🔥 TRENDING Jamia Millia Islamia hosts AISA solida... Bharatanatyam performance moves audien... Delhi's Art Pieces Reveal Their Untold... સેવા જ્યોતિ અભિયાનમાં વડાપ્રધાનનું વર્... जिंतूरच्या हळदीच्या शेतात १६ किलो गांज... આજરોજ રાજુલા ટી જે બી એસ ગર્લ્સ સ્કૂલ...
07 Oct 2026•
ગુજરાતી मराठी ਪੰਜਾਬੀ বাংলা

ವಿಬಿ ಜಿ ರಾಮಜೀ ಯೋಜನೆಯಡಿ ಕೆರೆ ಹೊಳೆತ್ತುವ ಕೆಲಸದತ್ತ ಮುಖಮಾಡಿದ ಕಾರ್ಮಿಕರು

✍️ Reporter: KALLAPPA MIRJI 🗓 07 Oct 2026, 10:18 PM 👁 13
Share: 💬 WhatsApp 📘 Facebook 𝕏 Post

ಕಲಘಟಗಿ ತಾಲ್ಲೂಕಿನ ಉಗ್ಗಿನಕೇರಿ ಗ್ರಾಮದ ಕೆರೆಕಟ್ಟೆ ಕೇರಿ ವಿಬಿ ಜಿ ರಾಮಜೀ ಯೋಜನಯಡಿ ಕೂಲಿ ಕಾರ್ಮಿಕರು ಕೇರಿ ಪುನಶ್ಚೇತನಗೊಳಿಸುತ್ತಿರುವ ಕಾರ್ಯದಲ್ಲಿ ತೊಡಗಿರುವದು.

ಕಲಘಟಗಿ: ಮಳೆ ಕೊರತೆ ಹಾಗೂ ರೈತರ ಕೃಷಿ ಚಟುವಟಿಕೆಗಳ ಕುಂಟಿತದಿಂದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ವಿಬಿ ಜೀ ರಾಮಜೀ (ವಿಕಸಿತ್ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಮತ್ತು ಅಜೀವಿಕಾ ಮಿಷನ್) ಯೋಜನೆಯಡಿ ಕೆರೆ ಹಾಗೂ ಕಾಲುವೆ ಹೊಳೆತ್ತುವ ಕೆಲಸದತ್ತ ಹೆಚ್ಚಿನ ಕಾರ್ಮಿಕರು ಮುಖಮಾಡಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಕಲಘಟಗಿ ತಾಲ್ಲೂಕ ಕೂಡಾ ಮಧ್ಯಮ ಪಟ್ಟಿಯಲ್ಲಿ ಬರಗಾಲ ಅಂತಾ ಸೇರ್ಪಡೆ ಮಾಡಿ ಆದೇಶ ಹೊರಡಿಸಿದೆ.
ತಾಲ್ಲೂಕಿನ 28 ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಜಾಬ್ ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಜುಲೈ 1 ರಿಂದ ಜಾರಿಗೆ ಬಂದ ನೂತನ ವಿಬಿ ಜಿ ರಾಮಜೀ ಯೋಜನೆಯ ಕರಪತ್ರ ಹಂಚುವ ಮೂಲಕ ತಾಲ್ಲೂಕ ಪಂಚಾಯತಿಯಿಂದ ಜಾಗೃತಿ ಮೂಡಿಸಿ ಬೇರೆ ಊರುಗಳಿಗೆ ಕಾರ್ಮಿಕರು ವಲಸೆ ಹೋಗಬಾರದು ಎಂಬುದು ಯೋಜನೆ ಉದ್ದೇಶವಾಗಿದೆ.
ನೋಂದಣಿ ಜಾಬ್ ಕಾರ್ಡ್: ತಾಲ್ಲೂಕಿನಲ್ಲಿ 28,721, ಜಾಬ್ ಕಾರ್ಡ್ ಗಳಿದ್ದು ಇದರಲ್ಲಿ 17,758 ಕಾರ್ಡ್ ಚಾಲ್ತಿಯಲ್ಲಿವೆ 34,625 ಕೆಲಸದಲ್ಲಿ ಕಾರ್ಮಿಕರು ನಿರತರಾಗಿದ್ದಾರೆ.
ತಾಲ್ಲೂಕಿಗೆ ಸರ್ಕಾದಿಂದ 6,62,929 ಮಾನವ ದಿನಗಳ ಗುರಿ ನೀಡಿದ್ದು ಜುಲೈ 1 ರಿಂದ 85,650 ಮಾನವ ದಿನಗಳ ಸೃಜನೆಯಾಗಿವೆ ಎಂದು ತಾಲ್ಲೂಕ ಪಂಚಾಯತಿಯಿಂದ ಮಾಹಿತಿ ಒದಗಿಸಿದರು.
28 ಗ್ರಾಮ ಪಂಚಾಯತಿಯಲ್ಲಿ ಕೆಲಸ ಆರಂಭ: ತಾಲ್ಲೂಕಿನಲ್ಲಿ 28 ಗ್ರಾಮ ಪಂಚಾಯತಿಗಳು ಇದ್ದು ವಿಬಿ ಜಿ ರಾಮಜೀ ಯೋಜನೆಯಡಿ ಕೂಲಿಕಾರ್ಮಿಕರು ಕೆರೆ ಹೊಳೆತ್ತುವದು, ಕಾಲುವೆ ನಿರ್ಮಾಣ, ಅರಣ್ಯ ಪ್ರದೇಶದಲ್ಲಿ ಕಂದಕ ನಿರ್ಮಾಣ ಮತ್ತು ಸಸಿ ನೆಡುವದು ಹಾಗೂ ವಯಕ್ತಿಕ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹೆಚ್ಚು ಮಾನವ ದಿನಗಳ ಸೃಜನೆಯಾದ ಗ್ರಾ.ಪಂ ವಿವರ: ಬೀರವಳ್ಳಿ 11099, ಸುಳಿಕಟ್ಟಿ 11103, ಮುಕ್ಕಲ 8853,ತಾವರಗೇರಿ 8026, ತಬಕದಹೊನ್ನಳಿ 6190, ಬೇಗೂರ 4233, ಸಂಗಮೇಶ್ವರ 3841, ದೇವಿಕೊಪ್ಪ 3518, ಗುಡ್ಡದಹುಲಿಕಟ್ಟಿ 3305, ಜಿನ್ನೂರ 3268, ಉಗ್ಗಿನಕೇರಿ 3089, ತಂಬೂರ 2842, ಬಮ್ಮಿಗಟ್ಟಿ 2759,ಗಳಗಿಹುಲಕೊಪ್ಪ 2402, ದಾಸ್ತಿಕೊಪ್ಪ 1545, ಹಿರೇಹೊನ್ನಳಿ 1534, ಸುರಶೆಟ್ಟಿಕೊಪ್ಪ 1325,ಬೆಲವಂತರ 1162, ಮುತ್ತಗಿ 1158 ಸೇರಿದಂತೆ 28 ಗ್ರಾಮ ಪಂಚಾಯತಿಗಳಲ್ಲಿ 85650 ಮಾನವ ದಿನಗಳು ಸೃಜನೆಯಾಗಿವೆ.
"ಗ್ರಾಮದ ಕೆರೆಕಟ್ಟೆ ಕೆರೆ ಪುನಶ್ಚೇತನಗೊಳ್ಳಿಸಲು 125 ಕಾರ್ಮಿಕರು ಕೆಲಸ ಮಾಡುತ್ತಿದ್ದೇವೆ ಕೂಲಿ ನಂಬಿ ಬದುಕುವವರಿಗೆ ಯೋಜನೆ ಅನುಕೂಲವಾಗಿದೆ ವಿಬಿ ರಾಮಜೀ ಕೂಲಿ ಹಣ ನೇರವಾಗಿ ದುಡಿದವರ ಖಾತೆಗೆ ಜಮೆಯಾಗುತ್ತದೆ.ಗ್ರಾಮದ ಎಂದು ತಾಲ್ಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ನೂತನವಾಗಿ ರಚಿಸಿದ ಉಡಚಮ್ಮದೇವಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀಕಾಂತ ಕಂಪ್ಲಿ ತಿಳಿಸಿದರು"
"ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ನಗರಗಳತ್ತ ವಲಸೆ ಹೋಗುವದು ತಡೆಗಟ್ಟಲ್ಲು ಸರ್ಕಾರ 125 ದಿನಗಳ ಉದ್ಯೋಗ ನೀಡಿ ದಿನಕ್ಕೆ 382 ರೂ ಕೂಲಿ ನೀಡುತ್ತಿದೆ. ಜಿಲ್ಲೆಯ 7 ತಾಲ್ಲೂಕಗಳ ಪೈಕಿ ಕಲಘಟಗಿ ತಾಲ್ಲೂಕಿನಲ್ಲಿ ಹೆಚ್ಚು ಬೇಡಿಕೆ ಇದ್ದು ಜುಲೈ 1 ರಿಂದ 85,650 ಮಾನವ ದಿನಗಳ ಸೃಜಿಸಿದ ಮೊದಲ ತಾಲ್ಲೂಕ ನಮ್ಮದಾಗಿದೆ ಎಂದು ತಾಲ್ಲೂಕ ಪಂಚಾಯತಿ ಇಓ ಪರಶುರಾಮ ಸಾವಂತ ತಿಳಿಸಿದರು
📲Get App