🔥 ट्रेंडिंग காந்தி ஜெயந்தி: நாளை மதுக்கடைகளை மூட ஆ... त्रिब्यून में "फूड लाइसेंस निलंबित" खो... CAPF के अपमानजनक मामले का स्थानांतरण प... सुप्रीम कोर्ट ने यूपी पुलिस पर कवर‑अप... चंडीगढ़ पुलिस ने 30 सितंबर 2026 को माम... IIFA अवॉर्ड्स 2027 अबू धाबी में: मेजबा...
01 अक्टू. 2026•
ગુજરાતી मराठी ਪੰਜਾਬੀ বাংলা

ಬೀದರ

✍️ रिपोर्टर: Basavaraj pujari 🗓 01 अक्टू. 2026, 06:30 AM 👁 11
यहाँ देखें: 📘 Facebook 📷 Instagram
शेयर करें: 💬 WhatsApp 📘 Facebook 𝕏 Post

ಬೀದರ: ಭಾಲ್ಕಿ ತಾಲ್ಲೂಕಿನ ಅಕ್ಕ ಪಡೆ ಅರಿವು ಕಾರ್ಯಕ್ರಮ

ಬೀದರ: ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ವಿಶೇಷ ಮಹಿಳಾ ಪೊಲೀಸ್ ತಂಡ ಭಾಲ್ಕಿ ತಾಲ್ಲೂಕಿನಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯರ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕುರಿತು ಅಕ್ಕ ಪಡೆ ಕಾರ್ಯಕ್ರಮವನ್ನು ನಡೆಸಿತು. ಈ ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸ್ ವರಿಷ್ಠಾಧಿಕಾರಿ, ಬೀದರ ಜಿಲ್ಲೆ, ಮಹಿಳೆಯರ, ಮಕ್ಕಳ ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸುರಕ್ಷತೆ ಕುರಿತು ವಿಶೇಷ ಕಾಯ್ದುಕೊಂಡು ತಾಲ್ಲೂಕು ಮಟ್ಟದಲ್ಲಿ ನೇಮಕಗೊಂಡ ಅಕ್ಕ ಪಡೆ ಸಿಬ್ಬಂದಿಗೆ ಕಾರ್ಯ ನಿರ್ವಹಣೆಗಾಗಿ ಮಾರ್ಗದರ್ಶನ ನೀಡಿದರು.

ಭಾಲ್ಕಿ ತಾಲ್ಲೂಕಿನ ಅಕ್ಕ ಪಡೆ ಬಸ್ ನಿಲ್ದಾಣದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಮಹಿಳಾ ಹಾಗೂ ಮಕ್ಕಳ ದೌರ್ಜನ್ಯ, ಬಾಲ್ಯ ವಿವಾಹ ನಿಷೇಧ ಕಾಯ್ದೆ, POCSO ಕಾಯ್ದೆ, ಮಹಿಳಾ ಸುರಕ್ಷತೆ, ಸಂಚಾರಿ ಸುರಕ್ಷತಾ ನಿಯಮಗಳು ಹಾಗೂ ಸಹಾಯವಾಣಿ ಸಂಖ್ಯೆ 1098, 112 ಮತ್ತು ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930 ಕುರಿತು ಅರಿವು ಮೂಡಿಸಲಾಗಿತ್ತು. ಮಹಿಳೆಯರಿಗೆ ತಮ್ಮ ಒಡವೆಗಳ ಮೇಲೆ ಗಮನವಿಟ್ಟು ಸಂಚರಿಸುವ ಬಗ್ಗೆ ತಿಳಿಸಿ, ಭಯಪಡಬೇಕಾದ ಅಗತ್ಯವಿಲ್ಲದಂತೆ ಸಕಾರಾತ್ಮಕ ಭಾವನೆ ಮೂಡಿಸುವ ಮೂಲಕ 24x7 ಸುರಕ್ಷತೆ ಒದಗಿಸುವ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಲಾಯಿತು.
📲Get App