🔥 TRENDING पूर्व राजो सिंह की प्रतिमा के अनावरण क... Chhattisgarh Congress Gears Up for IND... SC Collegium Recommends 11 Judges for... ಜಾಲಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಸಾಮೂಹ... Union Minister Hardeep Puri to Contest... બોડીયા ગામે લીંબડી પોલીસની મોટી કાર્યવ...
30 Oct 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ದಸರಾ ಪ್ರಯುಕ್ತ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ: ವಿಜಯಪುರ ತಂಡಕ್ಕೆ ಪ್ರಥಮ ಬಹುಮಾನ

✍️ Reporter: Khaja Hussain 🗓 30 Oct 2026, 10:42 PM 👁 10
Share: 💬 WhatsApp 📘 Facebook 𝕏 Post
ಜಾಲಹಳ್ಳಿ | ವಿಶೇಷ ವರದಿ

### ಜಾಲಹಳ್ಳಿಯಲ್ಲಿ ದಸರಾ ಪ್ರಯುಕ್ತ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ: ವಿಜಯಪುರ ತಂಡಕ್ಕೆ ಪ್ರಥಮ ಬಹುಮಾನ

### ಕೊಪ್ಪಳ ತಂಡಕ್ಕೆ ದ್ವಿತೀಯ ಸ್ಥಾನ; ಆತಿಥೇಯ ಶ್ರೀ ದುರ್ಗಾದೇವಿ ಜಾಲಹಳ್ಳಿ ತಂಡಕ್ಕೆ ತೃತೀಯ ಬಹುಮಾನ

ಜಾಲಹಳ್ಳಿ, ಅ. 29: ದಸರಾ ಹಬ್ಬದ ಪ್ರಯುಕ್ತ ಶ್ರೀ ದುರ್ಗಾದೇವಿ ಕಮಿಟಿ ವತಿಯಿಂದ ಆಯೋಜಿಸಿದ್ದ ಎರಡನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಅ. 29ರಂದು ಜಾಲಹಳ್ಳಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ತಂಡಗಳು ಭಾಗವಹಿಸಿ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿದವು. ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯಾವಳಿಯಲ್ಲಿ ವಿಜಯಪುರ ತಂಡ ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಕೊಪ್ಪಳ ತಂಡ ದ್ವಿತೀಯ ಸ್ಥಾನ ಗಳಿಸಿತು. ಆತಿಥೇಯ ಶ್ರೀ ದುರ್ಗಾದೇವಿ ಜಾಲಹಳ್ಳಿ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

ಐದು ತಂಡಗಳಿಗೆ ನಗದು ಬಹುಮಾನ ವಿತರಣೆ

ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನ ₹15,000 ಅನ್ನು ಕೊಪ್ರೇಶ್ ರಾವ್ ಧಣಿ ದೇಸಾಯಿ, ದ್ವಿತೀಯ ಬಹುಮಾನ ₹10,000 ಅನ್ನು ಪ್ರತೀಕ್ ಪಾಟೀಲ್ ಜಾಲಹಳ್ಳಿ, ತೃತೀಯ ಬಹುಮಾನ ₹7,500 ಅನ್ನು ಗೋವಿಂದಪ್ಪ ಹಲಗೇರಿ, ಚತುರ್ಥ ಬಹುಮಾನ ₹5,000 ಅನ್ನು ಮುದಗೋಟದ ನಿರಂಜನ್ ವಕೀಲರು ಹಾಗೂ ಪಂಚಮ ಬಹುಮಾನ ₹2,500 ಅನ್ನು ದೇವದುರ್ಗದ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಚೌದ್ರಿ ಅವರು ಪ್ರಾಯೋಜಿಸಿದ್ದರು.

ಶಿವರಾಜ್ ಸಾಹುಕಾರ್ ಪಾಣಿ ಅಧ್ಯಕ್ಷತೆ

ಪಂದ್ಯಾವಳಿಯ ಅಧ್ಯಕ್ಷತೆಯನ್ನು ಶಿವರಾಜ್ ಸಾಹುಕಾರ್ ಪಾಣಿ ವಹಿಸಿದ್ದರು. ಈ ಸಂದರ್ಭದಲ್ಲಿ ಶಿವು ಧಣಿ ಪಾಣಿ ಸಾಹುಕಾರ್, ಕ್ಲಾಸ್‌-1 ಗುತ್ತಿಗೆದಾರರು, ವೀರೇಶ್ ಅರಕೇರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಎಲ್ಲಪ್ಪ ಗಚ್ಚಿನಮನೆ, ಹುಲುಗಪ್ಪ, ಹನುಮಂತರಾಯ ನೆಲ್ಲಿಂಗಿ, ಮಲ್ಲಿಕಾರ್ಜುನ್ ತಂದೆ ನಾಗಪ್ಪ ಹಡಪದ್, ರಮೇಶ್ ಸಾಲಿ, ವೀರೇಶ್ ಗೌಳಿ, ವೆಂಕಟೇಶ್ ಕಟ್ಟಿಮನಿ, ಸಿದ್ದರಾಮ್, ತಿರುಪತಿ ಹಡಪದ್, ಬಾಲಪ್ಪ ಲಿಂಗದಳ್ಳಿ ಹಾಗೂ ಮಲ್ಲಿಕಾರ್ಜುನ್ ಭಜಂತ್ರಿ ಸೇರಿದಂತೆ ಹಲವು ಗಣ್ಯರು ಮತ್ತು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

ವರದಿ: ಖಾಜಾ ಹುಸೇನ್ ಬಾಬಾ, ಪತ್ರಕರ್ತರು, ಜಾಲಹಳ್ಳಿ
📲Get App