🔥 ट्रेंडिंग भवठडी में बीडिसी चुनाव प्रचार, वार्ड ल... mathura भाजपा ने तीसरी बार जताया भरोसा... અમદાવાદ ના જયભોલે ગ્રુપ દ્વારા જમ્મુ ક... महादलित टोलों में शत-प्रतिशत शौचालय नि... ਫੌਜ ਨੂੰ ਹਮੇਸ਼ਾ ਅੱਗੇ ਰਹਿਣ ਲਈ ਨਵੀਆਂ ਸਮਰੱ... પલસાણા તાલુકાના એના ગામમાં છઠ્ઠો શરદ ર...
26 अक्टू. 2026•
ગુજરાતી मराठी ਪੰਜਾਬੀ বাংলা

ಲಿಂಗದಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

✍️ रिपोर्टर: Khaja Hussain 🗓 26 अक्टू. 2026, 08:48 PM 👁 18
शेयर करें: 💬 WhatsApp 📘 Facebook 𝕏 Post
**ಜಾಲಹಳ್ಳಿ | ಬ್ರೇಕಿಂಗ್ ನ್ಯೂಸ್**

ಲಿಂಗದಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

**ಜಾಲಹಳ್ಳಿ, ಅ. 23:** ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮೀಪದ ಲಿಂಗದಹಳ್ಳಿ ಗ್ರಾಮದಲ್ಲಿ ಸಮಾಜದ ಮುಖಂಡರು ಹಾಗೂ ವಿವಿಧ ಸಮಾಜಗಳ ಗಣ್ಯರು ಒಗ್ಗೂಡಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು, ಜೀವನ ಮೌಲ್ಯಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು. ವಿವಿಧ ಸಮಾಜಗಳ ಮುಖಂಡರು ಒಗ್ಗೂಡಿ ಜಯಂತಿ ಆಚರಿಸುವ ಮೂಲಕ ಸಾಮಾಜಿಕ ಸೌಹಾರ್ದತೆ ಹಾಗೂ ಪರಸ್ಪರ ಸಹಕಾರದ ಸಂದೇಶ ಸಾರಿದರು.

ಕಾರ್ಯಕ್ರಮದಲ್ಲಿ ಮಾಂತಯ್ಯ ಸ್ವಾಮಿ, ಆನಂದ್ ಸ್ವಾಮಿ, ಶರಣಪ್ಪ ಬಿರಾದಾರ್, ರಾಮನಗೌಡ, ನಂದಪ್ಪ ಪಿ. ಮಡ್ಡಿ, ಭೀಮಣ್ಣ ನಾಯಕ, ನಾಗಲಿಂಗ, ವೆಂಕಪ್ಪ ತುಪ್ಪ, ತಿರುಪತಿ, ಮಾನಪ್ಪ ಬಬುಲಾದಿ, ಬುಡ್ಡಯ್ಯ, ಭೀಮನಗೌಡ, ನಿಂಗಪ್ಪ, ಸಿದ್ದು, ಅಂಬರೀಶ್ ಬಿರಾದಾರ್, ನಂದಪ್ಪ, ಮಾನಪ್ಪ, ವೆಂಕವ್ವ ಮೇಟಿ, ಸರ್ಜನ್, ತಿಮ್ಮಯ್ಯ, ಮಾಜಿ ಸದಸ್ಯ ನಾಗಪ್ಪ ಹಾಗೂ ಹಣಮಂತ ಸೇರಿದಂತೆ ಸಮಾಜದ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App