🔥 TRENDING মানবাজারে একাধিক খাবারের দোকানে সারপ্র... CM Mann Shares Emotional Stories at Ja... Sound System Crew Killed in Ludhiana G... Ludhiana Property Tax Inspector Arrest... बाल विकास समाज सेवा के अध्यक्ष रमेश सि... लखनऊ से एमएलसी चुनाव जीतने वाली सपा की...
28 Oct 2026•
ગુજરાતી मराठी ਪੰਜਾਬੀ বাংলা

ಗಣರಾಜ್ಯೋತ್ಸವ ಪೂರ್ವಭಾವಿ ತರಬೇತಿ ಶಿಬಿರಕ್ಕೆ ನಯನ ಬಿ. ಎಚ್. ಆಯ್ಕೆ

✍️ Reporter: Viswanatha D R 🗓 28 Oct 2026, 09:29 PM 👁 41
Share: 💬 WhatsApp 📘 Facebook 𝕏 Post
ಹರಿಹರ: ನಗರದ ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಿದ್ಯಾರ್ಥಿನಿ ನಯನ ಬಿ. ಎಚ್. ಅವರು ತಮಿಳುನಾಡಿನ ಸೇಲಂನಲ್ಲಿ ನಡೆಯುವ ದಕ್ಷಿಣ ವಲಯ ಮಟ್ಟದ ಗಣರಾಜ್ಯೋತ್ಸವ ಪೂರ್ವಭಾವಿ ಪಥಸಂಚಲನ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ನಯನ ಅವರ ಆಯ್ಕೆಗೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಡಾ. ಪವಿತ್ರ ಎಸ್. ಟಿ. ಹಾಗೂ ಡಾ. ಬಾಹುಬಲಿ ವನಕುದರಿ, ಪ್ರಾಂಶುಪಾಲರು, ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ನಿರ್ದೇಶಕರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ.
📲Get App