাংলা

ರಾಜ್ಯಾದ್ಯಂತ ವಕೀಲರ ಮೇಲೆ ಹತ್ಯೆ, ಹಲ್ಲೆ ಖಂಡಿಸಿ ದೇವದುರ್ಗದಲ್ಲಿ ವಕೀಲರ ಪ್ರತಿಭಟನೆ - ನ್ಯಾಯಾಲಯ ಕಲಾಪ ಬಹಿಷ್ಕರಿಸಿ ತಹಶೀಲ್ದಾರ್ ಮೂಲಕ ಸಿಎಂಗೆ ಮನವಿ

✍️ Reporter: Ningappa 🗓 03 Nov 2026, 12:46 PM 👁 8
Share: 💬 WhatsApp 📘 Facebook 𝕏 Post

ರಾಜ್ಯಾದ್ಯಂತ ವಕೀಲರ ಮೇಲೆ ನಡೆಯುತ್ತಿರುವ ಹತ್ಯೆ, ಹಲ್ಲೆ, ದೌರ್ಜನ್ಯ ಖಂಡಿಸಿ ರಾಜ್ಯವ್ಯಾಪಿ ಹೋರಾಟದ ಭಾಗವಾಗಿ ದೇವದುರ್ಗ ವಕೀಲರ ಸಂಘದಿಂದ ಕೋರ್ಟ್ ಆವರಣದ ಮುಂದೆ ಪ್ರತಿಭಟನೆ - ನ್ಯಾಯಾಲಯದ ಕಲಾಪ ಬಹಿಷ್ಕಾರ

*ವಕೀಲರ ಮೇಲೆ ಹಲ್ಲೆ, ದೌರ್ಜನ್ಯ ಖಂಡಿಸಿ ದೇವದುರ್ಗದಲ್ಲಿ ವಕೀಲರ ಪ್ರತಿಭಟನೆ*

*ದೇವದುರ್ಗ, ನ. 3:* ರಾಜ್ಯಾದ್ಯಂತ ವಕೀಲರ ಮೇಲೆ ನಿರಂತರವಾಗಿ ಹತ್ಯೆ, ಹಲ್ಲೆ, ದೌರ್ಜನ್ಯಗಳು ನಡೆಯುತ್ತಿರುವುದನ್ನು ಖಂಡಿಸಿ, ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ, *ದೇವದುರ್ಗ ವಕೀಲರ ಸಂಘ* ಮಂಗಳವಾರದಂದು ಕೋರ್ಟ್ ಆವರಣದ ಮುಂಭಾಗ ಪ್ರತಿಭಟನೆ ನಡೆಸಿತು.

ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ತಹಶೀಲ್ದಾರ್ ಮುಖಾಂತರ ಸಲ್ಲಿಸಲಾಯಿತು.

ಹಲವು ವರ್ಷಗಳಿಂದ ಜನಸಾಮಾನ್ಯರಿಗೆ ನೆರವಾಗುವ ವಕೀಲರ ಮೇಲೆ ನಿರಂತರವಾಗಿ ಹತ್ಯೆ, ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ಇದರಿಂದಾಗಿ ಭಯರಹಿತವಾಗಿ ವೃತ್ತಿ ನಡೆಸಲು ಸಾಧ್ಯವಾಗುತ್ತಿಲ್ಲ.

ವಿವಿಧ ಕಚೇರಿಗಳಿಗೆ ಸಾರ್ವಜನಿಕ ಕೆಲಸ-ಕಾರ್ಯಗಳಿಗಾಗಿ ವಕೀಲರು ಭೇಟಿ ನೀಡಿದಾಗಲೂ ಸರಿಯಾದ ಗೌರವ ಮತ್ತು ಸ್ಪಂದನೆ ಸಿಗುತ್ತಿಲ್ಲವೆಂದು ವಕೀಲರ ಸಂಘದ ಅಧ್ಯಕ್ಷರಾದ *ಎಂ. ಮೌನೇಶ್ವರ*, ಹಿರಿಯ ನ್ಯಾಯವಾದಿ *ವೇಣುಗೋಪಾಲಗೌಡ ಪಾಟೀಲ ಜಾಲಹಳ್ಳಿ* ಅವರು ಆರೋಪಿಸಿದರು.

ಸಂಘದ ಪದಾಧಿಕಾರಿಗಳು, ಹಿರಿಯ-ಕಿರಿಯ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು
📲Get App