🔥 TRENDING Father Carries Dead 9‑Year‑Old on Shou... ढाका थाना प्रभारी ने डमर दुर्गा पूजा म... ਪਰਵਿੰਦਰ ਝੋਟਾ ਕਤਲ ਮਾਮਲੇ ਮਗਰੋਂ ਪ੍ਰਸ਼ਾਸਨ ਦ... महाअष्टमी पर शेखपुरा के दुर्गा मंदिर म... फारबिसगंज में मां दुर्गा के पंडाल में... रजनी चौक, भट्ठा बाजार में Great Britai...
18 Oct 2026•
ગુજરાતી मराठी ਪੰਜਾਬੀ বাংলা

ಸಿಂಧನೂರು ತಾಲ್ಲೂಕಿನಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಗೆ ನೂತನ ಸಾರಥಿ: ಅಧ್ಯಕ್ಷರಾಗಿ ಆಯುಷ್ಮಾನ್ ನಿರುಪದಿ ನೇಮಕ!

✍️ Reporter: MAHAMAD WALI QURESHI 🗓 18 Oct 2026, 07:26 PM 👁 19
Share: 💬 WhatsApp 📘 Facebook 𝕏 Post
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಿಂಧನೂರು ತಾಲ್ಲೂಕು ಅಧ್ಯಕ್ಷರಾಗಿ ಆಯುಷ್ಮಾನ್ ನಿರುಪದಿ ನೇಮಕ!
ನೀಡ್ 24 ನ್ಯೂಸ್ ರಾಯಚೂರು ಸಿಂದಧನೂರು: ಅ18
ಅಂಬೇಡ್ಕರ್ ಸ್ವಾಭಿಮಾನಿ ಸೇನೆ (ಜಿಲ್ಲಾ ಸಮಿತಿ, ರಾಯಚೂರು) ವತಿಯಿಂದ ಸಿಂಧನೂರು ತಾಲ್ಲೂಕು ಅಧ್ಯಕ್ಷರಾಗಿ ಆಯುಷ್ಮಾನ್ ನಿರುಪದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ದಿನಾಂಕ 18-10-2026 ರಂದು ಸಂಘಟನೆಯ ಜಿಲ್ಲಾಧ್ಯಕ್ಷರಾದ ಮಲ್ಲಪ್ಪ ಗೌಡೂರು ಅವರು ಈ ಆದೇಶ ಪತ್ರವನ್ನು ನೀಡಿದ್ದಾರೆ. ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಬುದ್ಧನ ಮಾರ್ಗದಲ್ಲಿ ನಡೆಯಲು ಮತ್ತು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಸಂಘಟನೆಯು ಸಮಾಜಮುಖಿ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಹೋರಾಟಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಸಂಘಟನೆಯನ್ನು ಮುನ್ನಡೆಸಲು ಆಯುಷ್ಮಾನ್ ನಿರುಪದಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಸಂಘಟನೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಕೋದಂಡರಾಮ.ಆರ್ (MBA) ಹಾಗೂ ಜಿಲ್ಲಾಧ್ಯಕ್ಷರಾದ ಮಲ್ಲಪ್ಪ ಗೌಡೂರು ಮತ್ತು ಸಂಘಟನೆಯ ಇ A ಪ್ರಮುಖರು ನೂತನ ತಾಲ್ಲೂಕು ಅಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಸಂಘಟನೆಯ ಮೂಲ ಉದ್ದೇಶ ಹಾಗೂ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಹಾರೈಸಿದ್ದಾರೆ.
📲Get App