🔥 TRENDING सुप्रीम कोर्ट की केंद्र सरकार को चेताव... फलोदी: 36 घंटे की अथक मशक्कत के बाद बो... વાંકોલ પ્રાથમિક શાળામાં નવરાત્રી મહોત્... हनुमानगढ़ की पूनम गिद्वानी ने राष्ट्री... ધાંગધ્રા શિશુ કુંજના ખેલાડીઓનો રાજ્ય ક... India's IITs Complete Successful Initi...
17 Oct 2026•
ગુજરાતી मराठी ਪੰਜਾਬੀ বাংলা
Agriculture

ಕೃಷ್ಣಾ ಮೇಲ್ದಂಡೆ ಯೋಜನೆ: ಹಿಂಗಾರು ಹಂಗಾಮಿನ ನೀರಾವರಿ ಹಾಗೂ ಕುಡಿಯುವ ನೀರಿನ ಅಗತ್ಯತೆಗಳ ಕುರಿತು ಮಹತ್ವದ ಸಭೆ

✍️ Reporter: Pranav Gaur 🗓 17 Oct 2026, 10:12 AM 👁 11
Share: 💬 WhatsApp 📘 Facebook 𝕏 Post

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿಜಯಾನಂದ ಕಾಶಪ್ಪನವರ್ ಅವರ ಅಧ್ಯಕ್ಷತೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಆಲಮಟ್ಟಿ, ನಾರಾಯಣಪುರ ಜಲಾಶಯಗಳ ನೀರಿನ ಲಭ್ಯತೆ, ಕಾಲುವೆಗಳ ದುರಸ್ತಿ ಮತ್ತು ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಬೆಂಗಳೂರು: ಇಂದು ವಿಕಾಸಸೌಧದಲ್ಲಿ ಮಾನ್ಯ ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ವಿಜಯಾನಂದ ಕಾಶಪ್ಪನವರ್ ಅವರ ಅಧ್ಯಕ್ಷತೆಯಲ್ಲಿ 2026–27ನೇ ಸಾಲಿನ ಕೃಷ್ಣ ಭಾಗ್ಯ ಜಲ ನಿಗಮದ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.

ಸಭೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿನ ನೀರಿನ ಲಭ್ಯತೆ, ಹಿಂಗಾರು ಹಂಗಾಮಿನ ನೀರಾವರಿ ಯೋಜನೆ ಹಾಗೂ ಮುಂಬರುವ ಬೇಸಿಗೆಯಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಅಗತ್ಯತೆಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ವಿಶೇಷವಾಗಿ, ಜೇವರ್ಗಿ ವಿಧಾನಸಭಾ ಕ್ಷೇತ್ರದ ನೀರಿನ ಅಗತ್ಯತೆಗಳು, ಸುಮಾರು 25–30 ವರ್ಷಗಳಷ್ಟು ಹಳೆಯದಾದ ಕಾಲುವೆಗಳಲ್ಲಿನ ನೀರಿನ ಸೋರಿಕೆ ಸಮಸ್ಯೆ ಹಾಗೂ ಮುಖ್ಯ ಮತ್ತು ಉಪಕಾಲುವೆಗಳ ದುರಸ್ತಿ ಮತ್ತು ಆಧುನೀಕರಣದ ಅಗತ್ಯತೆಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ರಾಯಚೂರು ಜಿಲ್ಲೆಯ ನೀರಿನ ಬೇಡಿಕೆಗಳ ಬಗ್ಗೆಯೂ ಗಮನ ಸೆಳೆಯಲಾಯಿತು. ಮುಂಬರುವ ಬೇಸಿಗೆಯಲ್ಲಿ ಜನರು ಮತ್ತು ರೈತರು ನೀರಿನ ಸಮಸ್ಯೆ ಎದುರಿಸದಂತೆ ಸಮರ್ಪಕ ಜಲ ನಿರ್ವಹಣೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಮಹತ್ವವನ್ನು ಒತ್ತಿಹೇಳಲಾಯಿತು. ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಲಭ್ಯತೆಯನ್ನು ಖಚಿತಪಡಿಸುವುದರ ಜೊತೆಗೆ, ಜನರು ಮತ್ತು ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆಗಳಿಗೆ ಆದ್ಯತೆ ನೀಡುವುದು ಅತ್ಯಗತ್ಯ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಲಭ್ಯವಿರುವ ಜಲಸಂಪನ್ಮೂಲಗಳ ಸಮರ್ಪಕ ಬಳಕೆ, ಕಾಲುವೆಗಳ ದಕ್ಷತೆ ಸುಧಾರಣೆ ಹಾಗೂ ನೀರಿನ ಸೋರಿಕೆ ತಡೆಗಟ್ಟುವ ಮೂಲಕ ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸಮನ್ವಯದ ಕ್ರಮಗಳ ಅಗತ್ಯವನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಸಚಿವರಾದ ಶ್ರೀ ಎಂ. ಬಿ. ಪಾಟೀಲ್, ಶರಣಾಪ್ರಕಾಶ್ ಪಾಟೀಲ್, ಮಾಜಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಪುರ, ಸಂಸದರಾದ ಶ್ರೀ ಕುಮಾರ್ ನಾಯ್ಕ್, ಶಾಸಕರಾದ ಉಮೇಶ್ ಮೇಟಿ, ಜೆ.ಟಿ.ಪಾಟೀಲ್, ಜಗದೀಶ್ ಗುಡಗುಂಟಿ, ಜನಪ್ರತಿನಿಧಿಗಳು ಹಾಗೂ ನಿಗಮದ ಅಧಿಕಾರಿಗಳು ಭಾಗವಹಿಸಿದ್ದರು.
📲Get App