🔥 TRENDING ਪੰਜਾਬ ''ਚ ਇਕ ਹਫਤੇ ਦੀ ਮੌਸਮ ਨੂੰ ਲੈ ਕੇ ਵੱ... ऊंचाहार में पूर्व नगर पंचायत अध्यक्ष क... PVV Infra Secures Two Wayside Amenitie... Three members of Madhya Pradesh-based... Two brothers arrested for allegedly sh... IPL 2027: Deadline for Player Retentio...
02 Nov 2026•
ગુજરાતી मराठी ਪੰਜਾਬੀ বাংলা

ಎರಡು ಜಲಾಶಯಗಳಲ್ಲಿ ನೀರಿದ್ದರೂ ರಾಯಚೂರು ರೈತರಿಗೆ ನೀರಿಲ್ಲ - ನೆರೆ ಜಿಲ್ಲೆ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಎಂದು ಮಾಜಿ ಸಚಿವ ಶಿವನಗೌಡ ನಾಯಕ ಆಕ್ರೋಶ

✍️ Reporter: Ningappa 🗓 02 Nov 2026, 07:11 PM 👁 15
Share: 💬 WhatsApp 📘 Facebook 𝕏 Post

ತುಂಗಭದ್ರಾ, ನಾರಾಯಣಪುರ, ಆಲಮಟ್ಟಿ ಜಲಾಶಯಗಳಲ್ಲಿ ನೀರಿದ್ದರೂ ನಾರಾಯಣಪುರ ನಾಲೆಗೆ ನೀರು ಬಿಡದೆ ನಿಂತಿರುವ ಮೆಣಸಿನಕಾಯಿ, ಭತ್ತದ ಬೆಳೆ ಒಣಗುತ್ತಿದೆ - ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ 5-6 ಜಿಲ್ಲೆಗಳ ರೈತರು ಸಂಕಷ್ಟದಲ್ಲಿ - ಮಾನವೀಯತೆ ಆಧಾರದ ಮೇಲೆ ನೀರು ಬಿಡಿ ಎಂದು ಮಾಜಿ ಸಚಿವ ಶಿವನಗೌಡ ಆಗ್ರಹ

*ಎರಡು ಜಲಾಶಯಗಳಲ್ಲಿ ನೀರಿದ್ದರೂ ರೈತರಿಗೆ ನೀರಿಲ್ಲ - ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ: ಮಾಜಿ ಸಚಿವ ಶಿವನಗೌಡ ನಾಯಕ ಕಿಡಿ*

*ರಾಯಚೂರು/ದೇವದುರ್ಗ:* ರಾಯಚೂರು ಜಿಲ್ಲೆಯ ರೈತರ ನೀರಿನ ಸಂಕಷ್ಟದ ಬಗ್ಗೆ *ಮಾಜಿ ಸಚಿವ, ಬಿಜೆಪಿ ಮುಖಂಡ ಶಿವನಗೌಡ ನಾಯಕ* ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಇವತ್ತು ರೈತರದು ಏನಾಗಿದೆ ಅಂತಂದ್ರೆ ಎರಡು ಜಲಾಶಯಗಳಿವೆ, ಎರಡು ಜಲಾಶಯ ಇದ್ದು ಕೂಡ ನೀರು ಕೊಡೋಕೆ ಆಗ್ತಾಯಿಲ್ಲ. ತುಂಗಭದ್ರದಲ್ಲೂ ನೀರಿದೆ, ನಾರಾಯಣಪುರ ಜಲಾಶಯದಲ್ಲಿ ನೀರಿದೆ, ಆಲಮಟ್ಟಿಯಲ್ಲಿ ನೀರಿದೆ. ಆದರೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಕನಕಗಿರಿ ಸೇರಿದಂತೆ ನಾಲ್ಕೈದು ತಾಲೂಕುಗಳು ಡ್ರೈಲ್ಯಾಂಡ್ ಆಗಿವೆ" ಎಂದು ಅವರು ಹೇಳಿದರು.

"ಬಿಜಾಪುರ, ಬಾಗಲಕೋಟೆಯವರು ತಮಗೆ ಕೆರೆ ತುಂಬಿಸಲು ನೀರು ಬೇಕು ಅಂತ ಇಚ್ಛಾಶಕ್ತಿಯಿಂದ ನಮಗೆ ನೀರು ಕೊಡಬಾರದು ಅಂತ ಫೈಟ್ ಮಾಡ್ತಾರೆ. ಅವರಲ್ಲಿ ಕೆರೆ ತುಂಬಿಸುವ ಬದ್ಧತೆ ಇದೆ, ಆದರೆ ನಮ್ಮಲ್ಲಿ ಆ ಬದ್ಧತೆ ಇಲ್ಲ. ನಾನು ನಾಲ್ಕು ಬಾರಿ ಸದನ ಪ್ರವೇಶ ಮಾಡಿದಾಗ, ಸಲಹಾ ಸಮಿತಿಯಲ್ಲಿ ಇದ್ದಾಗ ನಾನು ಕಂಡ ಅನುಭವ ಇದು. ನಾವು ಕೊನೆ ಭಾಗದವರು, ಮೊದಲನೇ ಆದ್ಯತೆ ನಮಗೆ ಕೊಡ್ರಿ ಅಂತ ಕೇಳ್ತಾ ಇದ್ದೀವಿ" ಎಂದರು.

"ಇವತ್ತು ಬೆಳೆದಿರುವ ಮೆಣಸಿನಕಾಯಿ, ಭತ್ತದ ಸ್ಟ್ಯಾಂಡಿಂಗ್ ಕ್ರಾಪ್ ಇದೆ. ಇನ್ನೂ ಒಂದೂವರೆ ತಿಂಗಳು ನೀರು ಕೊಡದಿದ್ದರೆ ಬರಗಾಲ ಆವರಿಸಿ ಸಾಯುವ ಪರಿಸ್ಥಿತಿ ಬಂದಿದೆ. ನೂರಾರು ರೈತರು ದಿನಾಲೂ ಕರೆ ಮಾಡಿ 'ಸರ್ ನೀವು ಸುಮ್ನೆ ಕೂತಿದ್ದೀರಿ, ಬಹಳ ತೊಂದರೆಯಲ್ಲಿದ್ದೀವಿ, ನೆರವಿಗೆ ಬನ್ನಿ' ಅಂತ ಅಂಗಲಾಚಿ ಕೇಳ್ತಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಕೂತರೆ ಅನ್ಯಾಯ ಮಾಡಿದ ಹಾಗೆ" ಎಂದು ಹೇಳಿದರು.

"ರಾಜ್ಯ ಸರ್ಕಾರ ಜಿಂದಾಲ್ ಗೆ ನೀರು ಕೊಡುತ್ತೆ, ಬಾಲ್ ಲೋಟಕ್ಕೆ ನೀರು ಕೊಡುತ್ತೆ. ಕಬ್ಬಿಣ ತಿನ್ನೋಕೆ ಬರಲ್ಲ, ಅನ್ನ ತಿನ್ನೋಕೆ ಬರುತ್ತೆ. ಇನ್ನೊಂದು ಕಡೆ ರಾತ್ರೋರಾತ್ರಿ ತೆಲಂಗಾಣಕ್ಕೆ ಸುಮಾರು 10 TMC ನೀರು ಆಂಧ್ರ ಪ್ರದೇಶಕ್ಕೆ ಹೋಗಿದೆ. ಇದರ ಬಗ್ಗೆ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ದಿವ್ಯ ಮೌನವಾಗಿ ಕೂತಿದ್ದಾರೆ. ಸದನದಲ್ಲಿ ಮಾತನಾಡಲ್ಲ, ಸಲಹಾ ಸಮಿತಿಯಲ್ಲಿ ಹೋರಾಟ ಮಾಡಲ್ಲ" ಎಂದು ಕಿಡಿಕಾರಿದರು.

"ದಯವಿಟ್ಟು ರಾಜಕೀಯ ಮಾಡಬೇಡಿ, ಮಾನವೀಯತೆ ಆಧಾರದ ಮೇಲೆ ರೈತರನ್ನು ಉಳಿಸಿ. ಕುಡಿಯುವ ನೀರಿಗೆ ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು ಉಳಿದದ್ದನ್ನು ರೈತರಿಗೆ ಕೊಡಿ. ಯಾದಗಿರಿ, ರಾಯಚೂರು, ದೇವದುರ್ಗ, ಅರಕೇರಾ, ಸಿರವಾರ, ಲಿಂಗಸೂಗೂರು, ಹೊಸಪೇಟೆ, ಬಳ್ಳಾರಿ, ಕೊಪ್ಪಳ ಸೇರಿ 5-6 ಜಿಲ್ಲೆಗಳಿಗೆ ಅನುಕೂಲ ಆಗುವಂತೆ ತುರ್ತು ನಿರ್ಣಯ ಮಾಡಬೇಕು" ಎಂದು ರಾಜ್ಯ ಸರ್ಕಾರಕ್ಕೆ ಕೈ ಮುಗಿದು ಮನವಿ ಮಾಡಿದರು.

"ನವಿಲು ಜಲಾಶಯ DPR ಮಾಡಿ, ಚಿಂತನ್ ಗಿರಿ ಜಲಾಶಯ 35 TMC ಸಾಮರ್ಥ್ಯದ್ದು - ಇದರಿಂದ ಯಾದಗಿರಿ, ಗುಲ್ಬರ್ಗ, ರಾಯಚೂರು ಜಿಲ್ಲೆಗಳ ಕುಡಿಯುವ ನೀರು, ರೈತರ ಸಮಸ್ಯೆ ಬಗೆಹರಿಯುತ್ತೆ. 5 ಸಾವಿರ ಕೋಟಿ ಕೆಲಸ ಸ್ಟಾರ್ಟ್ ಮಾಡಿ. ಫ್ರೀ ಸ್ಕೀಮ್ ಕೊಟ್ಟು ದುಡ್ಡು ಹಂಚುವುದರಿಂದ ಒಳ್ಳೆ ಸರ್ಕಾರ ಆಗಲ್ಲ. ರೈತರಿಗೆ ಆದ್ಯತೆ ಕೊಟ್ಟಾಗ ಒಳ್ಳೆ ಸರ್ಕಾರ ಆಗುತ್ತೆ. ಕೇಂದ್ರದ ತೊಡಕು ಇದ್ದರೆ ನಾವು ಪ್ರಧಾನಿ ಕಾಲು ಹಿಡಿದು ಕೇಳಲು ರೆಡಿ ಇದ್ದೇವೆ" ಎಂದರು
📲Get App