🔥 TRENDING બીનવાદામાં રાજા ગણપતિ બાપ્પાની ભવ્ય વિ... 7,540 Trees Targeted for Cutting in Ch... Telangana presses Karnataka to release... Fatehabad Police Arrest Rajasthan Fugi... Rajasthan High Court directs 25% of wi... Body of Factory Worker Found Near Shop...
23 Sep 2026
ગુજરાતી मराठी ਪੰਜਾਬੀ বাংলা

ಎನ್‌ಎಸ್‌ಎಸ್ ದಿನಾಚರಣೆ: ಸಾಮಾಜಿಕ ಸೇವೆಗೆ ವಿದ್ಯಾರ್ಥಿಗಳು ಮುಂದಾಗಲಿ-ಶ್ರೀ ಲೋಕೇಶ್ ನಾಯ್ಕ

✍️ Reporter: Viswanatha D R 🗓 23 Sep 2026, 02:15 PM 👁 7
Share: 💬 WhatsApp 📘 Facebook 𝕏 Post
ಹರಿಹರ, ಸೆ. 23: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹರಿಹರದಲ್ಲಿ ಬುಧವಾರ ರಾಷ್ಟ್ರೀಯ ಸೇವಾ ಯೋಜನಾ (ಎನ್‌ಎಸ್‌ಎಸ್) ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಕುಂತಲಾ ಎನ್. ಮಾತನಾಡಿ, ತಾವು ಅಧಿಕಾರ ಸ್ವೀಕರಿಸಿದ ನಂತರ ಕಾಲೇಜು ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳು ಶಿಬಿರಾಧಿಕಾರಿಗಳಿಗೆ ಸಹಕಾರ ನೀಡಿ ಎನ್‌ಎಸ್‌ಎಸ್ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಹಾಯಕ ಪ್ರಾಧ್ಯಾಪಕ ಹಾಗೂ ಅತ್ಯುತ್ತಮ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀ ಲೋಕೇಶ್ ನಾಯ್ಕ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಅರ್ಥ, ಉದ್ದೇಶ ಮತ್ತು ಸ್ವರೂಪವನ್ನು ವಿವರಿಸಿದರು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಎನ್‌ಎಸ್‌ಎಸ್‌ನ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಶ್ರೀ ಯುತರನ್ನು ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕ–1ರ ಕಾರ್ಯಕ್ರಮಾಧಿಕಾರಿ ಶ್ರೀ ಯೋಗೇಶ ಕೆ. ಜೆ., ಘಟಕ–2ರ ಕಾರ್ಯಕ್ರಮಾಧಿಕಾರಿ ಶ್ರೀ ಹನುಮಂತಪ್ಪ ಕೆ. ವೈ. ಸೇರಿದಂತೆ ಉಪನ್ಯಾಸಕರಾದ ಡಾ. ಗಂಗರಾಜು.ಎಸ್., ಡಾ. ಗೌರಮ್ಮ ಎಸ್. ಎಂ., ಡಾ. ಶಮಾ ತುಮ್ಮಿನಕಟ್ಟಿ, ರಾಘವೇಂದ್ರ, ಟಿ. ಜಿ.ಮಲ್ಲಿಕಾರ್ಜುನ ಜವಳಿ ಹಾಗೂ ವಿಶ್ವನಾಥ ಡಿ. ಆರ್. ಉಪಸ್ಥಿತರಿದ್ದರು.

ಮೇಘನ ಎಚ್. ಟಿ. ಸ್ವಾಗತಿಸಿದರು. ಗಾಯತ್ರಿ ಮತ್ತು ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಹನುಮಂತಪ್ಪ ಕೆ. ವೈ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕೃತಿ ಜಿ. ಪಾವರ್ ನಿರೂಪಿಸಿದರು. ರಕ್ಷಿತಾ ರಟ್ಟಿಹಳ್ಳಿ ವಂದನಾರ್ಪಣೆ ಸಲ್ಲಿಸಿದರು.ಕಾರ್ಯಕ್ರಮ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಕ್ವಿಸ್ ಕಾರ್ಯಕ್ರಮ ಮಾಡಲಾಯಿತು
📲Get App