ನಿಶ್ಚಿತಾರ್ಥ ಸಮಾರಂಭದಲ್ಲಿ ಕನ್ನಡ ನಾಡಿನ ಹಾಡು ಹಾಡಿ ಗಮನ ಸೆಳೆದ ನಿವೃತ್ತ ಶಿಕ್ಷಕರಾದ ಎಂ.ಡಿ. ಆಂಜನೇಯ
ಜಗಳೂರು, ನ. 1: ಕನ್ನಡ ರಾಜ್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಜಗಳೂರಿನ ನಿವೃತ್ತ ಶಿಕ್ಷಕ ಎಂ. ಡಿ. ಆಂಜನೇಯ ಅವರು ತಮ್ಮ ಮಗಳ ನಿಶ್ಚಿತಾರ್ಥ ಸಮಾರಂಭದಲ್ಲಿ ಕನ್ನಡ ನಾಡಿನ ಕುರಿತಾದ ಸುಂದರ ಗೀತೆಯನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಯಾವುದೇ ವೃತ್ತಿಪರ ಗಾಯಕರಿಗೂ ಕಡಿಮೆಯಿಲ್ಲದಂತೆ ಸುಮಧುರವಾಗಿ ಕನ್ನಡ ನಾಡಿನ ಹಾಡನ್ನು ಹಾಡಿ ಕನ್ನಡಾಭಿಮಾನ ಮೆರೆದರು. ಕುಟುಂಬದ ಶುಭ ಸಮಾರಂಭದಲ್ಲಿ ಕನ್ನಡ ನಾಡು, ನುಡಿಯ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ ಅವರ ಗಾಯನ ನೆರೆದಿದ್ದ ಬಂಧುಮಿತ್ರರು ಹಾಗೂ ಅತಿಥಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಮಗಳ ನಿಶ್ಚಿತಾರ್ಥದ ಸಂಭ್ರಮದೊಂದಿಗೆ ಕನ್ನಡ ರಾಜ್ಯೋತ್ಸವದ ಸೊಬಗನ್ನೂ ಬೆರೆಸಿದ ಈ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು. ಕನ್ನಡದ ಮೇಲಿನ ಪ್ರೀತಿ ಕೇವಲ ಮಾತಿಗಷ್ಟೇ ಸೀಮಿತವಾಗದೆ ಪ್ರತಿಯೊಬ್ಬರ ಬದುಕಿನಲ್ಲೂ ಅಭಿವ್ಯಕ್ತಿಯಾಗಬೇಕು ಎಂಬ ಸಂದೇಶವನ್ನು ಅವರ ಗಾಯನ ಸಾರಿತು.