🔥 TRENDING ‘First Christmas’ Film to Start Shooti... ‘Oka Court Case’ Spotlight on Contempo... Meghalaya aims for $16 billion economy... Bangladesh Measles Outbreak Claims 9 L... Dr. Vaidehi Taman Delves into Kashmir’... Alliance City Launches Three New Resid...
28 Sep 2026•
ગુજરાતી मराठी ਪੰਜਾਬੀ বাংলা
ಅರಕೇರಾ ತಾಲೂಕಿನ ಗಾಣಧಾಳ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ತಹಸೀಲ್ದಾರರಿಗೆ ಮನವಿ

ಅರಕೇರಾ ತಾಲೂಕಿನ ಗಾಣಧಾಳ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ತಹಸೀಲ್ದಾರರಿಗೆ ಮನವಿ

✍️ Reporter: Khajahussain baba Jalahalli 🗓 28 Sep 2026, 03:56 PM 👁 19
Share: 💬 WhatsApp 📘 Facebook 𝕏 Post
ಅರಕೇರಾ | ಬ್ರೇಕಿಂಗ್ ನ್ಯೂಸ್

ಅರಕೇರಾ ತಾಲೂಕಿನ ಗಾಣಧಾಳ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ತಹಸೀಲ್ದಾರರಿಗೆ ಮನವಿ

ಅರಕೇರಾ, ಸೆ.28: ರಾಯಚೂರು ಜಿಲ್ಲೆಯ ಅರಕೇರಾ ತಾಲೂಕಿನ ಗಾಣಧಾಳ ಗ್ರಾಮ ಪಂಚಾಯಿತಿಯನ್ನು ಅರಕೇರಾ ತಾಲೂಕಿನಲ್ಲಿಯೇ ಮುಂದುವರಿಸುವುದರ ಜೊತೆಗೆ, ಗಾಣಧಾಳ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಿ ನಾಡ ಕಚೇರಿ ಸ್ಥಾಪಿಸಬೇಕೆಂದು ಒತ್ತಾಯಿಸಿ ಗಾಣಧಾಳ ಗ್ರಾಮದ ಸಮಸ್ತ ಗ್ರಾಮಸ್ಥರು ಅರಕೇರಾ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಗಾಣಧಾಳ ಗ್ರಾಮವು ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಭೌಗೋಳಿಕವಾಗಿ ಸೂಕ್ತ ಕೇಂದ್ರ ಸ್ಥಳದಲ್ಲಿದ್ದು, ಈಗಾಗಲೇ ಗ್ರಾಮ ಪಂಚಾಯಿತಿ ಕಚೇರಿ, ಸಂತೆ ಮಾರುಕಟ್ಟೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಚೆ ಕಚೇರಿ, ಬ್ಯಾಂಕ್, ಪಶು ಆಸ್ಪತ್ರೆ, ಪ್ರೌಢಶಾಲೆ, ಗ್ರಂಥಾಲಯ ಹಾಗೂ ಇ-ಬಿ ಸ್ಟೇಷನ್ ಸೇರಿದಂತೆ ಹಲವು ಪ್ರಮುಖ ಸೌಲಭ್ಯಗಳನ್ನು ಹೊಂದಿದೆ. ಹೀಗಾಗಿ ಗಾಣಧಾಳವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಿದರೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆಡಳಿತಾತ್ಮಕ ಸೇವೆಗಳು ಮತ್ತಷ್ಟು ಸುಲಭವಾಗಿ ದೊರೆಯಲಿವೆ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.

ಗಾಣಧಾಳ ಗ್ರಾಮದಿಂದ ಅರಕೇರಾ ತಾಲೂಕು ಕೇಂದ್ರವು ಸುಮಾರು 21 ಕಿಲೋಮೀಟರ್ ದೂರದಲ್ಲಿದೆ. ಜಾತಿ, ಆದಾಯ, ವಾಸಸ್ಥಳ ಸೇರಿದಂತೆ ವಿವಿಧ ಪ್ರಮಾಣಪತ್ರಗಳನ್ನು ಪಡೆಯಲು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅರಕೇರಾಗೆ ತೆರಳಬೇಕಾಗಿದೆ. ರೈತರು ಕೃಷಿ ಸಂಬಂಧಿತ ಕೆಲಸಗಳಿಗಾಗಿ ಕೂಡ ತಾಲೂಕು ಕೇಂದ್ರಕ್ಕೆ ಪದೇಪದೇ ಭೇಟಿ ನೀಡಬೇಕಾಗಿರುವುದರಿಂದ ಸಮಯ ಮತ್ತು ಹಣ ವ್ಯಯವಾಗುತ್ತಿದ್ದು, ಸಾರ್ವಜನಿಕರು ಅನಾನುಕೂಲ ಎದುರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಗಾಣಧಾಳ ಗ್ರಾಮದ ಭೌಗೋಳಿಕ ಮತ್ತು ಆಡಳಿತಾತ್ಮಕ ಮಹತ್ವವನ್ನು ಪರಿಗಣಿಸಿ, ಗಾಣಧಾಳ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಿ, ಇಲ್ಲಿ ನಾಡ ಕಚೇರಿ ಸ್ಥಾಪಿಸಲು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಬೇಕು ಎಂದು ತಹಸೀಲ್ದಾರರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಮಾನಯ್ಯ ಮಾಲಿ ಪಾಟೀಲ್ ಗಾಣಧಾಳ, ಕೊಳಪ್ಪ ದೇಸಾಯಿ ಕಕ್ಕಲದೊಡ್ಡಿ, ಮಲ್ಲಿಕಾರ್ಜುನ ಯಲಗಟ್ಟಿ, ಗಾಣಧಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರು, ನರಸಣ್ಣ ನಾಯಕ ಗಾಣಧಾಳ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಬಸವರಾಜ ನಾಯಕ ಕಾವಲಿ ಗಾಣಧಾಳ, ಶಿವರಾಜ ನಾಯಕ ಜಿಲ್ಲೆ ಕಮಲದಿನ್ನಿ, ಸೋಫಿ ಸಾಹೇಬು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ಬಸವರಾಜ ದೊಡ್ಮನೆ ಗಾಣಧಾಳ, ಶಿವರಾಜ ನಾಯಕ ಮಂಡಲಗುಡ್ಡ, ಶಿವಪ್ಪ ನಾಯಕ ಕಕ್ಕಲದೊಡ್ಡಿ, ವಾಲ್ಮೀಕಿ ಸ್ವಾಭಿಮಾನಿ ಚಳವಳಿ ಸಂಘದ ತಾಲೂಕು ಅಧ್ಯಕ್ಷರು ದೇವದುರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ
📲Get App