🔥 TRENDING YouTube Becomes Launchpad for New Indi... Haryana Activist Arrested for Threaten... Kashmiri Pandit Activist Arrested for... Haryana Launches e-Upchar Digital Heal... Assam Minister Responds to Bangladeshi... Rana Gurjit Singh Rejects Rumors of Le...
27 Oct 2026•
ગુજરાતી मराठी ਪੰਜਾਬੀ বাংলা

ಮದರಕಲ್ ಅಂಬಾಮಠದಲ್ಲಿ ಹುಣ್ಣಿಮೆ ವಿಶೇಷ ಅನುಭವ ಕಾರ್ಯಕ್ರಮ

✍️ Reporter: Khaja Hussain 🗓 27 Oct 2026, 12:36 PM 👁 17
Share: 💬 WhatsApp 📘 Facebook 𝕏 Post
**ದೇವದುರ್ಗ–ಅರಕೇರಾ | ವಿಶೇಷ ವರದಿ**

# ಮದರಕಲ್ ಅಂಬಾಮಠದಲ್ಲಿ ಹುಣ್ಣಿಮೆ ವಿಶೇಷ ಅನುಭವ ಕಾರ್ಯಕ್ರಮ

### ಅಹಂಕಾರ, ದ್ವೇಷ ತೊರೆದು ಮಾನವೀಯತೆಯತ್ತ ಸಾಗೋಣ: ಶ್ರೀ ಗುರುಬಸವ ರಾಜಗುರುಗಳು ಮಲದಕಲ್

**ಅರಕೇರಾ, ಅ. 26:** ರಾಯಚೂರು ಜಿಲ್ಲೆಯ ಅರಕೇರಾ ತಾಲೂಕಿನ ಮದರಕಲ್ ಗ್ರಾಮದ ಅಂಬಾಮಠದಲ್ಲಿ ಸೋಮವಾರ ಹುಣ್ಣಿಮೆ ಅಂಗವಾಗಿ ವಿಶೇಷ ಅನುಭವ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಪ್ರವಚನ ನೀಡಿದ ಮಲದಕಲ್‌ನ ಶ್ರೀ ಗುರುಬಸವ ರಾಜಗುರುಗಳು, “ಸತ್ಸಂಗ ಎಂದರೆ ಕೇವಲ ಒಟ್ಟಿಗೆ ಕುಳಿತುಕೊಳ್ಳುವುದಲ್ಲ; ಸತ್ಯದ ಸಂಗ ಮಾಡುವುದು. ಸತ್ಯದ ಅರಿವು ಮೂಡಿದಾಗ ಮಾತ್ರ ಅನುಭವಕ್ಕೆ ಪರಮಾರ್ಥದ ಅರ್ಥ ತಿಳಿಯುತ್ತದೆ” ಎಂದು ಹೇಳಿದರು.

ತಪಸ್ಸು, ಅನುಷ್ಠಾನ ಮತ್ತು ಸಿದ್ಧಿ ಪ್ರಾಪ್ತಿಯೇ ಜೀವನದ ಮೂಲ ಉದ್ದೇಶವಲ್ಲ. ಸ್ವಚ್ಛ ಮನಸ್ಸಿನಿಂದ ಸರ್ವ ಜೀವಿಗಳಲ್ಲಿಯೂ ಸಮಾನತೆಯನ್ನು ಕಾಣುವುದು ಹಾಗೂ ಪ್ರತಿಯೊಬ್ಬರನ್ನೂ ಮಾನವೀಯ ದೃಷ್ಟಿಯಿಂದ ನೋಡುವುದೇ ನಿಜವಾದ ಯೋಗವಾಗಿದೆ. ಮನುಷ್ಯರ ನಡುವೆ ಭೇದಭಾವ ತೋರದೆ ಪ್ರೀತಿ, ಸಹೋದರತ್ವ ಮತ್ತು ಸಮಾನತೆಯಿಂದ ಬದುಕಿದಾಗ ಮಾತ್ರ ಆಧ್ಯಾತ್ಮಿಕ ಪ್ರಗತಿ ಸಾಧ್ಯ ಎಂದು ತಿಳಿಸಿದರು.

ಅಹಂಕಾರ, ದ್ವೇಷ, ಅಸೂಯೆ ಹಾಗೂ ಭೇದಭಾವಗಳನ್ನು ತೊರೆದು ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಯಿಂದ ಜೀವನ ನಡೆಸಬೇಕು. ಸಮಾಜದಲ್ಲಿ ಶಾಂತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸತ್ಸಂಗಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಶ್ರೀ ಗುರುಬಸವ ರಾಜಗುರುಗಳು ಹೇಳಿದರು.

### ವಿಶೇಷ **
**ಸನ್ಮಾರ್ಗದಲ್ಲಿ ನಡೆಯಬೇಕು: ನಾಮದೇವಗೌಡ ಶರಣರು**

ಅಂಬಾಮಠದ ಪೀಠಾಧಿಪತಿ ಅವಧೂತ ರಾಜಯೋಗಿ ಸಂತ ನಾಮದೇವಗೌಡ ಶರಣರು ಮಾತನಾಡಿ, ಸ್ವಾಮೀಜಿಗಳ ನುಡಿಮುತ್ತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆಯಬೇಕು. ಇಂತಹ ಸತ್ಸಂಗ ಕಾರ್ಯಕ್ರಮಗಳು ಭಕ್ತರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವುದರ ಜತೆಗೆ ಉತ್ತಮ ಜೀವನಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

### ಗಣ್ಯರ ಉಪಸ್ಥಿತಿ

ಕಾರ್ಯಕ್ರಮದ ವೇದಿಕೆಯಲ್ಲಿ ಅಂಬಾಮಠದ ಪೀಠಾಧಿಪತಿ ಸಂತ ನಾಮದೇವಗೌಡ ಶರಣರು, ಮಲದಕಲ್‌ನ ಶ್ರೀ ಗುರುಬಸವ ರಾಜಗುರುಗಳು, ನವಿಲುಗುಡ್ಡದ ನಿವೃತ್ತ ತಹಶೀಲ್ದಾರ್ ವೆಂಕನಗೌಡ, ದೇವದುರ್ಗದ ಹಿರಿಯ ನ್ಯಾಯವಾದಿ ವಿ.ಎಂ. ಮೇಟಿ, ಕರಡಿಗುಡ್ಡದ ಮಾಜಿ ಎಪಿಎಂಸಿ ಅಧ್ಯಕ್ಷ ರಾಮನಗೌಡ, ಶಿವಪ್ಪ ಪಲಕನಮರಡಿ, ಜಾಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೋವಿಂದಪ್ಪ ಅಲಗೇರಿ, ಶಂಕರಗೌಡ ಮಾಲಿಪಾಟೀಲ್, ಊಟಿಯ ಮಾಜಿ ಅಧ್ಯಕ್ಷ ಅಮರೇಶ್, ಬಸಣ್ಣ ರಾಮಲು ಗಲಗ್ ಗುತ್ತೇದಾರ, ಮ್ಯಾಕಲದೊಡ್ಡಿಯ ಚನ್ನಬಸವ ನಾಯಕ, ದಲಿತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ವಿಜಯರಾಣಿ, ಚನ್ನಬಸವ ತಾತ ಗಲಗ್, ಸಾಬಣ್ಣ ಹೂಗಾರ್,ಶಿವು ಪಾಟೀಲ್ ತಾಲೂಕ ಗ್ಯಾಂರಂಟಿ ಅನುಷ್ಠಾನ ಸಮಿತಿ ಸದಸ್ಯರು, ಅಂಬಣ್ಣ ಮೂಡಲಗುಂಡ, ಸಾಬಣ್ಣ ಮುಡಲಗುಂಡ್, ಮಾನಪ್ಪ ನಾಯಕ್ ಕ್ಯಾದಿಗ್ಗೆರ, ಬಸವರಾಜ ಕರಿಹೋನಿ, ಮದರಕಲ್‌ನ ಹನುಮಂತ ಬಡಿಗೇರ್, ಹನುಮಂತ ಅನ್ವರಿ, ದೇವನಗೌಡ, ಸಿದ್ದಪ್ಪಗೌಡ, ಗ್ರಾಮ ಪಂಚಾಯಿತಿ ಸದಸ್ಯ ಮಾನಯ್ಯ, ಅಲ್ಲಿಸಾಬ್, ಸಿದ್ದಣ್ಣ, ರಂಗಪ್ಪ, ಹೊಸೂರು ಮಹದೇವಪ್ಪ ಶರಣರು, ಬಸವರಾಜ ಹೊಸೂರು, ರಂಗಣ್ಣ ಹರಿಜನ್, ಶಿವಣ್ಣ ಉಪ್ಪಾರ್, ಮುದುಕಪ್ಪ ಕಬ್ಬರ್, ಗಂಗಣ್ಣ ಕಬ್ಬರ್, ನಿಂಗಣ್ಣ ಕುರುಬರ್ ಹಾಗೂ ಕರಿಯಪ್ಪ ಸೋಮನ ಮರಡಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರು,ಶರಣ ಬಸವ ಮ್ಯಾಕಲದೊಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಿರಿಯರಾದ ವೀರಯ್ಯಸ್ವಾಮಿ ಸೇರಿದಂತೆ ಮಠದ ಸದ್ಭಕ್ತರು, ಗ್ರಾಮದ ಹಿರಿಯರು ಹಾಗೂ ಮಹಿಳಾ ಭಕ್ತ ಮಂಡಳಿಯ ಸದಸ್ಯರಾದ ಸಾವಿತ್ರಿ ಅನ್ವರಿ ಮತ್ತು ರೇಣುಕಾ ಕಲ್ಮಾಗೇರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App