🔥 TRENDING પુરુષોત્તમનગરમાં યુવકોના સર્જિત 'ગબ્બર... સુરતમાં ડુમસના અવધ યુટોપિયામાં નવરાત્ર... वाराणसी के अर्दली बाजार में मोबाइल थीम... विजय दशमी से पहले समस्तीपुर में STF और... સુરત મનપા દ્વારા સીલ કરાયેલ કોટેજ ઇન્ડ... अमेठी में मंदिर की मर्यादा पर उठे तीखे...
19 Oct 2026•
ગુજરાતી मराठी ਪੰਜਾਬੀ বাংলা
Agriculture

ಕೇಂದ್ರ ಸರ್ಕಾರಕ್ಕೆ ಜಾನಸನ್ ಘೋಡೆ ಒತ್ತಾಯ

✍️ Reporter: Basavaraj pujari 🗓 19 Oct 2026, 03:54 PM 👁 24
Share: 💬 WhatsApp 📘 Facebook 𝕏 Post

ಟನ್ ಕಬ್ಬಿಗೆ ರೂ. 5,500 ಎಫ್.ಆರ್.ಪಿ. ನಿಗದಿಗೆ ಆಗ್ರಹ ಬೀದರ್: ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ ರೂ. 5,500 ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (ಎಫ್.ಆರ್.ಪಿ.) ಮತ್ತು ಪ್ರತಿ ಕೆ.ಜಿ. ಸಕ್ಕರೆಗೆ ರೂ. 60 ಎಂ.ಎಸ್.

ಕೇಂದ್ರ ಸರ್ಕಾರಕ್ಕೆ ಜಾನಸನ್ ಘೋಡೆ ಒತ್ತಾಯ

ಟನ್ ಕಬ್ಬಿಗೆ ರೂ. 5,500 ಎಫ್.ಆರ್.ಪಿ. ನಿಗದಿಗೆ ಆಗ್ರಹ

ಬೀದರ್: ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ ರೂ. 5,500 ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (ಎಫ್.ಆರ್.ಪಿ.) ಮತ್ತು ಪ್ರತಿ ಕೆ.ಜಿ. ಸಕ್ಕರೆಗೆ ರೂ. 60 ಎಂ.ಎಸ್.ಪಿ. ನಿಗದಿಪಡಿಸಬೇಕು ಎಂದು ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಜಂಟಿ ಸಂಯೋಜಕ ಜಾನಸನ್ ಘೋಡೆ ಆಗ್ರಹಿಸಿದ್ದಾರೆ.
ಕಬ್ಬು ಬೆಳೆದ ರೈತರಿಗೆ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಹೀಗಾಗಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ನ್ಯಾಯೋಚಿತವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸಕ್ಕರೆ ಆಯುಕ್ತಾಲಯ ಪ್ರತಿ ಟನ್ ಕಬ್ಬಿಗೆ ರೂ. 5,410 ಎಫ್.ಆರ್.ಪಿ. ನೀಡುವಂತೆ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಆದರೆ, ಕೇಂದ್ರ ಸರ್ಕಾರ ಈ ದಿಸೆಯಲ್ಲಿ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ರಾಜ್ಯದಲ್ಲಿ ಉತ್ಪಾದನೆ ಆಗುವ ಸಂಪೂರ್ಣ ಎಥೆನಾಲ್ ಖರೀದಿಸಬೇಕು. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು ಎನ್ನುವುದು ಸೇರಿದಂತೆ ರೈತರ ಪ್ರಮುಖ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
📲Get App