🔥 ट्रेंडिंग અરવલ્લીના-: મોડાસામાં બંધ મકાનમાં ચોરી... Romantic Comedy ‘Bethlehem Family Unit... ಕಲಿಕೆಯಲ್ಲಿ ಆಸಕ್ತಿ, ಶಿಸ್ತು ಯಶಸ್ಸಿಗೆ ಪೂರ... Veteran Actress Sundarashree Hospitali... જયુબેલી બાગ આરોગ્ય કેન્દ્રમાં ગાંધી જય... Star All-Rounder Walks Off Mid-Over, S...
01 अक्टू. 2026•
ગુજરાતી मराठी ਪੰਜਾਬੀ বাংলা

ಬೀದರ ನ್ಯೂಸ್

✍️ रिपोर्टर: Basavaraj pujari 🗓 01 अक्टू. 2026, 06:14 PM 👁 15
शेयर करें: 💬 WhatsApp 📘 Facebook 𝕏 Post

ಬೀದರ: ಘನ ತ್ಯಾಜ್ಯ ವಾಹನಗಳಲ್ಲಿ ಕನ್ನಡ ಧ್ವನಿ ಸುರಳಿಗೆ ಡಾ. ಎಸ್.ಎಂ. ಜನವಾಡಕರ್ ಒತ್ತಾಯ

ಬೀದರ: ಬೀದರ ನಗರ ಮತ್ತು ಜಿಲ್ಲೆಯ ಎಲ್ಲಾ ತಾಲೂಕುಗಳ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಘನ ತ್ಯಾಜ್ಯ ಸಂಗ್ರಹ ವಾಹನಗಳಲ್ಲಿ ಕನ್ನಡ ಭಾಷೆಯ ಧ್ವನಿ ಸುರಳಿಯನ್ನು ಬಳಸಬೇಕು ಎಂದು ಹಿರಿಯ ಸಾಹಿತಿ ಡಾ. ಎಸ್.ಎಂ. ಜನವಾಡಕರ್ ಒತ್ತಾಯಿಸಿದ್ದಾರೆ.

ಡಾ. ಎಸ್.ಎಂ. ಜನವಾಡಕರ್ ಅವರು ಬೀದರ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ, ಪ್ರಸ್ತುತ ಬೀದರ ನಗರದಲ್ಲಿ ಬೆಳಿಗ್ಗೆ ಸಂಚರಿಸುವ ಘನ ತ್ಯಾಜ್ಯ ಸಂಗ್ರಹ ವಾಹನಗಳಲ್ಲಿ ನಾಗರಿಕರಿಗೆ ಮಾಹಿತಿ ನೀಡಲು ಹಿಂದಿ ಧ್ವನಿ ಸುರಳಿಯನ್ನು ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕನ್ನಡ ನಾಡಿನಲ್ಲಿ ಕನ್ನಡದ ಬದಲು ಹಿಂದಿ ಧ್ವನಿ ಸುರಳಿಯನ್ನು ಬಳಸಲಾಗುವುದರಿಂದ ಕನ್ನಡಿಗರ ಮನಸ್ಸಿಗೆ ನೋವುಂಟಾಗುತ್ತಿದ್ದು, ಇದು ಕನ್ನಡ ನೆಲದಲ್ಲಿದ್ದೇವೆಯಾ ಅಥವಾ ಹಿಂದಿ ಭಾಷೆಯ ಪ್ರದೇಶದಲ್ಲಿದ್ದೇವೆಯಾ ಎಂಬ ಭಾವನೆ ಮೂಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಅವರು, ಘನ ತ್ಯಾಜ್ಯ ಸಂಗ್ರಹ ಕುರಿತು ಜಾಗೃತಿ ಮೂಡಿಸುವ ಧ್ವನಿ ಸಂದೇಶಗಳನ್ನು ಕನ್ನಡ ನಾಡಿನ ನಾಡು-ನುಡಿಯಲ್ಲಿ ಪ್ರಸಾರ ಮಾಡಿದರೆ ಸಾರ್ವಜನಿಕರಿಗೆ ಅರ್ಥವಾಗುವುದು ಮತ್ತು ಕನ್ನಡಿಗರಲ್ಲಿ ಹೆಮ್ಮೆ ಹಾಗೂ ತೃಪ್ತಿ ಮೂಡುವುದು ತಿಳಿಸಿದರು. ಆದ್ದರಿಂದ ಬೀದರ ನಗರ ಮತ್ತು ಜಿಲ್ಲೆಯ ಎಲ್ಲಾ ಸಂಬಂಧಿತ ಸಂಸ್ಥೆಗಳ ಘನ ತ್ಯಾಜ್ಯ ಸಂಗ್ರಹ ವಾಹನಗಳಲ್ಲಿ ಹಿಂದಿ ಧ್ವನಿ ಸುರಳಿಯನ್ನು ತಕ್ಷಣ ಸ್ಥಗಿತಗೊಳಿಸಿ, ಕನ್ನಡ ಧ್ವನಿ ಸುರಳಿಯನ್ನು ಬಳಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಬೇಕಾಗಿ ಡಾ. ಎಸ್.ಎಂ. ಜನವಾಡಕರ್ ಮನವಿ ಮಾಡಿದ್ದಾರೆ.
📲Get App