ರಸ್ತೆ ಕಾಮಗಾರಿಗೆ ಅನುದಾನ ನೀಡಲು ಮನವಿ
ಮಹೇಶನಗರದ ಪ್ರಮುಖ ರಸ್ತೆ ಕಾಮಗಾರಿಗೆ ಅನುದಾನ ನೀಡಲು ಮನವಿ
ಬೀದರ್: ಬೀದರ್ ಮಹಾನಗರ ಪಾಲಿಕೆಯ ವಾರ್ಡ್ ನಂ. 27ರ ಮಹೇಶನಗರ ಬಡಾವಣೆಯ ಮುಖ್ಯ ರಸ್ತೆ ಹಾಗೂ ಉಪರಸ್ತೆಗಳು ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಡಾವಣೆಯ ಪ್ರಮುಖ ರಸ್ತೆ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿ ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಬೀದರ್ ಉತ್ತರ ಕ್ಷೇತ್ರದ ಶಾಸಕರಾದ ಶ್ರೀ ರಹೀಮ್ ಖಾನ್ ಅವರಿಗೆ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಮನ್ನಳಿ ರಸ್ತೆಯಿಂದ ಅಕ್ಕಮಹಾದೇವಿ ವೃದಾಶರ್ಮಾ(ಸುಮಾರು 850 ಅಡಿ), ಮನ್ನಳಿ ರಸ್ತೆಯಿಂದ ಹನುಮಾನ ಮಂದಿರದವರೆಗೆ (ಸುಮಾರು 700 ಅಡಿ), ಮಂಜುನಾಥ ಶಿವಶೆಟ್ಟಿ ಅವರ ಮನೆ ನಂ. 17-4-243ರಿಂದ ಶರಣಪ್ಪ ಗುಂಪಾ ಅವರ ಮನೆ ನಂ. 17-4-235ರವರೆಗೆ (ಸುಮಾರು 350 ಅಡಿ), ಬಸವರಾಜ ಜಕ್ಕಾ ಅವರ ಮನೆಯಿಂದ ಕುಮಾರಸ್ವಾಮಿ ಹಿರೇಮಠ ಅವರ ಮನೆವರೆಗೆ (ಸುಮಾರು 200 ಅಡಿ) ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಕೋರಿ ಒಟ್ಟು ಸುಮಾರು 1,900 ಅಡಿ ರಸ್ತೆಗಳ ಪುನರ್ ನಿರ್ಮಾಣಕ್ಕೆ ವಿನಂತಿ ಮಾಡಲಾಗಿದೆ. ಹದಗೆಟ್ಟಿರುವ ರಸ್ತೆಗಳಿಂದ ಮಳೆಗಾಲದಲ್ಲಿ ಸಂಚಾರ ಕಷ್ಟಕರವಾಗಿದ್ದು, ವಾಹನ ಸವಾರರು, ವೃದ್ಧರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹಿರಿಯರು ಸೇರಿದಂತೆ ಹಲವು ನಿವಾಸಿಗಳು ಈ ಮನವಿಯಲ್ಲಿ ಹಾಜರಿದ್ದರು.