🔥 ट्रेंडिंग ଅଧା ରହିଲା ଜଗା ଦର୍ଶନ: ବ୍ୟାରିକେଡ୍ ବାହାରେ... ଗଞ୍ଜାମ ସ୍ଥିତି ମୁକାବିଲା ପାଇଁ ୩୦ ଓଏଏସ ଅଫ... पैराम वीर (बैटल ऑफ़ गंगासागर) ने बॉक्स... बॉलीवुड के निर्देशक संजय गुप्ता, ‘काबि... ଦୁର୍ଘଟଣା ପରେ ଜଣାପଡ଼ିଲା କାହିଁକି ପୁଲିସ୍‌... संजय गुप्ता, 'कांटे' और 'शूटआउट एट लोख...
31 अक्टू. 2026•
ગુજરાતી मराठी ਪੰਜਾਬੀ বাংলা

ಚುನಾವಣಾ ನಿಯಮಗಳನ್ನು ಉಲ್ಲಂಘನೆ: ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸುವಂತೆ ವಿಶ್ವನಾಥ ಬಲ್ಲಿದವ್ ಒತ್ತಾಯ

✍️ रिपोर्टर: Ningappa 🗓 31 अक्टू. 2026, 11:23 AM 👁 23
शेयर करें: 💬 WhatsApp 📘 Facebook 𝕏 Post
ದೇವದುರ್ಗ: ದೇವದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕರು ಈ ಹಿಂದೆ ತಹಶೀಲ್ದಾರ್ ಅವರ ಮುಖ್ಯ ಕುರ್ಚಿಯಲ್ಲಿ ಕುಳಿತು ಶಿಷ್ಠಾಚಾರ ಉಲ್ಲಂಘನೆ ಮಾಡಿದ್ದು ಅಲ್ಲದೇ ಮತ್ತೆ ಚುನಾವಣಾ ನಿಯಮಗಳನ್ನೇ ಉಲ್ಲಂಘನೆ ಮಾಡಿ ಎನ್ ಡಿ ಎ ಅಭ್ಯರ್ಥಿ ಗೆಲ್ಲುತ್ತಾರೆ ಎಂದು 100 ಮೀಟರ್ ಒಳಗೆ (ತಹಶಿಲ್ ಕಛೇರಿ ಮಟ್ಟಿಲ ಮೇಲೆಯೇ) ಹೇಳಿಕೆ ನೀಡಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಅಧಿಕಾರ ಮುಖ್ಯವಲ್ಲ, ಕಾನೂನು ಮುಖ್ಯ! ಹುದ್ದೆ ಮುಖ್ಯವಲ್ಲ, ನಿಯಮಗಳ ಪಾಲನೆ ಮುಖ್ಯ! ಇದನ್ನು ದೇವದುರ್ಗ ತಾಲೂಕಿನ ಪ್ರಥಮ ಪ್ರಜೆಯಾದ ಶಾಸಕಿ ಕರೆಮ್ಮ ಜಿ ನಾಯಕ್ ಅವರು ಪದೇ ಪದೇ ಮರೆತು ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ನಿಯಮಗಳ ಉಲ್ಲಂಘನೆ ಮಾಡಿ ವರ್ತಿಸುತ್ತಿರೋದು ಬೇಸರದ ಸಂಗತಿ!

ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಶಾಸಕಿಯವರನ್ನು ಒಳಗೊಂಡು ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಮೇಲೂ ಜರುಗಿಸಬೇಕು ಎಂದು ಭೀಮ್ ಆರ್ಮಿಯ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಬಲ್ಲಿದವ್ ಒತ್ತಾಯಿಸಿದ್ದಾರೆ.
📲Get App