🔥 ट्रेंडिंग BETA NA MAA KO JALAYA झारखंड के पूर्व नेता और पाकुड़ के विधा... माता रानी को उत्साहपूर्वक विदाई, ढोल‑ड... ನವರಾತ್ರಿ ಉತ್ಸವ ಪಲ್ಲಕ್ಕಿ ಮಹೋತ್ಸವ. भागलपुर में फर्जी शिक्षिका के नाम पर 9... बांका के मुरहरा स्टेशन के पास हाई वोल्...
23 अक्टू. 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಈಶಾನ್ಯ ಶಿಕ್ಷಕರ ವಿಧಾನಪರಿಷತ್ ಚುನಾವಣೆಯ ಮತದಾನ ಸುಗಮ

✍️ रिपोर्टर: Khaja Hussain 🗓 23 अक्टू. 2026, 12:38 PM 👁 25
शेयर करें: 💬 WhatsApp 📘 Facebook 𝕏 Post
**ಜಾಲಹಳ್ಳಿ | ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿಯಲ್ಲಿ ಈಶಾನ್ಯ ಶಿಕ್ಷಕರ ವಿಧಾನಪರಿಷತ್ ಚುನಾವಣೆಯ ಮತದಾನ ಸುಗಮ

### ಮತಗಟ್ಟೆಯ ಹೊರಗಡೆ ಬಿಜೆಪಿ ಕಾರ್ಯಕರ್ತರಿಂದ ಶಾಮಿಯಾನ, ಕುಡಿಯುವ ನೀರಿನ ವ್ಯವಸ್ಥೆ

**ಜಾಲಹಳ್ಳಿ, ಅ. 23:** ಕರ್ನಾಟಕ ಈಶಾನ್ಯ ಶಿಕ್ಷಕರ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಿತು.

ಬೆಳಗ್ಗೆಯಿಂದಲೇ ಶಿಕ್ಷಕ ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದ್ದು, ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.

**ಮತದಾರರಿಗೆ ಬಿಜೆಪಿ ಕಾರ್ಯಕರ್ತರಿಂದ ಸೌಲಭ್ಯ**

ಮತಗಟ್ಟೆಯ ಹೊರಗಡೆ ಮತದಾನಕ್ಕೆ ಆಗಮಿಸುವ ಶಿಕ್ಷಕ ಮತದಾರರ ಅನುಕೂಲಕ್ಕಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರು ಶಾಮಿಯಾನ ಹಾಕಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಬಿಸಿಲಿನ ಹಿನ್ನೆಲೆಯಲ್ಲಿ ಮತದಾರರಿಗೆ ನೆರವಾಗುವ ಉದ್ದೇಶದಿಂದ ಈ ವ್ಯವಸ್ಥೆ ಕಲ್ಪಿಸಲಾಗಿತ್ತು.

**ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗಿ**

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡರು,ಜಾಲಹಳ್ಳಿ ಬಿಜೆಪಿ ಮುಖಂಡರು ಅಮರೇಶ್ ಪಾಟೀಲ್, ಶಿವರಾಜ ಪಾಣಿ, ಶಂಕರಗೌಡ ಪಾಟೀಲ್, ಚಂದಪ್ಪ ಹೊಸೂರ್, ವಿನೋದ್ ಕುಮಾರ್ ಚಿಕ್ಕಲ್, ವೀರೇಶ್ ಅರಕೆರ, ಈಶಣ್ಣ್ ಕಾಟ್ಮಳ್ಳಿ,ರಮೇಶ್ ಅನ್ವರಿ,ಅಮರೇಗೌಡ ಪಾಟೀಲ್ ವೆಂಕೋಬ ತೋಟದ್, ಅಬ್ದುಲ್ ರೆಹಮಾನ್ ಸಾಬ್ ಸಲ ಬಣ್ಣ ಹಂಪರಗುಂದಿ ಗಂಗಪ್ಪ ತಗ್ಗಳ್ಳಿ ಭೀಮಪ್ಪ ಆಂಜಳ ದುರ್ಗಪ್ಪ ಪೂಜಾರಿ ಚಂದಪ್ಪ ಬಾವಿಮನಿ ಹುಲಗಪ್ಪ ಜಾಲಹಳ್ಳಿ ಭೀಮರಾಯ ಮಕಾಶಿ ಬಸವರಾಜ್ ಗೋಪಾಳಪುರ ಸ್ಥಳೀಯ ಮುಖಂಡರು ಹಾಗೂ ಯುವ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಮತದಾನಕ್ಕೆ ಆಗಮಿಸಿದ ಶಿಕ್ಷಕ ಮತದಾರರಿಗೆ ಅನುಕೂಲ ಕಲ್ಪಿಸುವ ಕಾರ್ಯದಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App