ಕೃಷಿ ಮೇಳದಲ್ಲಿ ರೈತರು ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಿ: ಅಂಚಟಗೇರಿ
ಕಲಘಟಗಿ ಪಟ್ಟಣದ ಕೃಷಿ ಇಲಾಖೆ ಕಚೇರಿ ಸಭಾಭವನದಲ್ಲಿ ತಾಲ್ಲೂಕ ಕೃಷಿಕ ಸಮಾಜದ ಅಧ್ಯಕ್ಷ ಮುಕುಂದಪ್ಪ ಅಂಚಟಗೇರಿ ಮಾಹಿತಿ ನೀಡಿದರು.
ಕಲಘಟಗಿ: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ.25 ರಿಂದ 28 ರವರಿಗೆ ಮೂರು ದಿನಗಳ ಕಾಲ ನಡೆಯಲಿರುವ ರೈತರ ಹಬ್ಬವಾದ ಕೃಷಿ ಮೇಳದಲ್ಲಿ ತಾಲ್ಲೂಕಿನ ರೈತರು ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಿ ಎಂದು ತಾಲ್ಲೂಕ ಕೃಷಿಕ ಸಮಾಜದ ಅಧ್ಯಕ್ಷ ಮುಕುಂದಪ್ಪ ಅಂಚಟಗೇರಿ ಹೇಳಿದರು.
ಪಟ್ಟಣದ ಕೃಷಿ ನಿರ್ದೇಶಕ ಕಚೇರಿ ಸಭಾಭವನದಲ್ಲಿ ಕರೆದ ಕೃಷಿಕ ಸಮಾಜದ ಸಭೆಯಲ್ಲಿ ಮಾಹಿತಿ ನೀಡಿದರು.
ಕೃಷಿ ಮೇಳದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಯಂತ್ರೋಪಕರಣ, ಸಮಗ್ರ ಕೃಷಿ ಪದ್ಧತಿ ಅಳವಡಿಕೆ,ಆಧುನಿಕ ತಂತ್ರಜ್ಞಾನದ ಮಾಹಿತಿ ಇನ್ನಿತರ ರೈತ ಉಪಯೋಗಿ ಸಲಕರಣೆ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಕೃಷಿಕ ಸಮಾಜದ ತಾಲ್ಲೂಕ ಉಪ್ಪಾಧ್ಯಕ್ಷ ಉಳವಪ್ಪ ಬಳಿಗೇರ ಮಾತನಾಡಿ ಪ್ರಸಕ್ತ ವರ್ಷದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬೆಳೆಗಳು ಹಸಿರಿನಿಂದ ಕಾಣುತಿದ್ದು ಇಳುವರಿ ಕುಂಟಿತವಾಗಿ ರೈತ ಸಮುದಾಯ ಸಂಕಷ್ಟದಲ್ಲಿದ್ದಾರೆ ತಾಲ್ಲೂಕ ಬರಗಾಲ ಅಂತಾ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನೇಗೌಡ್ರ ಮಾತನಾಡಿ ಬರಪೀಡಿತ ತಾಲ್ಲೂಕ ಘೋಷಣೆಯಾಗಲು ಸರ್ಕಾರದ ಪ್ರಮುಖ ಮಾನದಂಡದ ಅವುಗಳು ಅನ್ವಯವಾಗಬೇಕು ಎಂದರು.
ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕರಾದ ನೇಮಕವಾದ ಮಂಜುನಾಥ ಮುರಳ್ಳಿ ಅವರನ್ನ ಸನ್ಮಾನಿಸಿದರು.
ಕೃಷಿಕ ಸಮಾಜದ ಮುಖಂಡರಾದ ವೃಷಭೇಂದ್ರ ಪಟ್ಟಣಶೆಟ್ಟಿ, ವಿ.ಬಿ ಶಿವನಗೌಡ್ರ,ಮಂಜುನಾಥ ದನಿಗೊಂಡ, ಶಂಕ್ರಣ್ಣ ರಾಯನಾಳ,ಯಲ್ಲಪ್ಪ ಚೌರಗಿ,ಬಸವರಾಜ ಅಗಡಿ,ಸಂಗಮೇಶ ನಿಂಬಣ್ಣನವರ,ಶಂಕರಗೌಡ ಜಗಳಪ್ಪಗೌಡ್ರ,ಶಂಕ್ರಯ್ಯ ಅಣ್ಣಿಗೇರಿ,ಶಂಕರಗೌಡ ಮುದಿಗೌಡ್ರ,ಮೈಲಾರಲಿಂಗಪ್ಪ ಕಂಪ್ಲಿಕೊಪ ಇದ್ದರು.