🔥 TRENDING Congress Announces March from CP to Ra... ଦୁର୍ନୀତି ନିବାରଣ ସଚେତନତା ସପ୍ତାହ: ଆନ୍ତଃ-... ન્યારી ડેમની ખાણમાંથી યુવકનો મૃતદેહ મળ... Bhopal Inspector Babita Katheria Dismi... 📍જેતપુરના ભીડભંજન રોડ પર અકસ્માતની ગં... ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರ...
30 Oct 2026•
ગુજરાતી मराठी ਪੰਜਾਬੀ বাংলা

ಲಿಂಗದಹಳ್ಳಿಯಲ್ಲಿ ಕಾಶಿ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ

✍️ Reporter: Khaja Hussain 🗓 30 Oct 2026, 10:19 PM 👁 17
Share: 💬 WhatsApp 📘 Facebook 𝕏 Post
**ಜಾಲಹಳ್ಳಿ | ವಿಶೇಷ ವರದಿ**

# ಲಿಂಗದಹಳ್ಳಿಯಲ್ಲಿ ಕಾಶಿ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ

### ವಿವಿಧ ಮಠಗಳ ಮಠಾಧೀಶರು, ಶಿವಯೋಗಿಗಳು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮ; ಭಕ್ತರಿಗೆ ಜಗದ್ಗುರುಗಳಿಂದ ಹಿತವಚನ

**ಜಾಲಹಳ್ಳಿ, ಅ. 30:** ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮೀಪದ ಲಿಂಗದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಶ್ರೀ ಶ್ರೀ 1008 ಶ್ರೀಮದ್ ಜ್ಞಾನಸಿಂಹಾಸನಾಧೀಶ್ವರ ಕಾಶಿ ಜಗದ್ಗುರು ಧರ್ಮರತ್ನ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಭಗವತ್ಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ಪವಿತ್ರ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು.

ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿದ ಕಾಶಿ ಜಗದ್ಗುರುಗಳು ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿ, ಧಾರ್ಮಿಕ ಮೌಲ್ಯಗಳು, ಭಕ್ತಿ, ಆಧ್ಯಾತ್ಮಿಕ ಚಿಂತನೆ ಹಾಗೂ ಧರ್ಮಾಚರಣೆಯ ಮಹತ್ವದ ಕುರಿತು ಹಿತವಚನಗಳನ್ನು ನುಡಿದರು.

ಕಾರ್ಯಕ್ರಮದಲ್ಲಿ ಜಾಲಹಳ್ಳಿಯ ಬೃಹನ್ಮಠದ ಶ್ರೀ ಷ.ಬ್ರ. ವಿದ್ಯಾಮಾನ್ಯ ಶಿವಾಭಿನವ ಶಿವಾಚಾರ್ಯರತ್ನ ಜಯಶಾಂತಲಿಂಗೇಶ್ವರ ಶಿವಾಚಾರ್ಯರು, ದೇವಾಪೂರದ ಸಂಸ್ಥಾನಮಠದ ಶ್ರೀ ಷ.ಬ್ರ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ದೇವರಭೂಪುರದ ಶ್ರೀ ಷ.ಬ್ರ. ಅಭಿನವ ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳು, ಗಬ್ಬೂರಿನ ಮಹಾಸಂಸ್ಥಾನಮಠದ ಶ್ರೀ ಷ.ಬ್ರ. ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಸುಲ್ತಾನಪುರದ ಪಂಚಾಕ್ಷರಿ ಮಹಾಸಂಸ್ಥಾನ ತೀರ್ಥ ಬೃಹನ್ಮಠದ ಶ್ರೀ ಷ.ಬ್ರ. ಶಂಭುಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಗುಂಡಕನಾಳದ ಹಿರೇಮಠದ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಗಳ ಪೂಜ್ಯರು ಭಾಗವಹಿಸಿದ್ದರು.

ಅಲ್ಲದೆ, ಶ್ರೀ ಪರಮಪೂಜ್ಯ ಮುರುಗೆಂದ್ರ ಶಿವಯೋಗಿಗಳು, ಯರಡೋಣಿ ಕ್ರಾಸ್‌ನ ಶ್ರೀ ಸಿದ್ಧರಾಮೇಶ್ವರ ಗುರುಮಠದವರು, ಮಲದಕಲ್‌ನ ಶ್ರೀ ನಿಜಾನಂದ ಯೋಗಾಶ್ರಮದ ಶ್ರೀ ಗುರುಬಸವ ರಾಜಗುರು, ಶ್ರೀ ಅವಧೂತ ರಾಜಯೋಗಿ ಸಂತ ನಾಮದೇವಗೌಡ, ಮುದರಕಲ್‌ನ ಅಂಬಾಮಠದ ಶರಣರು ಹಾಗೂ ಮುಂಡರಗಿಯ ಶ್ರೀ ಶಿವಣ್ಣ ತಾತನವರು ಸೇರಿದಂತೆ ಹಲವು ಧಾರ್ಮಿಕ ಮುಖಂಡರು, ಶಿವಯೋಗಿಗಳು ಉಪಸ್ಥಿತರಿದ್ದರು.

ದೇವದುರ್ಗ, ಅರಕೇರಾ, ಸುರಪುರ ಹಾಗೂ ಹುಣಸಗಿ ಭಾಗಗಳ ರಾಜಕೀಯ ಮುಖಂಡರು, ವಿವಿಧ ಸಂಸ್ಥೆಗಳ ಅಧ್ಯಕ್ಷರು, ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪತ್ರಿಕಾ ಮತ್ತು ಮಾಧ್ಯಮ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

**ವಿವಿಧ ಸೇವೆ ಸಲ್ಲಿಸಿದ ಭಕ್ತರು:**

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಕಸ್ತೂರೆಮ್ಮ ವೆಂಕಟರಾಯ ಬೆನಕನ್ ಕಕ್ಕಲದೊಡ್ಡಿ ಅವರು ಶಿವಾಚಾರ್ಯರಿಗೆ ಭಕ್ತಿಕಾಣಿಕೆ ಸಲ್ಲಿಸಿದರು. ಕೃತಿಕಾ ಸಂಜೀವರಡ್ಡಿ ಸಾಹುಕಾರ ಮಾಡಬಾಳ (ಸಾಯಿ ವೆಂಕಟರಮಣ ಟ್ರೇಡರ್ಸ್, ಜಾಲಹಳ್ಳಿ) ಅವರು ಅನ್ನದಾಸೋಹ ಸೇವೆ ಸಲ್ಲಿಸಿದರು. ಶಂಕ್ರಮ್ಮ ಅಮರಣ್ಣ ಶೆಲ್ಲಿ (ಲಿಂಗದಹಳ್ಳಿ) ಅವರು ಭಕ್ತಿಕಾಣಿಕೆ ಸಮರ್ಪಿಸಿದರು.

ಪ್ರಭಾವತಿ ಗುರುನಾಥ ಸೌದ್ರಿ ಅವರಿಂದ ವೀರಗಾಸೆ ಸೇವೆ ನೆರವೇರಿತು. ಜಾಲಹಳ್ಳಿ–ಹೇಮನಾಳ ವೀರಗಾಸೆ ಕಲಾತಂಡ, ಹರಿಹರ, ಕಲಾ ಸೇವೆ ಸಲ್ಲಿಸಿತು. ಅರ್ಪಿತಾ ಹಣಮಂತರಡ್ಡಿ ಕಕ್ಕಲದೊಡ್ಡಿ (ಶ್ರೀ ಜಿ.ಬಿ. ಮೆಟಲ್ಸ್, ದೇವದುರ್ಗ) ಅವರು ಕುಂಭ ಸೇವೆ ಸಲ್ಲಿಸಿದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವೀರಣ್ಣ ಸಾಹು,ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮಂತಿ ಶಿವಬಸಪ್ಪ ರಾಮ ಪಾಳಿ ಅವರು ಸೇವೆಯಲ್ಲಿ ಭಾಗಿಯಾದರು.

ಶಿವಣ್ಣ ಹೊಸೂರು (ಲಿಂಗದಹಳ್ಳಿ) ಅವರು ಸಾರೋಟು ಮತ್ತು ಕಣಿಹಲಿಗಿ ಸೇವೆ ಸಲ್ಲಿಸಿದರು. ಪಿ. ಮಹಾದೇವಿ ಶ್ರೀನಿವಾಸ ರೆಡ್ಡಿ (ಲಿಂಗದಹಳ್ಳಿ) ಅವರು ವಿಶೇಷ ಸೇವೆ ಹಾಗೂ ನೀಲಮ್ಮ ವಿಶ್ವನಾಥ ಕೋಟೆ (ಲಿಂಗದಹಳ್ಳಿ) ಅವರು ಪೂಜೆಯ ಹೂವಿನ ಸೇವೆ ನೆರವೇರಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಆಕಾಶವಾಣಿ ಕಲಾವಿದ ಅಮರಯ್ಯ ಸ್ವಾಮಿ ಜಾಲಿಬೆಂಚಿ ಹಾಗೂ ಸುಲೋಚನಾ ಎಸ್. (ಮುಖ್ಯ ಕಾರ್ಯನಿರ್ವಾಹಕರು, ದೇವದುರ್ಗ) ನಿರ್ವಹಿಸಿದರು.

ಜಾಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತಾದಿಗಳು ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡು ಕಾಶಿ ಜಗದ್ಗುರುಗಳ ಆಶೀರ್ವಾದ ಪಡೆದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App